Breaking News

ಜನರ ಮೌಡ್ಯಗಳನ್ನು ಹೋಗಲಾಡಿಸಲು ಶಿಕ್ಷಣದಿಂದಸಾಧ್ಯ ಶಾಸಕ ಶ್ರೀನಿವಾಸ್

MLA Srinivas says that education can help people get rid of their ignorance

ಜಾಹೀರಾತು


ಕೂಡ್ಲಿಗಿ:ಜನರಲ್ಲಿನರುವ ಮೌಢ್ಯಗಳನ್ನು ಅಳಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು. ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ,ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ವಿಧ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗೆ ಸಭಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅತಿ ಹಿಂದುಳಿದ ತಾಲೂಕಿನಲ್ಲಿ ಶೈಕ್ಷಣಿಕ ವ್ಯವಸ್ಥೆ ಕುಂಠಿತವಾಗಿದೆ.ಇದರಿಂದಾಗಿ ಇಲ್ಲಿನ ಜನರು ದೇವದಾಸಿ ಪದ್ಧತಿ, ಬಾಲ್ಯ ವಿವಾಹ ಹಾಗೂ ಮೂಢ ನಂಬಿಕೆಗಳಿಗೆ ಬಲಿಯಾಗಿದ್ದಾರೆ.ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬಾಲ್ಯ ವಿವಾಹ ಆಗುತ್ತಿರುವುದು ಈ ತಾಲೂಕಿನಲ್ಲಿ ಇದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡಿದ್ದು, ಕಳೆದು ಎರಡು ವರ್ಷಗಳ ನನ್ನ ಅವಧಿಯಲ್ಲಿ ಪ್ರಾಥಮಿಕ, ಪ್ರೌಢ ಹಾಗು ಪದವಿ ಶಿಕ್ಷಣ ಸೇರಿದಂತೆ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಬಹುಪಾಲು ಅನುದಾನ ನೀಡಿರುವುದಾಗಿ ತಿಳಿಸಿದರು. ಹಿಂದುಳಿದ ಈ ತಾಲೂಕನ್ನು ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದುವರೆಯಲು ಅನೇಕ ಕನಸುನ್ನು ಹೊಂದಿದ್ದು ಅದನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಸರ್ವರ ಸಹಕಾರ ಅಗತ್ಯ ಎಂದು ತಿಳಿಸಿದರು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಶುಕೂರ್, ಸದಸ್ಯರಾದ ತಳಾಸ್ ವೆಂಕಟೇಶ್, ಬಾಸೂ ನಾಯ್ಕ್, ಪೂರ್ಯಾ ನಾಯ್ಕ್, ಮುಖಂಡರಾದ ಹಡಗಲಿ ವೀರಭದ್ರಪ್ಪ, ಟೋಪಿ ಸುರೇಶ್, ಬಿ.ಕೆ.ರಾಘವೇಂದ್ರ, ಕಾಟೇರ ಹಾಲೇಶ್, ಸುನೀಲ್ ಗೌಡ, ಬಾಲರಾಜ್, ಡಿ.ಎಚ್.ದುರುಗೇಶ್, ಪಿ.ಪ್ರಶಾಂತ, ಜಿಲಾನ್, ಕುಮಾರಸ್ವಾಮಿ, ಉಪನ್ಯಾಸಕರಾದ ಕಲ್ಲಪ್ಪ, ಉಮೇಶ್, ಅನಿಲ್ ಕುಮಾರ್ ಇದ್ದರು.

About Mallikarjun

Check Also

ಕೂಕನಪಳ್ಳಿಯಲ್ಲಿ ಕುರಿಸಂತೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಪಷ್ಟನೆ

There is no cow in Kookanapalli; MLA Raghavendra Hitnal clarifies ಕೊಪ್ಪಳ ಎಪ್ರಿಲ್ 23 : ತಾಲೂಕಿನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.