Intimation to officials to repair canals of Hinale Reservoir which does not receive rain: MLA M R Manjunath
ವರದಿ : ಬಂಗಾರಪ್ಪ ಸಿ ಹನೂರು .
ಹನೂರು: ತಾಲೂಕಿನ ಕೆ ಗುಂಡಾಪುರ ಉಡುತರೆ ಜಲಾಶಯದ ನೀರು ಹರಿಯುವ ಕಾಲುವೆಗಳನ್ನು ಶಾಸಕ ಎಂ ಆರ್ ಮಂಜುನಾಥ್ ವೀಕ್ಷಣೆ ಮಾಡಿದರು.
ನಂತರ
ಉಡುತೋರೆ ಜಲಾಶಯದ ಕಾಲುವೆಗಳಿಗೆ ಭೇಟಿ ನೀಡಿ ಕಾಲುವೆಗಳಲ್ಲಿ ಹೂಳು ತೆಗೆಯುವುದು ಹಾಗೂ ಕಾಲುವೆಯ ಸುತ್ತ ಬೆಳೆದಿರುವ ಗಿಡಮರಗಳನ್ನು ಕಟಾವು ಮಾಡಿ ಉಡುತೊರೆ ಹಳ್ಳ ಜಲಾಶಯದ ನೀರು ಹರಿದು ಹೋಗುವ ಪ್ರತಿಯೊಂದು ಕಾಲುವೆಗಳ ಹೂಳು ತೆಗೆಯಿಸಿ ಆ ಭಾಗದ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ನೀರಾವರಿ ಅಧಿಕಾರಿಗಳಿಗೆ ಸೂಚಿಸಿದರು. ಕಾತಾಳಿ ಬಸವೇಶ್ವರ ದೇವಸ್ಥಾನ ಹತ್ತಿರ ಇರುವ ಕೆರೆಯನ್ನು ವೀಕ್ಷಣೆ ಮಾಡಿ ಬಿಡುವ ಸಂದರ್ಭದಲ್ಲಿ ಹೆಚ್ಚಾಗಿ ಕೆರೆಯ ನೀರು ತುಂಬಿಕೊಂಡು ಅಕ್ಕ ಪಕ್ಕದಲ್ಲಿರುವ ಜಮೀನುಗಳಗೆ ತುಂಬಿಕೊಳ್ಳುತ್ತದೆ ಎಂದು ಕೆರೆಯ ಪಕ್ಕದ ಜಮೀನು ಮಾಲೀಕರು ಶಾಸಕರಿಗೆ ತಿಳಿಸಿದಾಗ ಕೂಡಲೆ ಶಾಸಕರು ಈ ಕೆರೆಯ ನೀರು ಬೇರೆ ಕಡೆ ಹೋಗುವ ವ್ಯವಸ್ಥೆಯನ್ನು ಮಾಡಿ ಅನುಕೂಲವಾಗುವಂತೆ ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸೂಚಿಸಿದರು.
ಇದೆ ಸಮಯದಲ್ಲಿ ಶಾಸಕರು ಕಾತಾಳಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಮಾಡಿ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಇಂಜಿನಿಯರ್ ಮಂಜುನಾಥ್ ಕಾಂಚಳ್ಳಿ ಜಡೇಸ್ವಾಮಿ, ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುತ್ತುರಾಜು, ಹನೂರು ವಿಜಯ್ ಕುಮಾರ್, ಗೋಪಾಲ್ ನಾಯಕ, ಹನೂರು ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಸೇರಿದಂತೆ ಇನ್ನಿತರರು ಹಾಜರಿದ್ದರು