Umadevi, who wrote her graduation exam as a newlywed

ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೨೦೨೫ ಮೇ-ಜೂನ್‌ನ ೨, ೪, ೬ನೇ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭಗೊಂಡಿದ್ದು, ವಿಶೇಷವೆಂದರೆ ಜೂನ್-೬ ಭಾನುವಾರ ಮದ್ಯಾಹ್ನ ೨:೩೦ಕ್ಕೆ ನಡೆದ ೨ನೇ ಸೆಮಿಸ್ಟರ್ ಪರೀಕ್ಷೆಗೆ ಸಂಕಲ್ಪ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾದ ಉಮಾದೇವಿ ತಂ. ಹುಲುಗಪ್ಪ ಎಂಬ ವಿದ್ಯಾರ್ಥಿನಿಯು ಅದೇ ದಿನ ಬೆಳಗ್ಗೆ ೧೦:೦೦ ಗಂಟೆಗೆ ವಿವಾಹವಾಗಿ, ೧೧ ರಿಂದ ೨:೦೦ ರವರೆಗೆ ನೂರಾರು ಬಂಧು ಬಾಂಧವರೊಂದಿಗೆ ಆರತಕ್ಷತೆ ಕಾರ್ಯಕ್ರಮ ಮುಗಿಸಿಕೊಂಡು ನವ ವಧುವಾಗಿ ಪರೀಕ್ಷೆ ಬರೆದಿರುತ್ತಾರೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಸವರಾಜ ಶಿರಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಪರೀಕ್ಷೆ ಬರೆದ ನಂತರ ಮತ್ತೇ ತನ್ನ ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಪಟ್ಟಳು.