Breaking News

ನಗರಸಭೆಯಲ್ಲಿ ಸ್ವಾತಂತ್ರ್ಯಕ್ಕಾಗಿಹೋರಾಡಿದ ಯೋಧರಿಗೆ ಸನ್ಮಾನ

For Independence in Municipal Council Tribute to the warriors who fought

ಜಾಹೀರಾತು
ಜಾಹೀರಾತು

ಗಂಗಾವತಿ: ಸ್ವಾತಂತ್ರ್ಯೋ ತ್ಸವ ನಿಮಿತ್ತ ಸ್ವಾತಂತ್ರ್ಯಕ್ಕಾಗಿ
ಹೋರಾಡಿದ ಯೋಧರಿಗೆ ಇಂದು ಶನಿವಾರ ನಗರಸಭೆಯಲ್ಲಿ
ಸನ್ಮಾನ ಸಮಾರಂಭ ಜರುಗಿತು.
ಈ ವೇಳೆ ನಗರಸಭೆ ಪೌರಾಯುಕ್ತರಾದ ಆರ್.
ವಿರುಪಾಕ್ಷಮೂರ್ತಿಯವರು ಮಾತನಾಡಿ, ಈ ವೀರಯೋಧರ
ಹೋರಾಟ ಅವಿಸ್ಮರಣೀಯ ಎಂದರು. ಇದೇ ಸಂದರ್ಭದಲ್ಲಿ ಗೌಳಿ
ರಮೇಶ ಮಾತನಾಡಿ, ನಗರಸಭೆಯು, ಸ್ವಾತಂತ್ರö್ಯ
ಯೋಧರ ಮತ್ತು ಅವರ ಕುಟುಂಬದವರನ್ನು ಸನ್ಮಾನಿಸಿದ್ದು
ಶ್ಲಾಘನೀಯ. ಇದೇ ರೀತಿ ಮುಂದಿನ ದಿನಮಾನಗಳಲ್ಲಿ
ಯೋಧರನ್ನು ಗುರುತಿಸಿ ಸನ್ಮಾನಿಸುವುದು ಅಗತ್ಯತೆ ಇದೆ.
ಇದರಿಂದ ಯುವಕರಿಗೆ ದೇಶ ಪ್ರೇಮದ ಜಾಗೃತಿ ಮೂಡಿಸಲು
ಸಹಕಾರಿ ಎಂದು ಹೇಳಿದರು.
ಸನ್ಮಾನಿತರು : ಶ್ರೀ ಗೌಳಿ ಮಹಾದೇವಪ್ಪನವರ ಸುಪುತ್ರರಾದ
ಗೌಳಿ ರಮೇಶ, ಅರಳಿ ರಾಚಪ್ಪನವರ ಸುಪುತ್ರ ಅರಳಿ
ಶೇಖರಪ್ಪ, ಶ್ರೀ ಭಾವಿಕಟ್ಟಿ ಜಗದೀಶಪ್ಪ ಕುಟುಂಬಸ್ಥರಾದ
ಭಾವಿಕಟ್ಟಿ ಬಸವರಾಜ, ಶ್ರೀ ವೆಂಕೋಬಾಚಾರ್ ಬೇವಿನಾಳ್ ಇವರ
ಕುಟುಂಬಸ್ಥರಾದ ನರಸಿಂಗರಾವ್ ಕುಲಕರ್ಣಿ, ಶ್ರೀ ರಾಮಾಚಾರ್
ಸುಪುತ್ರ ಅನಿಲ್ ಅಯೋಧ್ಯಾ, ಶ್ರೀ ರಾಂಭಟ್ಟ ಜೋಷಿ ಸುಪುತ್ರ
ವಿವೇಕಾನಂದ ಜೋಷಿ, ಶ್ರೀ ರಾಯಚೂರು ಶಿವಯ್ಯ ಶ್ರೇಷ್ಠಿ
ಇವರ ಸುಪುತ್ರ ಲಕ್ಷö್ಮಣ ದಂಪತಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಮತ್ತು ಅಧಿಕಾರ
ವರ್ಗದವರು ಉಪಸ್ಥಿತರಿದ್ದರು.

About Mallikarjun

Check Also

ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ.

Inaugural ceremony of the State Committee for Implementation of Kannada Language in Courts. ಬೆಂಗಳೂರು ಮಾರ್ಚ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.