ಜಯದೇವ ಆಸ್ಪತ್ರೆಯ ಖ್ಯಾತ ಹೃದಯರೋಗ ತಜ್ಞರಾದಡಾ. ರಾಜೇಶ ಕಿಶನ್ ರಾವ್‌ಗೆ ಕಾಯಕಯೋಗಿ ಪ್ರಶಸ್ತಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Dr. Rajesh Kishan Rao, renowned cardiologist of Jayadeva Hospital, receives Kayakayogi Award

ಗಂಗಾವತಿ ಮೂಲದ ಹಾಗೂ ಬೆಂಗಳೂರಿನ ಜಯದೇವ ಆಸ್ಪತ್ರೆಯ ಖ್ಯಾತ ಹೃದಯರೋಗ ತಜ್ಞರಾದ ಡಾ. ರಾಜೇಶ ಕಿಶನ್ ರಾವ್ ಅವರಿಗೆ ‘ಕಾಯಕಯೋಗಿ-2026’ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ.

ಜಾಹೀರಾತು

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸೂಲಿಬೆಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಈ ಗೌರವವನ್ನು ನೀಡಲಾಗಿದೆ. ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್ ಕುಮಾರ್ ಹಾಗೂ ಹುಲಿಕಲ್ ನಟರಾಜ್ ಅವರಂತಹ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿರುವುದು ಅದರ ಮಹತ್ವವನ್ನು ಹೆಚ್ಚಿಸಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಗೆ ಈ ಪ್ರಶಸ್ತಿ ಸಂದಿರುವುದು ಶ್ಲಾಘನೀಯ.

Total Views: 0
Share This Article