Breaking News

ಬೃಹತ್‌ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಮೆಗಾ ಹೆಲ್ತ್ ಕ್ಯಾಂಪ್

ಗಂಗಾವತಿ: ಆಯುರ್ವೇದ ಪ್ರತಿಷ್ಠಾನ (ರಿ)ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಡಾ|| ಎಸ್.ವಿ. ಸವಡಿ ಆಯುರ್ವೇದಿಕ್ ಆಸ್ಪತ್ರೆ ರಾಯಚೂರು ರೋಡ್, ವಿದ್ಯಾನಗರದಲ್ಲಿ ಬೃಹತ್‌ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಮೆಗಾ ಹೆಲ್ತ್ ಕ್ಯಾ೦ಪ್ ದಿನಾಂಕ 30-04-2024 ರಂದು ಮಂಗಳವಾರ ದಿನದಂದು ಬೆಳಿಗ್ಗೆಯಿಂದ ಮಧ್ಯಾಹ್ನ 3:00 ವರೆಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದ್ದು, ಇದರ , ಸದುಪಯೋಗವನ್ನು ಗಂಗಾವತಿ ನಗರದ ಮತ್ತು ಸುತ್ತಮುತ್ತ ಗ್ರಾಮದ ಸಮಸ್ತ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಡಾ: ಬಸವರಾಜ ಸವಡಿ ಹೇಳಿದ್ದಾರೆ.
ಈ ಶಿಬಿರದಲ್ಲಿ ಪಾರ್ಶ್ವವಾಯು, ನಡು ನೋವು, ಸ್ನಾಯು ಸೆಳೆತ. ಮಂಡಿ ನೋವು, ಕುತ್ತಿಗೆ ನೋವು, ಮುಖ ವಕ್ರತ, ಕೈಕಾಲುಗಳಲ್ಲಿ ಜೋಮು, ಸಂಧಿಗಳ ನೋವು, ಎಲುಬು ಕೀಲುಗಳ ನೋವು, ಹೃದಯ ರೋಗ, ಸಕ್ಕರೆ ಕಾಯಿಲೆ, ಸ್ತ್ರೀರೋಗ, ಬಂಜೆತನ, ಮೂತ್ರಪಿಂಡದ ರೋಗಗಳು, ಚರ್ಮ ಸಂಬಂಧಿ ಕಾಯಿಲೆಗಳು ಮುಂತಾದ ನರ ಮತ್ತು ಸಂಧಿ ರೋಗಗಳಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯಗಳ ಸದುಪಯೋಗ ಬಡ ರೋಗಿಗಳು ಪಡೆದುಕೊಳ್ಳಬೇಕಾಗಿ ನಾಗರಿಕರಲ್ಲಿ ವಿನಂತಿಸಿದ್ದಾರೆ.
ಈ ಒಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರದಲ್ಲಿ ವೈದ್ಯರಾದ ಡಾ॥ ಉಮೇಶ್ ವಿ. ಪುರದ್ ಎಂ. ಡಿ. (ಆಯು)ನಿರ್ದೇಶಕರು, ನರರೋಗ ಹಾಗೂ ಪಾರ್ಶ್ವವಾಯು ತಜ್ಞರು.
ಡಾ॥ ಬಸವರಾಜ ಸವಡಿ ಎಂ.ಎಸ್.
ಪ್ರಾಂಶುಪಾಲರು / ವೈದ್ಯಕೀಯ ಅಧೀಕ್ಷಕರು ಗುದ ರೋಗ ತಜ್ಞರು,
ಡಾ|| ಮೋಹನ್ ಜಿ.ಎಂ.ಡಿ. ನರರೋಗ ತಜ್ಞರು. ಡಾ|| ಅಬೀದ್ ಹುಸೇನ್ ಎಂ.ಡಿ. ಪಂಚಕರ್ಮ ತಜ್ಞರು, ಡಾ|| ವಿನೋದ್ ಕುಮಾರ್ ಎಂ.ಡಿ. ಶ್ವಾಸಕೋಶ ತಜ್ಞರು,ಡಾ|| ಮನೋಜ್ ಕುಮಾರ್ ಪಾಟೀಲ್ ಎಂ.ಡಿ. ಕಾಯಚಿಕಿತ್ಸ ತಜ್ಞರು,
ಡಾ|| ಶರಣಪ್ಪ ಕಂಟ್ಲಿ ಬಿ.ಎ.ಎಂ.ಎಸ್. & ಆರ್.ಓ.ಟಿ.ಪಿ. (ಕೇರಳ) ಅಲರ್ಜಿ ಮತ್ತು ಚರ್ಮರೋಗ ವಿಶೇಷ ಚಿಕಿತ್ಸಕರು,
ಡಾ॥ ಸೌಮಿರಮಾಲಾನ್ ಬಿ.ಎ.ಎಂ.ಎಸ್. ಸಾಮಾನ್ಯ ರೋಗ ತಜ್ಞರು, ಡಾ॥ರೇಷ್ಠಾ ಬೇಗಂ ಬಿ.ಎ.ಎಂ.ಎಸ್. ಸಾಮಾನ್ಯ ರೋಗ ತಜ್ಞರು, ಡಾ॥ ವೀಣಾ ಅಕ್ಕಸಾಲಿ ಬಿ.ಎ.ಎಂ.ಎಸ್.ಸಾಮಾನ್ಯ ರೋಗ ತಜ್ಞರು, ಡಾ॥ ಈಶ್ವರ್ ಸವಡಿ ಎಂ.ಬಿ.ಬಿ.ಎಸ್. ಎಂ.ಎಸ್. (ಓ.ಬಿ.ಜಿ.) ಮುಖ್ಯ ವೈದ್ಯಾಧಿಕಾರಿ ಗಳು ಉಪ ವಿಭಾಗ ಆಸ್ಪತ್ರೆ, ಗಂಗಾವತಿ, ಡಾ॥ನಾಗಭೂಷಣ್ ಎಂ.ಬಿ.ಬಿ.ಎಸ್. ಎಂ.ಡಿ. ಡಿ.ಎಂ. ನರ ರೋಗ ತಜ್ಞರು, ಡಾ॥ ಸತೀಶ್ ರಾಯಕರ್ ಎಂ.ಬಿ.ಬಿ.ಎಸ್. ಎಂ.ಡಿ. ಸಕ್ಕರೆ ಮತ್ತು ಹೃದಯ ರೋಗ ತಜ್ಞರು, ಡಾ|| ಮಲ್ಲಿಕಾರ್ಜುನ್ ಎಂ.ಬಿ.ಬಿ.ಎಸ್. ಡಿಆರ್ಥೋ ಎಲುಬು & ಕೀಲು ತಜ್ಞರು.ಡಾ॥ ಅಮರೇಶ ಅರಳಿ ಎಂ.ಬಿ.ಬಿ.ಎಸ್. ಎಂ.ಡಿ. ಮಕ್ಕಳ ರೋಗ ತಜ್ಞರು,
ಡಾ॥ ಅವಿನಾಶ ಪದ್ಮಶಾಲಿ ಎಂ.ಬಿ.ಬಿ.ಎಸ್.ಎಂ.ಎಸ್.ಇ.ಎನ್.ಟಿ. ಕಿವಿ ಮೂಗು ಹಾಗೂ ಗಂಟಲು ರೋಗ ತಜ್ಞರು, ಡಾ॥ ಭರತ್ ಮೇಕಾ ಎಂ.ಬಿ.ಬಿ.ಎಸ್. (ಡಿ.ವಿ.ಡಿ.)
ಚರ್ಮ ರೋಗ ತಜ್ಞರು ಇಂತಹ ನುರಿತ ವೈದ್ಯರ ತಂಡ ನಿಮ್ಮ ಸೇವೆಯನ್ನು ಮಾಡಲು ಸದಾ ಸಜ್ಜಾಗಿದೆ,ನಿಮ್ಮ ಆರೋಗ್ಯದಲ್ಲಿ ನಮ್ಮ ಯಶೋಗಾತೆಯಿದೆ,ನಿಮ್ಮ ಯಶಸ್ಸು ನಮ್ಮಸೇವೆಯನ್ನು ಸಾರುತ್ತಿದೆ ಸಾರ್ವಜನಿಕರು, ಮತ್ತು ಬಡ ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಲು ವೈದ್ಯರ ತಂಡ ತಿಳಿಸಿದೆ.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.