Wife files case because husband didn't let her eat finger chips during pregnancy; judge shocked.
ಗರ್ಭಿಣಿಯಾಗಿದ್ದಾಗ ಗಂಡ ಫಿಂಗರ್ ಚಿಪ್ಸ್ ತಿನ್ನಲು ಬಿಡಲಿಲ್ಲ ಎಂದು ಹೆಂಡತಿ ಕೇಸ್: ಜಡ್ಜ್ ಶಾಕ್

(ಪೆಸ್ ಬುಕ್ ಕೃಪೆ)
ಬೆಂಗಳೂರು: ಗರ್ಭಿಣಿಯಾಗಿದ್ದಾಗ ಗಂಡ ಫಿಂಗರ್ ಚಿಪ್ಸ್ ತಿನ್ನಲು ಬಿಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿ ಕೇಸ್ ಹಾಕಿದ್ದಾಳೆ. ಈ ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಶಾಕ್ ಜೊತೆ ಏನ್ರೀ ಇದು ತಮಾಷೆ ಎಂದು ಪ್ರಶ್ನೆ ಮಾಡಿದ್ದಾರೆ.
ಎನ್ಐಆರ್ ಪತಿ ಮೇಲೆ ಪತ್ನಿ 498ಎ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಳು. ಗರ್ಭಿಣಿಯಾಗಿದ್ದಾಗ ನನಗೆ ಗಂಡ ಫಿಂಗರ್ ಚಿಪ್ಸ್, ಮಾಂಸದೂಟ, ಅನ್ನ ತಿನ್ನಲು ಬಿಡುತ್ತಿರಲಿಲ್ಲ. ಇದರಿಂದ ನಾನು ಹೆರಿಗೆಯಾಗುವಾಗ ಅಧಿಕ ರಕ್ತದೊತ್ತಡ ಅನುಭವಿಸಿದ್ದೆ ಎಂದು ಹೆಂಡತಿ ದೂರಿನಲ್ಲಿ ವಿವರಿಸಿದ್ದರು.
ಇದನ್ನು ಓದಿದ ನ್ಯಾಯಾಧೀಶರು ಕಾನೂನು ಈ ರೀತಿ ದುರ್ಬಳಕೆಯಾಗುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪತ್ನಿ ಕೇಸ್ ಹಾಕಿರುವುದರಿಂದ ಈಗ ಪತಿಗೆ ಅಮೆರಿಕಾಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇದರಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.ಸೆಕ್ಷನ್ 498 ನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಬುದ್ಧಿ ಹೇಳಿದ್ದಾರೆ. ಇದೀಗ ಪತಿಯ ಮೇಲಿನ ವಿಚಾರಣೆಗೆ ತಡೆ ನೀಡಿರುವ ಕೋರ್ಟ್ ವಿದೇಶಕ್ಕೆ ಹೋಗಲು ಅನುಮತಿ ನೀಡಿದೆ.


