ಗಂಗಾವತಿಯಲ್ಲಿ ಸಪ್ತಸ್ವರ ಸಾಂಸ್ಕೃತಿಕ ಕಲಾಸಂಘ ನೋಂದಣಿ ಮೂಲಕ ಅಸ್ತಿತ್ವಕ್ಕೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Saptaswara Cultural Arts Association comes into existence through registration in Gangavathi




ಗಂಗಾವತಿಯಲ್ಲಿ ಸಪ್ತಸ್ವರ ಸಾಂಸ್ಕೃತಿಕ ಕಲಾಸಂಘ ನೋಂದಣಿ ಮೂಲಕ ಅಸ್ತಿತ್ವಕ್ಕೆ

ಜಾಹೀರಾತು

ಗಂಗಾವತಿ: ಸಪ್ತಸ್ವರ ಸಾಂಸ್ಕೃತಿಕ ಕಲಾ ಸಂಘ (ರಿ) ವನ್ನು ನೋಂದಣಿ ಮಾಡಿಸುವ ಮೂಲಕ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಆರ್.‌ ಕಣ್ಣನ್‌ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಜೂನ್‌-01 ರಂದು ಗಂಗಾವತಿ ನಗರದ ದೊಡ್ಡಮನೆ ಶಂಭಣ್ಣ ಕರೋಕೆ ಸ್ಡುಡಿಯೋದಲ್ಲಿ ಸಂಘದ ನೋಂದಣಿ ಪ್ರಮಾಣಪತ್ರವನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ಆಡಳಿತ ಮಂಡಳಿಯಲ್ಲಿ ಗೌರವ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ತಟ್ಟಿ, ಉಪಾಧ್ಯಕ್ಷರಾಗಿ ಶ್ಯಾಮಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ವಿರೇಶ ಸಿ., ಸಹ ಕಾರ್ಯದರ್ಶಿಯಾಗಿ ಪ್ರವೀಣಕುಮಾರ, ಖಜಾಂಚಿಯಾಗಿ ವಿರೇಶ ಮಹಾದೇವಪ್ಪ ರವರುಗಳು ನೇಮಕಗೊಂಡಿದ್ದು, ಅದೇರೀತಿ ಸದಸ್ಯರುಗಳಾಗಿ ಮೌನೇಶ, ಲಕ್ಕಪ್ಪ ನಾಯಕ, ಎಂ. ಸತ್ಯನಾರಾಯಣ, ಅಮೀರ ಅಲಿ, ಕೆ. ಹಾಜಿ ಅಲಿಬಾಬಾ, ಕುರುಗೋಡು ವೆಂಕಟೇಶ, ಕುತುಬುದ್ದೀನ್‌ ಸಾಬ, ಹೋಟಲ್‌ ವಿರುಪಾಕ್ಷಿ, ಹಾಜಿ ಅಲಿಬಾಬಾ, ಭಾಗ್ಯಶ್ರೀ ಗುಲಬುರ್ಗಾ, ವಿಜಯಲಕ್ಷ್ಮಿ ಹಿರೇಮಠ, ಸಾವಿತ್ರಿ ಶ್ರೀರಾಮನಗರ, ಜಿ. ನೀಲಕಂಠ, ಜಿ. ವೀರಭದ್ರಪ್ಪ, ಗಾಳಿ ಶಿವಪ್ಪ, ಮೌನೇಶ, ಮುಸ್ತಫ, ಪ್ರವೀಣ ಗೋಟೂರು, ಶಂಬಣ್ಣ, ಸಿ.ಡಿ ರಾಮಕೃಷ್ಣ, ಸಿಂಧನೂರು ಸಾಧಿಕ್‌, ನಾರಾಯಣ ಗಂಗಾವತಿ, ಹನುಮೇಶ, ಹುಸೇನಪೀರಸಾಬ್‌, ಬಳ್ಳಾರಿ ರಾಮಣ್ಣ, ಖಾಜಾವಲಿಸಾಬ , ರುಕ್ಮುದ್ದೀನಸಾಬ್‌, ಸಮೀನಾ ಅವರುಗಳು ಇರುತ್ತಾರೆ.
ಇದೇ ಸಂದರ್ಭದಲ್ಲಿ ಸಂಘದ ಲಕ್ಕಪ್ಪ ನಾಯಕ, ಟಿ. ಶ್ಯಾಮಣ್ಣ, ವಿರೇಶ ಹಿರೇಮಠ, ಸಾವಿತ್ರಿ, ಮೌನೇಶ, ಹನುಮೇಶ, ಸಂತೋಷ ಹಾಗೂ ನಗರಸಭೆ ಮ್ಯಾನೇಜರ್‌ ಷಣ್ಮುಖಪ್ಪ ಅವರುಗಳ ಜನ್ಮದಿನದ ಅಂಗವಾಗಿ ಕೇಕ್‌ ಕತ್ತರಿರಿಸಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು
ಸಂಘದ ಅಧ್ಯಕ್ಷರಾದ ಆರ್.‌ ಕಣ್ಣನ್‌ ಅವರು ಮಾತನಾಡಿ, ಸಂಘವು ಕಲಾವಿದರನ್ನು ಗುರುತಿಸಿ ಬೆಳಕಿಗೆ ತರುವಲ್ಲಿ ಶ್ರಮವಹಿಸಲಿದೆ ಹಾಗೂ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಕಲಾವಿದರಿಗೆ ಒದಗಿಸಿಕೊಡಲಾಗುವುದು, ಅಲ್ಲದೇ ಸಂಘದಿಂದ ಪ್ರತಿವರ್ಷ ಆಚರಿಸಲ್ಪಡುವ ವರ್ಷಾಚರಣೆಯಲ್ಲಿ ಬಡ ಕಲಾವಿದರಿಗೆ ಪ್ರೋತ್ಸಾಹಿಸಿ ಸನ್ಮಾನಿಸಿ ಗೌರವಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.

Total Views: 0
Share This Article