ಪಿಡಿಓ ಮುಕ್ತಂ ಹುಸೇನ್ ಸಾವಿನ ತನಿಖೆಯಾಗಲಿ

H.Mallikarjun
H.Mallikarjun - Kalyanasiri
4 Min Read
ಜಾಹೀರಾತು
PDO Muktam Hussain's death should be investigated




ಪಿಡಿಓ ಮುಕ್ತಂ ಹುಸೇನ್ ಸಾವಿನ ತನಿಖೆಯಾಗಲಿ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಒತ್ತಾಯ

ಜಾಹೀರಾತು

ವಿವಿದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಪ್ಪಳ ಜಿಪಂ ಸಿಇಓಗೆ ಮನವಿ

ಕೊಪ್ಪಳ: ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಕೆಲಸದ ಒತ್ತಡ, ಬಾಕಿ ವೇತನ ಬಿಡುಗಡೆ ವಿಳಂಬ ಹಾಗೂ ಮಾನಸಿಕ ಕಿರುಕುಳದಿಂದಾಗಿ ಕೊತಬಾಲ ಗ್ರಾ.ಪಂ. ಪಿಡಿಓ ಮುಕ್ತಂ ಹುಸೇನ ಕರಡಿಗುಡ್ಡಅವರ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ಹಾಗೂ ರಾಜ್ಯದ ಎಲ್ಲಾ ಪಿಡಿಓಗಳ ಸೇವಾರಕ್ಷಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ ಅವರಿಗೆ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಮುಕ್ತಂ ಹುಸೇನ ಕರಡಿಗುಡ್ಡ (46 ) ಅವರು ಅಸೂಟಿ ಹಾಗೂ ಕೊತಬಾಲ ಎರಡು ಗ್ರಾಮಪಂಚಾಯತಿಗಳ ಅಭಿವೃದ್ಧಿಅಧಿಕಾರಿಯಾಗಿ (ಹೆಚ್ಚುವರಿ ಪ್ರಭಾರ ಸೇರಿ) ಕರ್ತವ್ಯ ನಿರ್ವಹಿಸುತ್ತಾ ಅತಿಯಾದ ಕೆಲಸದ ಒತ್ತಡ ಹಾಗೂ ಹಿಂದಿನ ಪ್ರಕರಣವೊಂದರ ಮೇಲಿದ್ದ ಲೋಕಾಯುಕ್ತ ತನಿಖೆ ಹಾಗೂ ವೇತನವಿಲ್ಲದೆ ಬೇಸತ್ತುಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಇಡೀ ರಾಜ್ಯದ ಪಿಡಿಒ ಸಮುದಾಯವನ್ನುತೀವ್ರ ಆಘಾತಕ್ಕೀಡು ಮಾಡಿದೆ. ಈ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿಅಮಾನತುಗೊಂಡು, ಕಳೆದ 8-9 ತಿಂಗಳಿನಿಂದ ಅವರಿಗೆ ಯಾವುದೇ ವೇತನವಾಗಿರಲಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ವೇತನವಿಲ್ಲದೆ ಸಂಸಾರ ಸಾಗಿಸಲು ಕಷ್ಟವಾಗಿ, ಅವರ ಪತ್ನಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವಂತ ಚಿಂತಾಜನಕ ಸ್ಥಿತಿ ಅವರ ಕುಟುಂಬ ಕ್ಕೊದಗಿತ್ತು. ಸಣ್ಣಸಣ್ಣ ಮಕ್ಕಳ ಭವಿಷ್ಯ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಮಾನಸಿಕ ನೊಂದು ಆತ್ಮಹ್ಯತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಕೇವಲ ಒಬ್ಬ ಅಧಿಕಾರಿಯದ್ದು ಮಾತ್ರವಲ್ಲ, ಬದಲಾಗಿ ಇಡೀ ರಾಜ್ಯದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಎದುರಿಸುತ್ತಿರುವ ನೈಜ ಮತ್ತುಭೀಕರ ಪರಿಸ್ಥಿತಿಗೆ ಹಿಡಿದ ಕನ್ನಡಿಯ ಆಗಿದೆ. ಗ್ರಾಮೀಣಾಭಿವೃದ್ಧಿಯ ಆಧಾರಸ್ತಂಭವಾಗಿರುವ ಪಿಡಿಯೋಗಳು ಇಂದು ತೀವ್ರವಾದ ಕೆಲಸದ ಒತ್ತಡದಲ್ಲಿ ನಲುಗಿಹೋಗುತ್ತಿವೆ. ಇದಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಮೇಲೆ ನಡೆಯುತ್ತಿರುವ ನಿರಂತರ ಒತ್ತಡಗಳು ಹಾಗೂ ಸಂಭವಿಸುತ್ತಿರುವ ಅಕಾಲಿಕ ವಾಗಿವೆ. ಈ ಕುರಿತು ಅಧ್ಯಯನಕ್ಕಾಗಿ ಮೀನಾಕ್ಷಿ ಸುಂದರಂ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿ ಇದುವರೆಗೂ ಸರಕಾರಕ್ಕೆ ವರದಿ ಸಲ್ಲಿಸಿಲ್ಲ. ನೌಕರರ ಜೀವದ ಜೊತೆ ಚೆಲ್ಲಾಟ ವಾಡುತ್ತಿರುವ ಇಂತಹ ವ್ಯವಸ್ಥಿತ ಒತ್ತಡಗಳನ್ನು ತಡೆಯಲು ಈ ವರದಿ ಅತ್ಯಂತ ಅವಶ್ಯಕವಾಗಿದೆ. ಕೂಡಲೇ ಸಮಿತಿ ವರದಿ ಸಲ್ಲಿಸುವಂತೆ ಒತ್ತಾಯಿಸಿದರು.

ಮುಕ್ತಂಹುಸೇನ ಅವರ ಸಾವಿನ ತನಿಖೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ಅವರ ಕುಟುಂಬಕ್ಕೆ ಇಲಾಖೆಯಿಂದ ಸಿಗಬೇಕಾದ ಎಲ್ಲ ಸೌಲಭ್ಯ್ಗಳನ್ನುಒದಗಿಸಬೇಕು. ಬಾಕಿ ವೇತನವನ್ನು ತಕ್ಷಣವೇ ಬಿಡಗಡೆ ಮಾಡಬೇಕು ಮತ್ತು ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು. ಆಯುಕ್ತಾಲಯ, ಜಿ.ಪಂ. ಮತ್ತು ತಾ.ಪಂ. ಕಚೇರಿ ಸಿಬ್ಬಂದಿಗಳ ಕಡ್ಡಾಯ ವರ್ಗಾವಣೆ ನಿಯಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೂ ಅನ್ವಯವಾಗಬೇಕು. ಪ್ರಸ್ತುತ ಈ ಮೇಲಿನ ಕಚೇರಿಗಳಲ್ಲಿ ಹಲವು ಸಿಬ್ಬಂದಿಗಳು 10 ರಿಂದ 15ವರ್ಷಗಳಿಂದ ವರ್ಷಗಳಿಂದ ಒಂದೇ ಸ್ಥಳದಲ್ಲಿ/ ಹುದ್ದೆಯಲ್ಲಿ ಬೇರು ಬಿಟ್ಟಿದ್ದು, ಇವರಿಂದ ಕೆಳ ಹಂತದ ಅಧಿಕಾರಿಗಳಿಗೆ (ಪಿಡಿಒಗಳಿಗೆ) ವಿನಾಕಾರಣ ಕಿರುಕುಳ ನೀಡುವ ಹಾಗೂ ಕಡತಗಳನ್ನು ವಿಳಂಬ ಮಾಡುವ ಸನ್ನಿವೇಶಗಳು ಎದುರಾಗುತ್ತಿವೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಪಿಡಿಓಗಳ ಮೇಲಿನ ದಬ್ಬಾಳಿಕೆ ತಪ್ಪಿಸಲು ಇವರ ವರ್ಗಾವಣೆ ಕಡ್ಡಾಯವಾಗಿ ಮಾಡಬೇಕು. ರಾಜ್ಯದಲ್ಲಿ ಪಿಡಿಓಗಳಿಗೆ ಒತ್ತಡ ರಹಿತ ಕೆಲಸದ ವಾತಾವರಣ ನಿರ್ಮಿಸಬೇಕು. ಸಿಬ್ಬಂದಿ ಕೊರತೆ ನೆಪದಲ್ಲಿ ಒಬ್ಬರೇ ಅಧಿಕಾರಿಗೆ ಎರಡೆರಡು ಪಂಚಾಯತಿಗಳ ಹೆಚ್ಚುವರಿ ಹೊರೆ ನೀಡುವುದನ್ನುತಪ್ಪಿಸಬೇಕು. ಮೇಲಧಿಕಾರಿಗಳು ಪಿಡಿಓಗಳ ಮೇಲೆ ಕೇವಲ ದಬ್ಬಾಳಿಕೆ ಮಾಡುವ ಬದಲು ಹಿರಿಯ ಅಧಿಕಾರಿಗಳು ಸಹಕರಿಸುವಂತೆ ಕಟ್ಟು ನಿಟ್ಟಿನ ಸೂಚನೆ ಹೊರಡಿಸಬೇಕು. ಸಣ್ಣಪುಟ್ಟ ಆಡಳಿತಾತ್ಮಕ ಕಾರಣಗಳಿಗೆ ಅಥವಾ ರಾಜಕೀಯ ಒತ್ತ ಡಗಳಿಗೆ ಮಣಿದು ಪಿಡಿಓಗಳನ್ನು ಏಕಾಏಕಿ ಅಮಾನತು ಮಾಡುವ ಅನಿಶ್ಚಯ ಪದ್ಧತಿ ಕೂಡಲೇ ಕೈಬಿಡಬೇಕು. ಯಾವುದೇ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಅಥವಾ ಲೋಕಾಯುಕ್ತ ಪ್ರಕರಣ ದಾಖಲಾಗಿದ್ದರೆ, ಅದನ್ನು ಕಾಲಮಿತಿಯೊಳಗೆ (ಸಮಯದ ಮಿತಿ) ಪೂರ್ಣಗೊಳಿಸಬೇಕು. ವಿಚಾರಣೆ ನೆಪದಲ್ಲಿ ತಿಂಗಳುಗಟ್ಟಲೆ ಅಮಾನತಿನಲ್ಲಿಟ್ಟು, ಸ್ಥಳ ನಿಯುಕ್ತಿಗೊಳಿಸದೆ, ವೇತನವೂ ನೀಡದೆ ಅಧಿಕಾರಿಗಳನ್ನು ಮತ್ತು ಅವರ ಕುಟುಂಬವನ್ನು ಉಪವಾಸ ಕೆಡುವ ವ್ಯವಸ್ಥೆ ಬದಲಾಗಬೇಕು. ವಿಚಾರಣಾ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಕಡ್ಡಾಯವಾಗಿ ಹಾಗೂ ಸಕಾಲದಲ್ಲಿ ಪಾವತಿಸಬೇಕು. ಕೂಡಲೇ ಮೀನಾಕ್ಷಿ ಸುಂದರಂ ಸಮಿತಿಯಿಂದ ವರದಿ ಪಡೆದು, ಅದರಲ್ಲಿನ ಶಿಫಾರಸುಗಳನ್ನು ಜಾರಿಗೊಳಿಸುವ ಮೂಲಕ ನೌಕರರ ಸುರಕ್ಷತೆ ಮತ್ತು ಹಿತರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ದಾಖಲೆ ರಹಿತ ಮತ್ತು ಆನ್ಲೈನ್ ವರದಿಗಳ ಆಧಾರದ ಮೇಲೆ ಬರುವ ದೂರುಗಳನ್ನು ತನಿಖೆ ಮಾಡುವುದು/ ಇಲಾಖಾ ವಿಚಾರಣೆ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಈ ಸಂಧರ್ಭದಲ್ಲಿ ಉಪಕಾರ್ಯದರ್ಶಿಗಳು ಶ್ರೀ ಟಿ ಕೃಷ್ಣಮೂರ್ತಿ, ಯೋಜನಾ ನಿರ್ದೇಶಕರು ಶ್ರೀ ಎಸ್ ಎನ್ ಕಾಂಬ್ಳೆ, ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ ಸುರೇಶ ಚಲವಾದಿ,ರಾಜ್ಯ ಪರಿಷತ್ ಸದಸ್ಯರಾದ ಶ್ರೀ ಶಿವಬಸಪ್ಪ, ಜಿಲ್ಲಾ ಖಜಾಂಚಿ ಶ್ರೀ ನಿಂಗಪ್ಪ ಮೂಲಿಮನಿ, ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಗ್ರೇಡ್-1 & 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ RDPR ನೌಕರರು ಪಾಲ್ಗೊಂಡಿದ್ದರು.

Total Views: 0
Share This Article