Breaking News

ತಿಪಟೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರೊ.ಬಿ ಕೃಷ್ಣಪ್ಪನವರ ಜನ್ಮದಿನ ಆಚರಣೆ.

Prof. B Krishnappa’s birthday celebration at Ambedkar Circle in Tiptur city.

ಜಾಹೀರಾತು

ತಿಪಟೂರು:ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದ ಬಳಿ ದಲಿತ ಚಳುವಳಿಯ ಪಿತಾಮಹಾರದ ಪ್ರೊ. ಬಿ ಕೃಷ್ಣಪ್ಪನವರ ಜನ್ಮ ದಿನಾಚರಣೆ ಆಚರಿಸಲಾಯಿತು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾಲೂಕು ಸಂಚಾಲಕರಾದ ಮೋಹನ್ ಜಕ್ಕನಹಳ್ಳಿ
ಹೆಂಡ ಸಾರಾಯಿ ಬೇಡ, ಹೋಬಳಿಗೊಂದು ವಸತಿ ಶಾಲೆ ಕೊಡಿ” ಎಂದು ಹೋರಾಡಿದ ಶಿಕ್ಷಣ ಪ್ರೇಮಿ ಹಾಗೂ ಸಂಸ್ಕೃತಿ ಪ್ರತಿಪಾದಕ ಪ್ರೋ.ಬಿ.ಕೆ.ಕೃಷ್ಣಪ್ಪ ನವರಿಗೆ ಸಲ್ಲುತ್ತದೆ ಹಾಗೂಅವರ ಮೈತ್ರಿವನ ಕರ್ನಾಟಕದ ದಲಿತರ ಶಕ್ತಿಕೇಂದ್ರವಾಗಬೇಕು.
ಹಿರಿಯ ಹೋರಾಟಗಾರರೆಲ್ಲಾ ನಿವೃತ್ತಿಗೊಂಡು ಮಾರ್ಗ ದರ್ಶಕರಾಗಿ ಯುವಕರ ಕೈಗೆ ಚಳುವಳಿ ನಾಯಕತ್ವ ನೀಡುವುದೊಂದೇ ಪ್ರೊ.ಬಿ.ಕೆ ಅವರಿಗೆ ಸಲ್ಲಿಸುವ ನಿಜವಾದ ಗೌರವ ದಲಿತ-ದಮನಿತ ಸಮುದಾಯಗಳ ಪಾಲಿಗೆ ವಿಮೋಚನಾ ದಿನ.ಅವರು ವಿದ್ಯಾರ್ಥಿ ಜೀವನದಲ್ಲಿ ವೈಚಾರಿಕ ಚಿಂತನೆ ಹಾಗೂ ಪ್ರಗತಿಪರ ಹೋರಾಟಗಳಲ್ಲಿ ನಿರತರಾಗಿ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು, ಬಾಬಾ ಸಾಹೇಬರ ಸಾಮಾಜಿಕ ಕ್ರಾಂತಿಯ ಹಾದಿಯನ್ನ. ಆರಂಭದಲ್ಲಿ ಭದ್ರಾವತಿಯಲ್ಲಿ ಹುಟ್ಟು ಪಡೆದ ದಲಿತ ಸಂಘರ್ಷ ಸಮಿತಿ ಎಂಬ ಸಣ್ಣ ಸಸಿ, ೧೯೭೬ರಲ್ಲಿ ಆಯೋಜನೆಗೊಂಡ ದಲಿತ ಲೇಖಕ ಕಲಾವಿದರ ಯುವ ಸಂಘಟನೆ ಮುಂದೆ ದಲಿತ ಸಂಘರ್ಷ ಸಮಿತಿಯಾಗಿ ಊರು, ಕೇರಿ, ಹಾಡಿ, ಹಟ್ಟಿಗಳಲ್ಲಿ ತೊರೆ, ಹೊಳೆ, ನದಿಯಾಗಿ ಹರಿದು, ನಾಡಿನ ಸಮಸ್ತ ದಲಿತ ಸಮುದಾಯಗಳ ಮನೆ-ಮನಗಳಲ್ಲಿ ಸಮುದ್ರವಾಗಿದ್ದು, ಇಂದಿಗೂ ಚರಿತ್ರೆಯ ಭಾಗವೇ ಆಗಿದೆ ಎಂದರು.
ಈ ಸಂದರ್ಭದಲ್ಲಿ. ಮಹಿಳಾ ತಾಲೂಕು ಸಂಚಾಲಕರಾದ ಕವಿತಾ ಮಹೇಶ್. ಮಹೇಶ್ ಇಂದಿರಾನಗರ. ಕೀರ್ತಿ ಹತ್ಯಾಳು. ಜಗದೀಶ್ ಗಿಣಕಿನ ಕೆರೆ. ಪ್ರಭುಸ್ವಾಮಿ. ಸಂಜಯ್. ಜಯ ಕುಮಾರ್. ಕುಮಾರ್. ಸೇರಿದಂತೆ ಮಹಿಳಾ ಸಮಿತಿ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ಮಂಜು ಗುರುಗದಹಳ್ಳಿ.

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *