Breaking News

ಕಾಲ್ತುಳಿತ ಘಟನೆಗೆ ಸ್ವಾಮೀಜಿಗಳಿಂದ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಪೊಲೀಸರಿಗೆ ದೂರು ನೀಡಿರುವುದು ಸಲ್ಲದ ಬೆಳವಣೆಗೆಯಾಗಿದೆ

It is a matter of pride that Swamiji has filed a complaint with the police against the CM, DCM and Home Minister for the stampede incident.

ಜಾಹೀರಾತು

ಬೆಂಗಳೂರು ; ಬೆಂಗಳೂರು ಕಾಲ್ತುಳಿತ ಘಟನೆಗೆ ಸಂಬಂಧಿಸಿದ ಕೆಲ ಸ್ವಾಮೀಜಿಗಳು, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಪೊಲೀಸ್ ದೂರು ನೀಡಿರುವುದು ಸಲ್ಲದ ಬೆಳವಣೆಗೆಯಾಗಿದೆ. ಸಮಾಜದ ನೈತಿಕ ಮತ್ತು ಧಾರ್ಮಿಕ ಉನ್ನತಿಗೆ ಶ್ರಮಿಸಬೇಕಾದ ಸ್ವಾಮೀಜಿಗಳು, ಕ್ಷುಲ್ಲಕ

ರಾಜಕೀಯದ ದಾಳವಾಗುವ ಅಗತ್ಯವಿರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ ಹಿನ್ನೆಲೆಯಲ್ಲಿ ಅಮಾನತ್ತಾಗಿದ್ದಾರೆ. ನ್ಯಾಯಾಂಗ ತನಿಖೆ. ಸಿಐಡಿ ತನಿಖೆ ಜಾರಿಯಲ್ಲಿದೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದೆ. ಒಟ್ಟು ಘಟನೆಯಲ್ಲಿ ತನ್ನಿಂದಾಗಬೇಕಾದ ಕ್ರಮಗಳನ್ನೆಲ್ಲಾ ಸರ್ಕಾರ ತ್ವರಿತವಾಗಿ ತೆಗೆದುಕೊಂಡಿದೆ. ಇಷ್ಟಿದ್ದರೂ ಕೆಲ ಸ್ವಾಮೀಜಿಗಳು ಸರ್ಕಾರದ ವಿರುದ್ಧ ಏಕೆ ಮುಗಿಬಿದ್ದಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಕುಂಭಮೇಳ ಸಮಯ ಕಾಲ್ತುಳಿತದಿಂದ ಬಹುದೊಡ್ಡ ದುರಂತ ಸಂಭವಿಸಿತ್ತು. ಹಲವು ತಿಂಗಳು ಕಳೆದರೂ ಈ ದುರಂತದಲ್ಲಿ ಮೃತಪಟ್ಟವರ ಅಧಿಕೃತ ಅಂಕಿ ಅಂಶಗಳನ್ನು ಒಬ್ಬ ಸ್ವಾಮೀಜಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಅಲ್ಲಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿಲ್ಲ. ಕಾಲ್ತುಳಿತ ಘಟನೆಗೆ ಒಬ್ಬ ಅಧಿಕಾರಿಯನ್ನೂ ಸಹ ಹೊಣೆಯಾಗಿಸಿ ಅಮಾನತು ಮಾಡಿಲ್ಲ. ಆದರೆ ಕರ್ನಾಟಕದ ಸರ್ಕಾರ ಎಡಿಜಿಪಿ ಮಟ್ಟದ ಅಧಿಕಾರಿಯನ್ನೇ ಅಮಾನತು ಮಾಡಿದೆ.

ಈಗ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ನಮ್ಮ ರಾಜ್ಯದ ಈ ಸ್ವಾಮೀಜಿಗಳು ಪ್ರಯಾಗ್ ರಾಜ್ ಭಕ್ತರ ಸಾವಿಗೆ ಮಿಡಿದು. ಬಿಜೆಪಿಯ ಯೋಗಿ ಆದಿತ್ಯನಾಥ್ ವಿರುದ್ಧ ಆಗ ಏಕೆ ದೂರು ನೀಡಲಿಲ್ಲ ಎನ್ನುವ ಪ್ರಶ್ನೆಯೂ ಇಲ್ಲಿ ಮೂಡುತ್ತದೆ. ಆಧ್ಯಾತ್ಮಿಕತೆಯ ಮೂಲಕ ನೈತಿಕ ಮತ್ತು ಸಾಮಾಜಿಕ ಜಾಗೃತಿ ಮೂಡಿಸಬೇಕಾದವರು ರಾಜಕೀಯದ ರಾಡಿಯಲ್ಲಿ ಬಿದ್ದು ಮನಸ್ಸು ಮತ್ತು ಮೈಯನ್ನು ಕೊಳಕು ಮಾಡಿಕೊಳ್ಳುವುದು ಹಾಗೂ ಕಾವಿಯ ಪ್ರಖರತೆಗೆ ಧಕ್ಕೆ ತಂದುಕೊಳ್ಳುವುದು ಸರಿಯಲ್ಲ. ದೂರು ನೀಡಿರುವ ಸ್ವಾಮೀಜಿಗಳಲ್ಲಿ ಒಬ್ಬರು. ಈ ಹಿಂದೆ ಕೋಮು ಸೌಹಾರ್ದ ಹದಗೆಡಿಸುವ ಹೇಳಿಕೆಗಳಿಗೆ ಹೆಸರಾಗಿದ್ದರು. ಹೀಗಾಗಿ ಈ ಸ್ವಾಮೀಜಿಗಳ ತಂಡದ ಹಿಂದೆ ಯಾರ ಕುಮ್ಮಕ್ಕಿದೆ ಎನ್ನುವುದನ್ನು ಸಮಾಜ ಬಹಳ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ಎಲ್ಲವನ್ನು ತ್ಯಜಿಸಿದ ಸನ್ಯಾಸಿಗಳು ಎಲ್ಲರೊಳಿತಿಗಾಗಿ ನಡೆಯಬೇಕು ಮತ್ತು ದುಡಿಯಬೇಕು. ಅದು ಬಿಟ್ಟು ಸಮಾಜಘಾತಕರ ವಿಭಜನಕಾರಿ ಹುನ್ನಾರಕ್ಕೆ ಆಯುಧದಂತೆ ವರ್ತಿಸುವುದು ಸರಿಯಲ್ಲ ಎಂದು ಬೆಂಗಳೂರು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *