ಬಲ್ಡೋಟ ತೊಲಗಿಸಿ 187ನೇ ದಿನದ ಹೋರಾಟಕ್ಕೆ ರಾಜ್ಯ ರೈತ ಸಂಘ ಬೆಂಬಲಕೆರೆಯಲ್ಲ ಎನ್ನುವ ಕಥೆ ಕಟ್ಟಿದ ಅಧಿಕಾರಿಗಳ ಮೇಲೆ ತನಿಖೆ: ಶಾಸಕ ದರ್ಶನ್

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Investigation into officials who fabricated a story that the State Farmers' Association was not a source of support for the 187th day of the struggle to remove Baldota: MLA Darshan

ಬಲ್ಡೋಟ ತೊಲಗಿಸಿ 187ನೇ ದಿನದ ಹೋರಾಟಕ್ಕೆ ರಾಜ್ಯ ರೈತ ಸಂಘ ಬೆಂಬಲಕೆರೆಯಲ್ಲ ಎನ್ನುವ ಕಥೆ ಕಟ್ಟಿದ ಅಧಿಕಾರಿಗಳ ಮೇಲೆ ತನಿಖೆ: ಶಾಸಕ ದರ್ಶನ್

ಜಾಹೀರಾತು


ಕೊಪ್ಪಳ: ನಾನು ಹಿರೇಬಗನಾಳ ಭೇಟಿ ಮಾಡಿ ಜನರನ್ನು ಮಾತನಾಡಿಸಿದಾಗ ಅವರು ತಮಗೆ ಬಂದ ಜೀವನದ ಅಂತ್ಯ ಕಾಲವಾಗಿದೆ ಎಂದು ಕಣ್ಮೀರು ಹಾಕಿ ಮಹಿಳೆಯರು ಗೋಳು ತೋಡಿಕೊಂಡಾಗ ನನಗೂ ಕಣ್ಮೀರು ಬಂದಿತು ಎಂದು ಬಲ್ಡೋಟ ವಿರೋಧಿ ಹೋರಾಟದ ವೇದಿಕೆಗೆ ಬೆಂಬಲ ನೀಡಲು ಆಗಮಿಸಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಮನನೊಂದು ಮಾತನಾಡಿದರು. ಅವರು ಇಲ್ಲಿ ಬಂದಿರುವ ಕಾರ್ಖಾನೆಗಳು ಸಮಗ್ರ ಅಭಿವೃದ್ಧಿಗೆ ವಿರುದ್ಧವಾಗಿವೆ. ಇಷ್ಟೊಂದು ಗಂಭೀರ ಸ್ವರೂಪದ ಕಾಯಿಲೆಗಳು ಬಾಧಿಸುವಾಗಲೂ ಇಲ್ಲಿನ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಜನರ ಬಗ್ಗೆ ಅನುಕಂಪವಿಲ್ಲ. ಹೇಗಾದರೂ ಮಾಡಿ ತಮ್ಮ ಸೇವ ಅವಧಿ ಮುಗಿದರಷ್ಟೆ ಸಾಕು ಎನ್ನುವಂತೆ ನಡೆದುಕೊಳ್ಳುತ್ತಾರೆ. ಇಂತವರಿಂದ ಎಂಥ ಸೇವೆ ನಿರೀಕ್ಷೆ ಮಾಡಲು ಸಾಧ್ಯ.? ಬಸಾಪುರ ಕೆರೆ 44.35 ಎ. ವಿಸ್ತೀರ್ಣ ಇದ್ದು ಇದು ಕೆರೆಯೇ ಅಲ್ಲ ಎನ್ನವ ಕಥೆ ಕಟ್ಟಿದ ಅಧಿಕಾರಿಗಳ ಮೇಲೆ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದರು. ನಾನು ಪರಿಸರ ಇಲಾಖೆ ಅಧ್ಯಕ್ಷ ಎಂ.ಪಿ. ನರೇಂದ್ರಸ್ವಾಮಿ ಇವರಿಗೆ ಪೋನ್ ಮಾಡಿದ ಮಾತನಾಡಿದ ದರ್ಶನ್ ಹಿರೇಬಗನಾಳ ಸುತ್ತಲಿನ ಯಾವುದೇ ಮಾಲಿನ್ಯಕಾರಿ ಕಾರ್ಖಾನೆಗಳು ಇಲ್ಲಿ ನಡೆಸಬಾರದು. ಇಲ್ಲಿರುವ ಜನರ ಜೀವ, ಆರೋಗ್ಯಕ್ಕಿಂತ ಯಾವುದೂ ದೊಡ್ಡದಲ್ಲ ಎಂದು ತಾಕೀತು ಮಾಡಿದ್ದೇನೆ ಎಂದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೆಲವು ವಿವೇಕವಿಲ್ಲದ ರಾಜಕಾರಣಿಗಳು ಕಾರ್ಖಾನೆ ಬದಲಾಗಿ ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಹೇಳುತ್ತಾರೆ. ಇವರಿಗೆ ಮೊದಲು ಅವರ ಮನೆಯನ್ನು ಬೇರೆಲ್ಲೊ ಹೋಗಿ ಜೀವನ ಕಟ್ಟಿಕೊಳ್ಳಲಿ ಆಗ ಗೊತ್ತಾಗುತ್ತದೆ. ಮೂಲನಿವಾಸ ಸ್ಥಾನ ಬಿಟ್ಟು ಹೋಗುವುದು ಅಷ್ಟೊಂದು ಸುಲಭದ ಕೆಲಸವೇ? ಈ ಹೋರಾಟ ಮತ್ತೊಂದು ದೇವನಹಳ್ಳಿ ಹೋರಾಟವಾಗಿ ಗೆಲ್ಲುತ್ತದೆ. ಹೋರಾಟದ ಗೆಲುವು ಅಂದರೆ ಜೀವದ ಉಳಿವು, ಬದುಕಿನ ಉಳಿವು ಎಂದರು.
ಇನ್ನೊಬ್ಬ ರಾಜ್ಯ ಮುಖಂಡ ಚಾಮರಸ ಮಾಲಿ ಪಾಟೀಲ, ಮಲ್ಲಿಕಾರ್ಜುನ ಸತ್ಯಂಪೇಟೆ, ಎಂ.ಎಲ್.ಕೆ ನಾಯ್ಡು ಮಾತನಾಡಿ ಈ ಹೋರಾಟಕ್ಕೆ ಬೆಂಬಲಿಸುತ್ತೇವೆ ಎಂದರು. ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಗಣೆಶರೆಡ್ಡಿ ಕನಕಗಿರಿ, ಶರಣಷ್ಪ ಕುರುಬರು, ವಜೀರಸಾಬ ತಳಕಲ್, ಈರಪ್ಪ ಗುಳಗಣ್ಣವರ, ಗಿರಿಯಪ್ಪ ಗುಳಗಣ್ಣವರ, ಬಸಪ್ಪ ಮಂಡಲಗೇರಿ, ಚನ್ನವೀರಯ್ಯ ಹಿರೇಮಠ, ರಮೇಶ ಡಂಬ್ರಳ್ಳಿ, ಮಂಜುನಾಥ ಮಾಲಿ ಪಾಟೀಲ, ಶಿವನಗೌಡ ವಿ.ಬಿ, ಬಸವರಾಜ ಹಳ್ಳಿಕೇರಿ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಬಾವಿ, ಮೋಹನ್ ಅಣ್ಮಿಗೇರಿ, ಮಹಾದೇವಪ್ಪ ಮಾವಿನಮಡು, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಹಲಗೇರಿ ಇದ್ದರು.

Total Views: 3
Share This Article