Breaking News

ವಿಶೇಷ ಚೇತನ ಮಕ್ಕಳಿಗೆಫಿಜಿಯೋಥೆರಪಿ ಪರೀಕ್ಷೆ ಮತ್ತು ಚಿಕಿತ್ಸೆ

Physiotherapy examination and treatment of specially-abled children

ಬ್ಯಾಡಗಿ ತಾಲೂಕಿನ ವಿಶೇಷಚೇತನ ಮಕ್ಕಳಿಗೆ ಇನ್ನರ್ವಿಲ್ ಕ್ಲಬ್ ಬ್ಯಾಡಗಿ ಮತ್ತು ಕ್ಷೇತ್ರ ಸಮನ್ವಯ ಸಂಪನ್ಮೂಲ ಅಧಿಕಾರಿಗಳ ಕಚೇರಿ ಬ್ಯಾಡಗಿ ಇವರ ಸಹಭಾಗಿತ್ವದಲ್ಲಿ ತಾಲೂಕಿನ ಮೋಟೆಬೆನ್ನೂರು, ಗುಂಡೇನಹಳ್ಳಿ ಹಾಗೂ ಕಲ್ಲೇದೇವರು ಗ್ರಾಮಗಳಲ್ಲಿ ವಿಶೇಷಚೇತನ ಮಕ್ಕಳಿಗೆ ಫಿಜಿಯೋಥೆರಪಿ ವೈದ್ಯರಾದ ಕುಮಾರಿ ನಾಗಮಣಿ ಅವರಿಂದ ಒಟ್ಟು 28 ವಿಕಲಚೇತನ ಮಕ್ಕಳಿಗೆ ಬೌತಿಕ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಟ್ಟು ನಂತರ ಇನ್ನರ್ ವೀಲ್ ಕ್ಲಬ್ ಬ್ಯಾಡಗಿ ವತಿಯಿಂದ ಚಿಕಿತ್ಸೆ ಪಡೆದ ಮಕ್ಕಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ನಂತರ ಇನ್ನರ್ ವ್ಹೀಲ್ ಕ್ಲಬ್ ಎಡಿಟರ್ ಶ್ರೀಮತಿ ಲಕ್ಷ್ಮೀ ಉಪ್ಪಾರ ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಸರ್ಕಾರ ಹಲವು ರೀತಿಯ ಅನುದಾನ ಸಹಾಯ ನೀಡುತ್ತಿದ್ದು ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಅನುದಾನ ಬಹಳ ಕಡಿಮೆಯಾಗಿದೆ. ಸರ್ಕಾರಿ ಅಧಿಕಾರಿಗಳು ಮುತುವರ್ಜಿ ವಹಿಸಿ ಸರ್ಕಾರಕ್ಕೆ ಒತ್ತಾಯ ಮಾಡಿ ಹೆಚ್ಚು ಹೆಚ್ಚು ಅನುದಾನ ತಂದು ಮಕ್ಕಳಿಗೆ ಎಲ್ಲ ರೀತಿಯ ಸಹಾಯ ಸಹಕಾರ ಮಾಡಲು ಕೇಳಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಮಹೇಶ್ವರಿ ಪಸಾರದ, ಎಡಿಟರ್ ಲಕ್ಷ್ಮಿ ಉಪ್ಪಾರ, ಪ್ರತಿಭಾ ಮೇಲಗಿರಿ, ಸಂಧ್ಯಾರಾಣಿ ದೇಶಪಾಂಡೆ, ದ್ರಾಕ್ಷಾಯಿಣಿ ಹರಮಗಟ್ಟಿ, ಕವಿತಾ ಸೊಪ್ಪಿನಮಠ, ಜಾನವಿ ಎಲಿ, ರೂಪ ಕಡೆಕೊಪ್ಪ, ಸಮನ್ವಯ ಸಂಪನ್ಮೂಲ ಅಧಿಕಾರಿಗಳು ಉಪಸ್ಥಿತರಿದ್ದರು.

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.