Breaking News

ಮಾದಪ್ಪನ ಭಕ್ತರ ಸೇವೆಯಲ್ಲಿ ಅಭಿವೃದ್ಧಿ ಪ್ರಾಧಿಕಾರ ಸದಾ ಮುಂದಿದೆ:ಕಾರ್ಯದರ್ಶಿ ಎ ಇ ರಘು ಮಾಹಿತಿ

Development Authority is always ahead in the service of Madappa’s devotees: Secretary AE Raghu informs

ಜಾಹೀರಾತು


ವರದಿ :ಬಂಗಾರಪ್ಪ .ಸಿ .
ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಅಮವಾಸ್ಯೆ ಪ್ರಯುಕ್ತ ದಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿವಿಧ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಸನ್ನಿಧಾನ.

ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಇಂದಿನಿಂದ ದಸರಾ ಚಾತ್ರೆಯು ಶುರುವಾಗಲಿದೆ. ಇದಕ್ಕೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಗತ್ಯ ಸಿದ್ಧತೆ ನಡೆದಿದೆ.

ಮಹಾಲಯ ಅಮಾವಾಸ್ಯೆ ಜಾತ್ರೆ ಆರಂಭವಾಗಲಿದ್ದು, ದೇಗುಲದಲ್ಲಿ ಮಾದಪ್ಪನಿಗೆ ವಿಶೇಷಪೂಜೆಯನ್ನು ನೆರವೇರಿಸುವುದರ ಮೂಲಕ ಮಹಾಲಯ ಅಮಾವಾಸ್ಯೆ ಚಾತ್ರೆಗೆ ಚಾಲನೆ ನೀಡಲಾಗುತ್ತದೆ.

ಆ.1 ರಂದು ಸಂಜೆ 6.30 ರಿಂದ 8.30ರೊಳಗೆ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ಹಾಗೂ ವಿವಿಧ ಉತ್ಸವಾದಿಗಳು ನಡೆಯಲಿವೆ.

ಆ.2 ರಂದು ಮಹಾಲಯ

ಅಮಾವಾಸ್ಯೆ ಹಿನ್ನೆಲೆಯಲ್ಲಿ ಸ್ವಾಮಿಗೆ ವಿಶೇಷ ಸೇವೆ ಉತ್ಸವಾದಿಗಳು ನಡೆಯಲಿವೆ. ಈ ದಿನ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

ಆ.3 ರಂದು ಶರನ್ನವರಾತ್ರಿ

ಹಿನ್ನೆಲೆಯಲ್ಲಿ ದೇಗುಲದ ಪಶ್ಚಿಮ ದಿಕ್ಕಿನ ಕಂಠಶಾಲೆಯ ಆವರಣದಲ್ಲಿ ಹಸಿರು ಚಪ್ಪರವನ್ನು ಹಾಕಿ ತೂಗುಯ್ಯಾಲೆಯ ತೊಟ್ಟಿಲು ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ 9 ದಿನಗಳ ಕಾಲ ಪ್ರತಿದಿನ ರಾತ್ರಿ 8.30ಕ್ಕೆ ಮಾದಪ್ಪನ ಪಟ್ಟದ ಉಯ್ಯಾಲೆಯ ಉತ್ಸವದ ಸೇವೆಯು ಬೇಡಗಂಪಣ ಆರ್ಚಕರಿಂದ ಜರುಗಲಿದ್ದು, ಈಗಾಗಲೇ ತೊಟ್ಟಿಲನ್ನು ಅಳವಡಿಸಲಾಗಿದೆ. ಚಪ್ಪರ ನಿರ್ಮಾಣಕ್ಕೆ ಅಗತ್ಯವಾದ ಬಿದಿರನ್ನು


ಸಂಗ್ರಹಿಸಲಾಗಿದೆ. ಅ.11 ರಂದು ಮಹಾನವಮಿ,

ಆಯುಧಪೂಜೆಯ ಹಿನ್ನೆಲೆಯಲ್ಲಿ ದೇಗುಲದಲ್ಲಿ ರುವ ಪಟ್ಟಗಾರ ರಾಯಣ್ಣ ನಾಯಕನು ಯುದ್ಧಕ್ಕೆ ಬಳಸಿದ ಕತ್ತಿ, ಖಡ್ಗ, ಕಠಾರಿ, ಭರ್ಜಿಗಳು ಹಾಗೂ ಪಟ್ಟದ ಕತ್ತಿಗಳನ್ನು ನಂದನವನದ ಮಜ್ಜನ ಬಾವಿಗೆ ಮೆರವಣಿಗೆ ಮೂಲಕ ಕೊಂಡೊಯ್ದು ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

6.12 ವಿಜಯದಶಮಿ ಹಿನ್ನೆಲೆಯಲ್ಲಿ ರಾತ್ರಿ ಪೂಜೆಯ ಬಳಿಕ ಬಿಳಿ ಕುದುರೆ ವಾಹನೋತ್ಸವನ್ನು ನೆರವೇರಿಸುವುದರ ಮೂಲಕ ಜಂಬೂ ಸವಾರಿಯನ್ನು ನಡೆಸಲಾಗುತ್ತದೆ. ಈ ಜಾತ್ರೆಯಲ್ಲೂ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಅಗತ್ಯ ಸಿದ್ಧತೆಯ ಜತೆಗೆ ಭಕ್ತರಿಗೆ ಮೂಲ ಸೌಕರ್ಯವನ್ನು ಒದಗಿಸಲು ಅಗತ್ಯ ತಯಾರಿ

ಮಾಡಿಕೊಳ್ಳಲಾಗಿದೆ. ಮಹಾಲಯ ಅಮಾ ವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷ ದಾಸೋಹ, ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಕ್ಯೂ ಲೈನ್ ಮಾಡುವ ಮೂಲಕ ಅಗತ್ಯ

ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ನಡೆಯುವ ಮಹಾಲಯ ಅಮಾವಾಸ್ಯೆಗೆ ಸಿದ್ಧತೆಗಳು ಭರದಿಂದ ಸಾಗಿದೆ. ಅಕ್ಟೋಬರ್ ಒಂದರಂದು ಸೋಮವಾರ ಎಣ್ಣೆ ಮಜ್ಜನ ವಿಶೇಷ ಸೇವೆ ಉತ್ತವಾದಿಗಳು ಹಾಗೂ ಅಕ್ಟೋಬರ್ 2 ರಂದುಮಹಾಲಯ ಅಮಾವಾಸ್ಯೆ ವಿಶೇಷ ಉತ್ಸವಗಳು ಜರುಗಲಿದೆ. ಅಕ್ಟೋಬರ್ ಮೂರರಿಂದ ನವರಾತ್ರಿ ಉಯ್ಯಾಲು ಉತ್ಸವ ವಿಶೇಷ ಪೂಜೆಗಳು ಆರಂಭವಾಗಲಿದೆ ಆಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಬೆಂಗಳೂರು, ರಾಮನಗರ, ಕನಕಪುರ, ಮಂಡ್ಯ, ಚಾಮರಾಜನಗರ, ಮೈಸೂರು. ತುಮಕೂರು, ಕೋಲಾರ, ಶಿವಮೊಗ್ಗ ತಮಿಳುನಾಡು ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಯಾವುದೇ ಅನಾನುಕೂಲ ವಾಗದಂತೆ ಪ್ರಾಧಿಕಾರದ ವತಿಯಿಂದ ಈಗಾಗಲೇ ಸೂಕ್ತ ಕ್ರಮ ವಹಿಸಲಾಗಿದೆ.

ನೆರಳಿನ ವ್ಯವಸ್ಥೆ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳು ದರ್ಶನಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು ಉಚಿತ ದರ್ಶನ, ವಿಶೇಷ ದರ್ಶನ 250,500ಟಿಕೆಟ್ ಪಡೆದು ದರ್ಶನ ಮಾಡುವ ಭಕ್ತಾದಿಗಳಿಗೆ ಈಗಾಗಲೇ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ ಜನ ದಟ್ಟಣೆ ಹೆಚ್ಚಾದರೆ ನೂಕು ನುಗ್ಗಲು ಆಗದಂತೆ ಬ್ಯಾರಿಕೇಡ್ ಹಾಗೂ ಸುತ್ತ ಮರಗಳನ್ನು ಕಟ್ಟೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

ವಿಶೇಷ ದಾಸೋಹ : ಚಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ, ಪೊಲೀಸ್ ಸಿಬ್ಬಂದಿಗಳು ಗೃಹರಕ್ಷಕ ದಳದವರು ಅಧಿಕಾರಿ ವರ್ಗದವರಿಗೆ ವಿಶೇಷ ದಾಸೋಹ ತೆರೆಯಲಾಗಿದೆ. ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಭಕ್ತಾದಿಗಳು ನೀಡಿರುವ ದವಸಧಾನ್ಯಗಳು ತರಕಾರಿಗಳ ಜೊತೆಗೆ ಪ್ರಾಧಿಕಾರದ ವತಿಯಿಂದಲೂ ಮಾರುಕಟ್ಟೆಯಿಂದ ಉತ್ತಮ ತರಕಾರಿ ಖರೀದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಇದಲ್ಲದೆ ಬರುವಂತಹ ಭಕ್ತಾದಿಗಳಿಗೆ ಗುಣಮಟ್ಟದ ಆಹಾರ ವಿತರಿಸಲು ಈಗಾಗಲೇ ಸಿಬ್ಬಂದಿಗಳಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ ಈ ರಘು ರವರು ಸೂಚನೆ ನೀಡಿದ್ದಾರೆ. ವಿಶೇಷವೇನೆಂದರೆ 60 ವರ್ಷ

ಮೇಲ್ಪಟ್ಟವರಿಗೆ ನೇರ ದರ್ಶನ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ನೇರದರ್ಶನ ಅವಕಾಶ ಮಾಡಿಕೊಡುವಂತೆ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ಆಲಂಬಾಡಿ ಬಸವ ದ್ವಾರದಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅತಿಥಿ ಗಣ್ಯರು ಅಂಗವಿಕಲರಿಗೆ ಗೇಟ್ ನಂಬರ್ ನಾಲ್ಕರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೋರಿಸಿ ದರ್ಶನ ಪಡೆಯಬಹುದಾಗಿದೆ…

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.