Breaking News

ಫೆ.24ರಂದು ಸಚಿವ ಬಿ.ನಾಗೇಂದ್ರ ಅವರಿಂದ ಎಸ್.ಸಿ., ಎಸ್.ಟಿ., ಅಲೆಮಾರಿಗಳ ಜಾಗೃತಿ ಸಮಾವೇಶ ಉದ್ಘಾಟನೆ – ವೈ.ಶಿವಕುಮಾರ್

SC, ST, Nomads Awareness Conference inaugurated by Minister B. Nagendra on February 24 – Y. Shivakumar

ಬಳ್ಳಾರಿ: ಸ್ವಾತಂತ್ರ್ಯ ಲಭಿಸಿ 77 ಸಂವತ್ಸರಗಳು ಕಳೆದರೂ ಇಂದಿಗೂ ಎಸ್.ಸಿ., ಎಸ್.ಟಿ., ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಸ್ವಾತಂತ್ರ್ಯ ಲಭಿಸಿಲ್ಲ. ಈ ನಿಟ್ಟಿನಲ್ಲಿ ಫೆ.24 ರಂದು ಇಲ್ಲಿನ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿರುವ ಎಸ್.ಟಿ., ಎಸ್.ಟಿ., ಅಲೆಮಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದು, ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ಧಿ ಸಚಿವರು, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ನಾಗೇಂದ್ರ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶಿವಕುಮಾರ್ ವೈ. ತಿಳಿಸಿದರು.

ಪತ್ರಿಕಾ ಭವನದಲ್ಲಿ ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ಎಸ್.ಸಿ. ಮತ್ತು ಎಸ್.ಟಿ. ಅಲೆಮಾರಿ ಸಮುದಾಯಗಳಲ್ಲಿ ಒಟ್ಟು 73 ಸಮುದಾಯಗಳಿವೆ. ಹಿಂದುಳಿದ ಅಲೆಮಾರಿಗಳು ಒಳಗೊಂಡಂತೆ ಒಟ್ಟು 120 ಸಮುದಾಯಗಳಿವೆ. ಇದುವರೆಗೂ ಈ ಸಮುದಾಯಗಳಿಗೆ ಸಿಗಬೇಕಾದ ಸಾಮಾಜಿಕ ನ್ಯಾಯದ ಸ್ಥಾನ ಮಾನ ಲಭಿಸಿಲ್ಲ. ಮುಂದುವರಿದ ಕೆಲ ಸಮುದಾಯಗಳು ಈ ಶೋಷಿತ ಸಮುದಾಯಗಳ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು ರಾಜಕೀಯ ಹಾಗೂ ಔದ್ಯೋಗಿಕ ಸ್ಥಾನ ಮಾನ ಪಡೆದು ವಂಚಿಸುತ್ತಿವೆ. ನಾವು ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಅತ್ಯಂತ ದುರ್ಭರ ಜೀವನ ನಡೆಸುತ್ತಿದ್ದೇವೆ. ನಮಗೆ ಇದುವರೆಗೂ ಮೀಸಲಾತಿಗಳಡಿ ಯಾವುದೇ ಸೌಲಭ್ಯಗಳೂ ಸಿಗುತ್ತಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಉಪಮುಖ್ಯಮಂತ್ರಿ ಡಿಕೆ ಶಿಕುಮಾರ್ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ಧಿ ಸಚಿವರು, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ನಾಗೇಂದ್ರ ಅವರಿಗೆ ನಮ್ಮ ಸಮುದಾಯಗಳ ನೋವು ಮತ್ತು ಸಂಕಷ್ಟಗಳ ಅರಿವಿದೆ. ಖಂಡಿತವಾಗಿ ಈ ಸರ್ಕಾರದಲ್ಲಿ ನಮಗೆ ನ್ಯಾಯ ಸಿಗುವ ಎಲ್ಲ ಭರವಸೆ ಇದೆ. ಹೀಗಾಗಿ, ಅಂದು ಸಚಿವ ಬಿ.ನಾಗೇಂದ್ರ ಅವರು ಸಮಾವೇಶ ಉದ್ಘಾಟಿಸಿ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆ ಇದೆ ಎಂದು ತಿಳಿಸಿದರು.

ಸರ್ಕಾರಕ್ಕೆ ಮನವಿ ಮಾಡುವ ಪ್ರಮುಖ ಬೇಡಿಕೆಗಳೆಂದರೆ ಕಾಂತರಾಜ ಆಯೋಗ ವರದಿ ಜಾರಿಗೊಳಿಸುವುದು, ಎಸ್.ಸಿ., ಎಸ್.ಟಿ., ಅಲೆಮಾರಿಗಳಿಗೆ ವಸತಿ ಸೌಕರ್ಯ ಕಲ್ಪಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್.ಸಿ., ಎಸ್.ಟಿ., ಅಲೆಮಾರಿಗಳಿಗಾಗಿ ಪ್ರತ್ಯೇಕ ಆಯೋಗ ರಚಿಸುವುದು, ರಾಜಕೀಯ, ಆರ್ಥಿಕ ಶೈಕ್ಷಣಿಕ, ಔದ್ಯಮಿಕ ಹಾಗೂ ಸಾಮಾಜಿಕ ಮೀಸಲಾತಿ ಕಲ್ಪಿಸುವುದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಅನುದಾನ ಒದಗಿಸುವುದು, ಪ್ರತಿ ಜಿಲ್ಲೆಯಲ್ಲಿ 5 ಕೋಟಿ ರೂ.ವೆಚ್ಚದ ಸಮುದಾಯ ಭವನ ನಿರ್ಮಾಣ ಮಾಡುವುದು, ಸಮುದಾಯದ ಜನರಿಗೆ ಮನೆ ಕಟ್ಟಲು ತಲಾ 7.5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೂ ಒಡೆತನ ಯೋಜೆಗೆ ರೂ. 200 ಕೋಟಿ ಮೀಸಲಿಡುವುದು ಸೇರಿದಂತೆ ಹಲವಾರು ಬೇಡಿಕೆಗಳಿವೆ ಎಂದರು.

ಜಿಲ್ಲೆಯಲ್ಲಿ ನಮ್ಮ ಸಮುದಾಯದ ಜನಸಂಖ್ಯೆ 3.5 ಲಕ್ಷ ಇದೆ. ಇಂದಿಗೂ ಅನೇಕ ಕುಟುಂಬಗಳು ಟೆಂಟ್ ಗಳು, ಗುಡಿಸಲುಗಳಲ್ಲಿ ಜೀವನ ನಡೆಸುತ್ತಿವೆ. ಧ್ವನಿ ಇಲ್ಲದ ಸಮುದಾಯಗಳಿಗೆ ಈ ಸರ್ಕಾರ ಧ್ವನಿ ನೀಡುತ್ತದೆ ಎನ್ನುವ ನಂಬಿಕೆ ಇದೆ. ಅಂದು ಐದು ಸಾವಿರಕ್ಕೂ ಅಧಿಕ ಜನಸಂಖ್ಯೆ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ. ಶಾಸಕರಾದ ನಾರಾ ಭರತ್ ರೆಡ್ಡಿ, ಬಿಎಂ ನಾಗರಾಜ್, ಇ.ತುಕಾರಾಮ್, ಕೋಲಾರ ಶಾಸಕ ಕೊತ್ತನೂರು ಮಂಜುನಾಥ್, ಕಂಪ್ಲಿ ಶಾಸಕ ಜೆಎನ್ ಗಣೇಶ್, ಮಾಜಿ ಸಂಸದ ವಿಎಸ್ ಉಗ್ರಪ್ಪ, ವಿಧಾನ ಪರಿಷತ್ ಸದಸ್ಯ ಹೆಚ್.ಪಿ.ಸುದಾಮ್ ದಾಸ್ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಪ್ರಸಾದ್, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಶ್ವೇತಾ ಸೋಮು, ಧುರೀಣರಾದ ಎ.ಮಾನಯ್ಯ, ಮುಂಡ್ರಿಗಿ ನಾಗರಾಜ್, ಡಿ.ಮಲ್ಲಿಕಾರ್ಜುನ, ಕೆಸಿ ಸುರೇಶ್ ಬಾಬು, ಕೆಎಂ ರಾಮಚಂದ್ರಪ್ಪ, ಸುರೇಶ್ ನಾಯಕ್, ಸಣ್ಣ ಮಾರೆಪ್ಪ, ಬಸವರಾಜ ನಾರಾಯಣಾಕರ್, ವಿ.ರಾಮುಡು, ಗಂಗಪ್ಪ, ದೊಡ್ಡ ಎರಿಸ್ವಾಮಿ, ಕೊಡ್ಲೆ ಮಲ್ಲಿಕಾರ್ಜುನ, ಡಾ.ಜಂಬುನಾಥ್, ಡಿ.ಹೊನ್ನೂರುಸ್ವಾಮಿ, ಕೆ.ವೀರೇಶ್, ಎಂ.ಗಂಗಾಧರ್, ಮದ್ದಿ ದೊಡ್ಡ ಚಮಲಪ್ಪ, ಎಸ್.ಕೆ.ಚೌಡಪ್ಪ, ಮುತ್ತುರಾಜ್, ಶೈಲಾ ಸೀತಾರಾಮ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಂಘಟನೆಯ ಪದಾಧಿಕಾರಿಗಳಾದ ಸಿ.ಆನಂದ್ ಕುಮಾರ್, ಡಿ.ರಂಗಯ್ಯ, ವೈ.ವೆಂಕಟಪ್ಪ, ಬಳ್ಳಾರಿ ರಾಮು, ಎಸ್.ಸುಬ್ಬಯ್ಯ, ಈರಣ್ಣ ಕೆ., ವೈ.ಕೇಶವರಾಜು, ಬಾಬು ಜಿ., ರಾಮಾಂಜಿನಿ, ಕೆ.ನಾಗರಾಜ್, ಡಿ.ಮಂಜುನಾಥ್, ಕೆ.ಶಂಕರ್, ಮಾರಿ ದೂಪಂ, ಎಂ.ಮಸ್ತಾನಿ ಮತ್ತು ಡಿ.ಶಿವ ಇನ್ನಿತರರು ಇದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.