Koppal Bandh was a complete success.

ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು, ಸಂಘಟನೆಗಳು ಭಾಗಿ,,,
ಪಂಚಯ್ಯ ಹಿರೇಮಠ ಕೊಪ್ಪಳ.
ಕೊಪ್ಪಳ : ಕೊಪ್ಪಳ ನಗರದಲ್ಲಿ ಬಲ್ಡೋಟಾ ಕಾರ್ಖಾನೆ ನಿರ್ಮಿಸುವುದನ್ನು ವಿರೋಧಿಸಿ ಸೋಮವಾರದಂದು ಕೊಪ್ಪಳ ಬಂದ್ ಯಶಸ್ವಿಯಾಯಿತು.
ಗವಿಮಠದ ಆವರಣದಿಂದ ತಾಲೂಕಾ ಕ್ರೀಡಿಂಗಣದವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
ನಂತರ ಬಹಿರಂಗ ಸಮಾವೇಶದಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಜೀಗಳು ಪಾಲ್ಗೋಂಡು ಮಾತನಾಡಿ ಕೊಪ್ಪಳ ಸುತ್ತ ಮುತ್ತಲು ಈಗಿರುವ ಕಾರ್ಖಾನೆಗಳಿಂದಹೊರ ಸೂಸುವ ಕಪ್ಪು ಹೋಗೆಯಿಂದ ಹಲವಾರು ಜನ, ಜಾನುವಾರೂಗಳು ವಿವಿಧ ರೋಗ ರುಜಿನಗಳಿಂದ ಬಳಲುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಬಲ್ಡೋಟಾ ನಿರ್ಮಾಸಿದರೇ ಅಸ್ತಮಾ, ಕ್ಯಾನ್ಸರ್ ಪೀಡಿತರ ಸಂಖ್ಯೆ ದ್ವಿಗುಣಗೊಳ್ಳಲಿದೆ, ಜೊತೆಗೆ ಯುವಕರು ನಪುಂಸಕರು, ಬುದ್ದಿ ಮಾಂಧ್ಯ ಮಕ್ಕಳು ಜನನವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಸುತ್ತ ಮುತ್ತಲು ಈಗ 202 ಫ್ಯಾಕ್ಟರಿಗಳಿವೆ, ಅದರಲ್ಲಿ 25-30 ಹೊಗೆ ಉಗುಳುವ ಕಾರ್ಖಾನೆಗಳಿದ್ದು, ಈಗ ವಾತಾವರಣದಲ್ಲಿ ಶೇ. 105ರಷ್ಟು ವಾಯು ಮಾಲಿನ್ಯ ಮಲಿನಗೊಂಡಿದ್ದು, ಮುಂದೆ ಉಸಿರಾಡಲು ತೊಂದರೆ ಪಡಬೇಕಾಗುತ್ತದೆ ಎಂದರು.