Mass wedding event in Sriramnagar on the occasion of Dussehra
ಗಂಗಾವತಿ: ಕೊಪ್ಪಳ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜನಾಂಗಗಳ ಕಲ್ಯಾಣಕ್ಕೋಸ್ಕರ ಸಾಮೂಹಿಕ ವಿವಾಹಗಳನ್ನು ಅಕ್ಟೋಬರ್-೧೨ ಶನಿವಾರದಂದು ಮದ್ಯಾಹ್ನ ೧೧:೩೦ ರಿಂದ ೧೨:೩೦ ನಿ.ಕ್ಕೆ ಶ್ರೀರಾಮಗನರದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ವಹಿಸಲು ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷರಾದ ಕನ್ನಡಪ್ರೇಮಿ ಲಯನ್ ಜಿ. ರಾಮಕೃಷ್ಣರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಾಮೂಹಿಕ ವಿವಾಹಕ್ಕೆ ನೋಂದಾಯಿಸುವ ವಧು ೧೮ ವರ್ಷ, ವರನಿಗೆ ೨೧ ವರ್ಷ ತುಂಬಿದ ಬಗ್ಗೆ ವಯಸ್ಸಿನ ಶಾಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಮತ್ತು ಈ ಸಾಮೂಹಿಕ ವಿವಾಹದಲ್ಲಿ ಯಾವುದೇ ಅಂತರ್ಜಾತಿ ವಿವಾಹ, ಪ್ರೇಮವಿವಾಹ, ಮರುವಿವಾಹಗಳಿಗೆ ಪ್ರವೇಶ ಇರುವುದಿಲ್ಲ.
ಸದರಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ವಧುವರರಿಗೆ ೨ ತಾಳಿ (ಮಾಂಗಲ್ಯ), ಮೂಗುತಿ, ಬಾಸಿಂಗ, ಕಾಲುಂಗುರ, ನೂತನ ವಸ್ತçಗಳನ್ನು ಕೊಡಲಾಗುವುದು ಹಾಗೂ ವಧು-ವರರ ಪರವಾಗಿ ಬರುವ ಬಂಧು ಬಳಗದವರಿಗೆ ಬೆಳಿಗ್ಗೆ ಟಿ ಮತ್ತು ಟಿಫಿನ್ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
ಈ ಸಾಮೂಹಿಕ ವಿವಾಹಕ್ಕೆ ದಿನಾಂಕ: ೦೮.೧೦.೨೦೨೪ ರ ಒಳಗಾಗಿ ಶ್ರೀರಾಮನಗರದ ಕೆನರಾ ಬ್ಯಾಂಕ್ ಹತ್ತಿರವಿರುವ ನವತಾ ಟ್ರಾನ್ಸ್ಪೋರ್ಟ್ ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸ್ವಾಮಿ ವಿವೇಕಾನಂದ ಸೇವಾ ಸಂಘ ಶ್ರೀರಾನಗರದ ಅಧ್ಯಕ್ಷರಾದ ಜಿ. ರಾಮಕೃಷ್ಣರವರನ್ನು (೯೪೪೮೨೨೮೭೩೮, ೯೫೩೮೪೩೦೯೮೯) ಸಂಪರ್ಕಿಸಲು ಕೋರಿದೆ.