ಕೊಪ್ಪಳ ನಗರಸಭೆಯ ಆಶ್ರಯ ಯೋಜನೆಗೆ ಜಮೀನು: ಮಾಲೀಕರಿಂದ ಅರ್ಜಿ ಆಹ್ವಾನ

H.Mallikarjun
H.Mallikarjun - Kalyanasiri
1 Min Read
Land for Koppal Municipality's shelter project: Applications invited from owners




ಕೊಪ್ಪಳ ನಗರಸಭೆಯ ಆಶ್ರಯ ಯೋಜನೆಗೆ ಜಮೀನು: ಮಾಲೀಕರಿಂದ ಅರ್ಜಿ ಆಹ್ವಾನ

ಜಾಹೀರಾತು

ಕೊಪ್ಪಳ ಮಾರ್ಚ್ 05 (ಕರ್ನಾಟಕ ವಾರ್ತೆ): ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ರಚನೆ ಮಾಡಲು ಕೊಪ್ಪಳ ನಗರಸಭೆಗೆ ಜಮೀನು ಅವಶ್ಯಕವಾಗಿದ್ದು, ಆಸಕ್ತ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
 ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಆದರೆ, ಸ್ವಂತ ನಿವೇಶನ ಹೊಂದದೇ ಇರುವಂಥಹವರಿಗೆ ನಗರ ಆಶ್ರಯ ಯೋಜನೆ ಅಡಿಯಲ್ಲಿ ಹೊಸದಾಗಿ ಜಮೀನನ್ನು ಖರೀದಿಸಿ ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಬೇಕಾಗಿರುತ್ತದೆ. ಇದಕ್ಕಾಗಿ ಕೊಪ್ಪಳ ನಗರ ಪ್ರದೇಶದಿಂದ 5 ಕಿ.ಮೀಟರ್ ವ್ಯಾಪ್ತಿ ಒಳಗೆ ಜಮೀನಿನ ಅವಶ್ಯಕತೆ ಇರುತ್ತದೆ. ಸರ್ಕಾರದ ದರಕ್ಕೆ ಅನುಗುಣವಾಗಿ ಜಮೀನನ್ನು ಖರೀದಿಗೆ ಕೊಡಲು ಇಚ್ಚೆಯುಳ್ಳ ಜಮೀನಿನ ಮಾಲೀಕರುಗಳು ತಮ್ಮ ಜಮೀನಿನ ಚಾಲ್ತಿ ವರ್ಷದ ಪಹಣಿ ಪತ್ರಿಕೆ, ಫಾರಂ ನಂಬರ್-10, ಕೊಪ್ಪಳ ನಗರ ಪ್ರದೇಶದಿಂದ 5 ಕಿ.ಮೀಟರ್ ಒಳಗೆ ಇರುವ ಬಗ್ಗೆ ದೃಢೀಕರಣ ಪತ್ರ, ಜಮೀನನ್ನು ಆಶ್ರಯ ಯೋಜನೆ ಅಡಿ ಖರೀದಿಗೆ ಕೊಡಲು ಒಪ್ಪಿಗೆ ಇರುವ ಬಗ್ಗೆ ಜಮೀನಿನ ಮಾಲೀಕರು ಹಾಗೂ ಅವರ ಕುಟುಂಬದ ಸರ್ವ ಸದಸ್ಯರುಗಳ ಒಪ್ಪಿಗೆ ಇರುವ ಬಗ್ಗೆ ಛಾಪಾ ಕಾಗದದ ಮೇಲೆ ಒಪ್ಪಿಗೆ ಪತ್ರ, ಈ ಎಲ್ಲಾ ಅಗತ್ಯ ದಾಖಲಾತಿಗಳೊಂದಿ ಮಾರ್ಚ್ 31ರ ಒಳಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article