Breaking News

ಶಿವಾಜಿ ಮಹಾರಾಜರ ಆದರ್ಶಗಳನ್ನು ಪಾಲಿಸಿ: ಸಚಿವ ಸಂತೋಷ್ ಲಾಡ್

Follow the ideals of Shivaji Maharaj: Minister Santosh Lad

ಜಾಹೀರಾತು
ಜಾಹೀರಾತು

~ಸಚೀನ ಆರ್ ಜಾಧವ
ಸಾವಳಗಿ: ಶಿವಾಜಿ ಮಹಾರಾಜರು ಮುಸ್ಲಿಂ ಸಮುದಾಯದ ವಿರೋಧಿಯಾಗಿಲ್ಲ, ಎಲ್ಲಾ ಸಮುದಾಯದವರ ಜೋತೆ ಉತ್ತಮ ಒಡನಾಟ ಹೊಂದಿದ್ದರು, ಯಾರು ಕೂಡಾ ಮುಸ್ಲಿಂ ವಿರೋಧಿ ಅನ್ನಬಾರದು, ಶಿವಾಜಿ ಮಹಾರಾಜರ ಆದರ್ಶಗಳನ್ನು ಇಂದಿನ ಯುವಕರು ಪಾಲಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದ ಆರಾದ್ಯ ದೇವಿ ಶ್ರೀ ಅಂಬಾ ಭವಾನಿ ಜಾತ್ರಾ ಮಹೋತ್ಸವದ ನಾಲ್ಕುನೇಯ ದಿನವಾದ ಶುಕ್ರವಾರ ಧರ್ಮ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮರಾಠಾ ಸಮಾಜದವರು ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆಯಲು ಎಲ್ಲರೂ ಸಹಕರಿಸಬೇಕು, ಉತ್ತಮ ಒಡನಾಟ ಒಂದಿದ್ದರೆ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ನಂತರ ಆನಂದ ನ್ಯಾಮಗೌಡ ಮಾತನಾಡಿ ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ಶ್ರೀ ಅಂಬಾ ಭವಾನಿ ದೇವಸ್ಥಾನದ ಭವನಕ್ಕೆ 1 ಕೋಟಿ ಅನುದಾನ ನೀಡುವುದಾಗಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂಜೂರ ಮಾಡಿದರು, ಆ ಹಣ ಇನ್ನೂ ಬಂದಿಲ್ಲ, ಇದರ ಬಗ್ಗೆ ನಾನು ಸಂತೋಷ್ ಲಾಡ್ ಸೇರಿಕೊಂಡು ಹಣ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾನಿಧ್ಯ ತಮ್ಮಣ್ಣಾಚಾರಿ ಜೋಷಿ, ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಾ// ಎಂ. ಜಿ. ಮುಳೆ, ಸಿದ್ದು ಸೂರ್ಯವಂಶಿ, ಮೋಹನ ಜಾಧವ, ಸುಶೀಲ್ ಕುಮಾರ್ ಬೆಳಗಲಿ, ಎ. ಆರ್. ಶಿಂಧೆ, ಸುನೀಲ್ ಶಿಂಧೆ, ಬಸವರಾಜ ಸಿಂಧೂರ, ಸಂಜೀವ ಮಾಳಿ, ಸುಭಾಷ್ ಪಾಟೋಳಿ, ಬಾಪುಗೌಡ ಬುಲಗೌಡ, ಉಮೇಶ್ ಜಾಧವ್, ಶ್ರೀಮತಿ ಪೂಜಾ ಜಾಧವ, ಶ್ರೀಮತಿ ಅಂಬವ್ವ ಬಾಪಕರ, ಶ್ರೀಮತಿ ಅನುಪಮಾ ಕರಾಬೆ, ಸಂಜೀವ ಮೋಹಿತೆ, ಅರ್ಜುನ್ ಬಾಪಕರ, ಸದಾಶಿವ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

1) ಬಾಕ್ಸ್: ಭಾರತದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ, ಶೌರ್ಯ, ಸ್ಥೈರ್ಯ, ರಾಷ್ಟ್ರಪ್ರೇಮ, ನ್ಯಾಯವಂತ, ಧರ್ಮಶ್ರದ್ಧೆ, ಶೂರತನಕ್ಕೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉತ್ತಮ ಆಡಳಿತಗಾರರರು

ಸಂತೋಷ್ ಲಾಡ್
ಕಾರ್ಮಿಕ ಸಚಿವರು
ಕರ್ನಾಟಕ ಸರ್ಕಾರ ಬೆಂಗಳೂರು

About Mallikarjun

Check Also

ಪುರುಷೋತ್ತಮ ದಾಸ್ ಹೆಗ್ಗಡೆ ಅವರ  “ಯಯಾತಿ” ಕಾದಂಬರಿ ಬಿಡುಗಡೆ 

Purushottam Das Heggade’s novel “Yayati” released ಅತಿ ಕಾಮ ಅತಿರೇಖವಾದ್ದು, ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ; ಸಂಸ್ಕೃತಿ ಚಿಂತಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.