Election of Officers of Ration Distributors Association
ಗಂಗಾವತಿ: ಇಂದು ದಿನಾಂಕ: ೦೪.೦೯.೨೦೨೩ ಸೋಮವಾರ ನಗರದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಗಂಗಾವತಿ ನಗರ ಪಡಿತರ ವಿತರಕರ, ನ್ಯಾಯಬೆಲೆ ಅಂಗಡಿ ಮಾಲಿಕರು ಹಾಗೂ ಕಾರ್ಯದರ್ಶಿಗಳ ಸಂಘದ ಸಭೆಯು ಟಿ.ಎಂ. ಚನ್ನಬಸವ ಶಾಸ್ತಿçಯವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಭೆಯಲ್ಲಿ ಸಂಘದ ಗಂಗಾವತಿ ನಗರ ಘಟಕದ ವಿವಿಧ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಗಂಗಾವತಿ ನಗರ ಘಟಕದ ಗೌರವಾಧ್ಯಕ್ಷರಾಗಿ ಟಿ.ಎಂ. ಚನ್ನಬಸವ ಶಾಸ್ತಿç, ಅಧ್ಯಕ್ಷರಾಗಿ ಕೆ. ಮಂಜುನಾಥ, ಉಪಾಧ್ಯಕ್ಷರಾಗಿ ಹೆಚ್. ವೀರಭದ್ರಪ್ಪ, ಕಾರ್ಯದರ್ಶಿಯಾಗಿ ಮಹ್ಮದ್ ಫಯಾಜ್ ಶರೀಫ್, ಸಹಕಾರ್ಯದರ್ಶಿಯಾಗಿ ಗಿರೀಶ್‌ಕುಮಾರ (ವಸಂತಪ್ಪ), ಕೋಶಾಧ್ಯಕ್ಷರಾಗಿ ವಾಜೇಂದ್ರರಾವ್ ದೇಶಪಾಂಡೆ ರವರು ಆಯ್ಕೆಯಾದರು. ನಿರ್ದೇಶರಾಗಿ ಶ್ರೀಮತಿ ಪುಟ್ಟಮ್ಮ ಗಿಡ್ಡಿ, ಶ್ರೀಮತಿ ಶಿವಬಸಮ್ಮ, ಕುಮಾರಿ ಶ್ವೇತಾ, ಸಿದ್ದಣ್ಣ ಪತ್ತಾರ, ರಾಜಶೇಖರ, ಮಹ್ಮದ್, ಅನ್ವರ್ ಹುಸೇನ್ ಕಾನ್, ನಜೀರ್ ಅಹ್ಮದ್, ಮಹ್ಮದ್ (ಮೈನುದ್ದೀನ್), ಮಹ್ಮದ್ ಹಯಾಜ್, ಶೆಕ್ಷಾವಲಿ, ಮೌನೇಶ ಪತ್ತಾರ, ಪ್ರವೀಣಕುಮಾರ, ಶಂಕರ, ಸಿದ್ದರಾಮಯ್ಯ ಆರ್.ಎಂ., ಬಸವರಾಜ (ಭಾಗ್ಯಜ್ಯೋತಿ), ಯಮನೂರಪ್ಪ (ರಾಜಣ್ಣ), ಸೈಯ್ಯದ್ ಅಲಿ (ವಸಂತಕುಮಾರ), ನಾಗರಾಜ ರವರು ಆಯ್ಕೆಯಾದರು. ಸಂಘದ ಅಧ್ಯಕ್ಷತೆವಹಿಸಿದ್ದ ಹಾಗೂ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಟಿ.ಎಂ. ಚನ್ನಬಸವಶಾಸ್ತಿçಯವರು ಮಾತನಾಡಿ, ಇಂದು ನಡೆದ ಸಂಘದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಂಘದ ಪಡಿತರ ವಿತರಕರ ಹಾಗೂ ನ್ಯಾಯಬೆಲೆ ಅಂಗಡಿಕಾರರ ಸಮಸ್ಯೆಗಳಿಗೆ ನಮ್ಮ ಸಂಘ ಉತ್ತಮ ರೀತಿಯಲ್ಲಿ ಸ್ಪಂದಿಸಲಿದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿದ ಕೆ. ಮಂಜುನಾಥರವರು, ಇಂದಿನ ಸಭೆ ಯಶಸ್ವಿಯಾಗಿ ಜರುಗಿತು. ಸಂಘ ನಮ್ಮನ್ನು ಗುರುತಿಸಿ ಹೆಚ್ಚಿನ ಜವಾಬ್ದಾರಿಯುತ ಸ್ಥಾನದಲ್ಲಿ ಕೂರಿಸಿದೆ. ಆ ಸ್ಥಾನಕ್ಕೆ ಚ್ಯುತಿ ಬಾರದಂತೆ, ಪಡಿತರ ವಿತರಣೆಯಲ್ಲಿ ಸಾರ್ವಜನಿಕರಿಗೆ ಯಾವುದೆ ಗೊಂದಲ ಬಾರದಂತೆ ಪಡಿತರ ವಿತರಣೆಯಲ್ಲಿ ಕ್ರಮಜರುಗಿಸುವುದರ ಜೊತೆಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಸಂಘದ ಪದಾಧಿಕಾರಿಗಳಿಗೆ ಕರೆ ನೀಡಿದರು. ಎಂದು ನಗರ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೆ. ಮಂಜುನಾಥ ಪ್ರಕಟಣೆ ಮೂಲಕ ತಿಳಿಸಿದ್ದಾರೆ.