ನರೇಗಾ ಕಾರ್ಮಿಕರ ಅಲಕ್ಷ್ಯತನದಿಂದ ಮೂರು ಹುಲ್ಲಿನ ಬಣವಿಗಳು ಭಸ್ಮ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು





Three haystacks burnt to ashes due to negligence of NREGA workers


ಗಂಗಾವತಿ ಸೂರ್ಯನಾಯಕ ತಾಂಡಾದಲ್ಲಿ
ಮೂರು ಹುಲ್ಲಿನ ಬಣವಿಗಳು ಭಸ್ಮ , ರೈತರಿಗೆ ಪರಿಹಾರ ನೀಡಲು ಒತ್ತಾಯ: ಬಾಲಾಜಿ ಚವ್ಹಾಣ್‌ನರೇಗಾ ಕಾರ್ಮಿಕರ ಅಲಕ್ಷ್ಯತನದಿಂದ

ಜಾಹೀರಾತು

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ಬಸಾಪಟ್ಟಣ ಗ್ರಾಮ ಪಂಚಾಯತಿಯ ಸೂರ್ಯನಾಯಕ ಲಂಬಾಣಿ ತಾಂಡಾದಲ್ಲಿನ ಕೆರೆಯ ಅಭಿವೃದ್ಧಿ ಕಾಮಗಾರಿ ಕೆಲಸಕ್ಕೆ ಬಂದಿದ್ದ ಚಿಕ್ಕಬೆಣಕಲ್‌ ಗ್ರಾಮ ಪಂಚಾಯತಿಯ ನರೇಗಾ ಕೂಲಿ ಕಾರ್ಮಿಕರ ಅಜಾಗರೂಕತೆಯಿಂದ ಅಲ್ಲಿನ ಕೃಷಿ ಜಮೀನುಗಳಲ್ಲಿನ 03 ಹುಲ್ಲಿನ ಬಣವಿಗಳು ಮೇ-5 ಮಂಗಳವಾರ ಬೆಳಗ್ಗೆ 11 ರ ಸುಮಾರಿಗೆ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೂಡಲೇ

ಚಿಕ್ಕಬೆಣಕಲ್‌ ಗ್ರಾ.ಪಂ ಯಿಂದ ರೈತರಿಗೆ ಪರಿಹಾರಧನ ನೀಡಬೇಕೆಂದು ಅಖಿಲ ಕರ್ನಾಟಕ ಬಂಜಾರ್ ಲಂಬಾಣಿ ಸೇವಾಲಾಲ್ ಸಮಾಜ ಸೂರ್ಯನಾಯಕ ತಾಂಡದ ಕಾರ್ಯಾಧ್ಯಕ್ಷರಾದ ಬಾಲಾಜಿ ಚವ್ಹಾಣ್ ಒತ್ತಾಯಿಸಿದರು.
ಕೆರೆ ಅಭಿವೃದ್ಧಿ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರು ವಿ‍ಶ್ರಾಂತಿಗಾಗಿ ಬಣವಿ ನೆರಳಿಗೆ ಕುಳಿತು ಬೀಡಿ, ಸಿಗರೇಟ್‌ ಸೇದುವಾಗ ಬೆಂಕಿ ಗೀರಿದ್ದರಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಅಲ್ಲಿನ ಮೂರು ಬಣವಿಗಳು ಭಸ್ಮಗೊಂಡಿರುತ್ತವೆ. ಸದರಿ ಜಮೀನುಗಳ ಸಂತ್ರಸ್ಥರಾದ ಶ್ರೀನಿವಾಸ ತಂ. ಧರ್ಮಪ್ಪ, 14 ಎಕರೆ ಜಮೀನಿನ ಹುಲ್ಲಿನ ಬಣವೆ ಅಂದಾಜು ನಷ್ಟ ರೂ. 70,000, ಕೃಷ್ಣಪ್ಪ ತಂ. ಧರ್ಮಪ್ಪ, 12 ಎಕರೆ ಜಮೀನಿನ ಹುಲ್ಲಿನ ಬಣವೆ ಅಂದಾಜು ನಷ್ಟ ರೂ. 60,000 ಹಾಗೂ ಅರಮೇಶ ತಂ. ಪಕೀರಪ್ಪ, 10 ಎಕರೆ ಜಮೀನಿನ ಹುಲ್ಲಿನ ಬಣವೆ ಅಂದಾಜು ನಷ್ಟ ರೂ. 50,000 ಗಳವರೆಗೆ ನಷ್ಟವುಂಟಾಗಿರುತ್ತದೆ. ಇವರು ಕೃಷಿ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಸಾಗುವಳಿ ಮಾಡುತ್ತಿದ್ದರು. ಈ ನಷ್ಟದಿಂದ ಇವರು ತುಂಬಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ಧಾರೆ. ಕೂಡಲೇ ಚಿಕ್ಕಬೆಣಕಲ್‌ ಗ್ರಾಮ ಪಂಚಾಯತಿಯಿಂದ ಸದರಿ ಗುತ್ತಿಗೆ ಕೃಷಿಕರಿಗೆ ಪರಿಹಾರಧನ ನೀಡಬೇಕೆಂದು ಒತ್ತಾಯಿಸಿದೆ ಎಂದರು.
ಈ ಸಂದರ್ಭದಲ್ಲಿ ಬಸಾಪಟ್ಟಣ ಗ್ರಾ.ಪಂ ಮಾಜಿ ಸದಸ್ಯರಾದ ಗೌರಮ್ಮ ಶಂಕರ ನಾಯಕ, ತಾಂಡಾದ ಪ್ರಮುಖರಾದ ಹನುಮಂತಪ್ಪ ರಾಠOಡ್‌, ಸಕ್ರಪ್ಪ ಕಾರಭಾರಿ, ಶಂಕ್ರಪ್ಪ ಡಾವು, ವಲ್ಲಭ ವೇಣುಗೋಪಾಲಕೃಷ್ಣ, ಅಗ್ನಿಶಾಮಕ ಸಿಬ್ಬಂದಿಗಳು, ಗ್ರಾಮ ಆಡಳಿತಾಧಿಕಾರಿ ಹಾಗೂ ತಾಂಡಾದ ಹಿರಿಯರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.

Total Views: 0
Share This Article