Breaking News

ಶೋಷಿತಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಸಂವಿಧಾನ ಸಂರಕ್ಷಣೆ ಮಾಡಬೇಕು:ರಾಮಚಂದ್ರಪ್ಪ


ಗಂಗಾವತಿ :ಎಸ್ ಸಿ ,ಎಸ್ ಟಿ ಮತ್ತು ಶೋಷಿತ ಸಮುದಾಯಗಳು ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾಸಭಾ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಹೇಳಿದರು. ಅವರು ಗಂಗಾವತಿಯ ವಿರುಪಾಪುರ ತಾಂಡದಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ್ ಇಟ್ನಾಳ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ಪ್ರಸ್ತುತ ಭಾರತೀಯ ಜನತಾ ಪಕ್ಷ ಶೋಷಿತ ಸಮುದಾಯಗಳ ಹಕ್ಕುಗಳನ್ನು ಕಸಿಯುವ ಕಾರ್ಯ ಮಾಡುತ್ತಿದ್ದು ಇದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಳಿವಿನ ಅಂಚಿನಲ್ಲಿದೆ. ಆದ್ದರಿಂದ ಬಿಜೆಪಿಯನ್ನು ಸೋಲಿಸಲು ಕರ್ನಾಟಕದ ಎಲ್ಲಾ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಸವಿದಾನದಲ್ಲಿ ಮೀಸಲಾತಿ ಮತ್ತು ಹಕ್ಕುಗಳನ್ನು ಜೊತೆಗೆ ಭೂ ರಹಿತರಿಗೆ ಭೂಮಿಯನ್ನು ನೀಡಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಇದನ್ನು ಮರೆಸಲು ಬಿಜೆಪಿ ದೇವರು ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ಹೊಡೆದು ಸಂವಿಧಾನದ ಹಕ್ಕುಗಳನ್ನು ಕಸಿಯಲು ನಡೆಸಿದೆ. ಈಗಾಗಲೇ ಪರಸ್ಪರ ಜಾತಿ ಜನಾಂಗಗಳ ಮಧ್ಯೆ ಜಗಳವನ್ನು ಹಚ್ಚಿ ಆ ಜಗಳದಲ್ಲಿ ರಾಜಕೀಯ ಲಾಭವನ್ನು ಬಿಜೆಪಿ ಮತ್ತು ಸಂಘರ್ದವರು ಮಾಡುತ್ತಿದ್ದಾರೆ.ಕೂಡಲೇ ಇದನ್ನು ವಿರೋಧಿಸಲು ಪ್ರಸ್ತುತ ಲೋಕಸಭಾ ಚುನಾವಣೆ ಒಂದು ವೇದಿಕೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ರಾಜ್ಯಾದ್ಯಂತ ಬೆಂಬಲಿಸುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಂರಕ್ಷಣೆ ಮಾಡಬೇಕು. ಪ್ರಧಾನ ಮಂತ್ರಿಗಳು ಪ್ರತಿ ಚುನಾವಣಾ ಸಭೆಯ ಕಾರ್ಯಕ್ರಮದಲ್ಲಿ ಜನತೆಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲಿಸುವಂತೆ ಮನವಿ ಮಾಡಿದರು. ಮಹಾಸಭಾದ ಮುಖಂಡರಾದ ನ್ಯಾಯವಾದಿ ಅನಂತನಾಯಕ್ ಮಾತನಾಡಿ, ಲಮಾಣಿ ಸೇರಿದಂತೆ ಶೋಷಿತ ಸಮುದಾಯಗಳಿಗೆ ಧ್ವನಿಯಾಗಿದ್ದು ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಸಂವಿಧಾನವನ್ನು ಉಳಿಸುವ ಕಾರ್ಯ ಮಾಡಬೇಕಿದೆ. ಭಾರತೀಯ ಜನತಾ ಪಾರ್ಟಿ ಮತ್ತು ಸಂಘ ಪರಿವಾರದವರು ಈ ದೇಶದ ಮೂಲ ನಿವಾಸಿಗಳ ಹಕ್ಕು ಮತ್ತು ಸೌಲಭ್ಯಗಳಿಗೆ ಕತ್ತರಿ ಹಾಕುವ ಹಿಡನ್ ಅಜೆಂಡಾ ಹೊಂದಿದ್ದಾರೆ. ಅದನ್ನು ನಾವು ವಿರೋಧಿಸುವ ಮೂಲಕ ಕಾಂಗ್ರೆಸ್ಸನ್ನು ಗೆಲ್ಲಿಸಿ ಶೋಷಿತ ವರ್ಗದ ಗೆಲುವನ್ನು ಕಾಣಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಸಭಾದ ಮುಖಂಡರಾದ ಅನಂತ್ನಾ ಯಕ್, ರಾಮಚಂದ್ರ,ಸೋಮಣ್ಣ ಸುಭಾಸ ವಕೀಲರು,ಕುಮಾರ ,
ಕೃಷ್ಣ ನಾಯ್ಕ ರವಿ ಚವಾಣ್
ಉಮೇಶ್ ರಾಮು ಚವಾಣ್ ಇದ್ದರು.
ಪೊಟೊ30-gvt-04
ಗಂಗಾವತಿ ನಗರದ ವಿರುಪಾಪುರ ತಾಂಡದಲ್ಲಿ ಶೋಷಿತ ಸಮುದಾಯಗಳ ಮಹಾಸಭಾ ವಾಗಿ ಮತಯಾಚನೆ ಮಾಡಿದರು

ಜಾಹೀರಾತು

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *