Gangavati Charan Balaga: To Kapilatirtha
ಗಂಗಾವತಿ:ಚಾರಣವು ಒಂದು ಹವ್ಯಾಸವಾಗಿದ್ದು ಇದರಲ್ಲಿ ಬೆಟ್ಟ-ಗುಡ್ಡ ಹತ್ತುವುದು, ನದಿಪಾತ್ರಗಳಲ್ಲಿ ನಡೆಯುವುದು, ಕಾಡುಗಳಲ್ಲಿ ಸಂಚರಿಸುವುದು ಮುಂತಾದುವುಗಳನ್ನು ಒಳಗೊಂಡಿದೆ. ಪ್ರಕೃತಿಯ ಚೆಲುವನ್ನು ಸವಿಯಲು ಇದು ಒಂದು ಉತ್ತಮ ಅವಕಾಶ. ಚಾರಣವು ಧೈರ್ಯ, ಸಾಹಸ, ಆತ್ಮ ಸ್ಥೈರ್ಯ, ನಾಯಕತ್ವ, ಸಂಘ ಶಕ್ತಿ, ಸೂಕ್ತ ಯೋಜನೆ, ಮಾನಸಿಕ ಸ್ಥಿತಿ ಮುಂತಾದವುಗಳನ್ನು ಬೆಳೆಸುವಲ್ಲಿ ಮತ್ತು ಅವುಗಳನ್ನು ಓರೆಗಲ್ಲಿಗೆ ಹಚ್ಚುವ ಒಂದು ಉತ್ತಮ ಹವ್ಯಾಸ. ಚಾರಣದಿಂದ ಆರಂಭವಾಗುವ ಈ ಆರೋಗ್ಯಕರ ಚಟುವಟಿಕೆಯು, ಹೆಚ್ಚಿನ ಶ್ರಮದ ಕ್ರೀಡೆಯಾದ ಪರ್ವತಾರೋಹಣಕ್ಕೂ ನಾಂದಿ ಹಾಡುವ ಸಾಧ್ಯತೆ ಇದೆ. ಖ್ಯಾತ ಪರ್ವತಾರೋಹಿಗಳು ಚಾರಣದಿಂದಲೇ ತಮ್ಮ ಈ ಹವ್ಯಾಸವನ್ನು ಆರಂಭಿಸಿದ್ದು ಗೊತ್ತಾಗುತ್ತದೆ.
ಇಂತಹ ಚಾರಣದ ಹೂರಣವನ್ನು ಕರ್ನಾಟಕ ರಾಜ್ಯದಲ್ಲೆ ವಿಭಿನ್ನವಾಗಿ ಚಾರಣಿಗರಿಗೆ ಉಣಬಡಿಸಿದ್ದು ಗಂಗಾವತಿ ಚಾರಣ ಬಳಗ ಎಂದರೆ ತಪ್ಪಾಗಲಾರದು.
ಪಪ್ರಥಮ ಚಾರಣ ಹಿರೇಬೆಣಕಲ್ ಮೋರೇರ ಗುಡ್ಡ ಈಗ ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗವಾಗ ಹೊರಹೊಮ್ಮಿದೆ. ಗಂಗಾವತಿ ಚಾರಣ ಬಳಗ ಬರಿ ಐತಿಹಾಸಿಕ, ಪರಿಸರ ಜಾಗೃತಿ ಮೂಡಿಸುವುದಷ್ಟೇ ಅಲ್ಲದೇ ರಾಜ್ಯಾದ್ಯಂತ ಚಾರಣ ತಂಡಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ.
೦೧ಸೆಪ್ಟೆಂಬರ್೨೦೨೪ ರಂದು ಕೊಪ್ಫಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ವ್ಯಾಪ್ತಿಗೆ ಬರುವ ಕಪಿಲ ತೀರ್ಥ ಜಲಪಾತಕ್ಕೆ ಗಂಗಾವತಿ ಚಾರಣ ಬಳಗ ಹೋಗಿ ಪ್ರಕೃತಿ ಸೌಂದರ್ಯ ಸವಿಯಿತು. ಇದು ಬಿಸಿಲು ನಾಡಿನ ಜಲಪಾತ ಸ್ವಚ್ಛ, ಸುಂದರ ಪರಿಸರದಲ್ಲಿ ವೀಕ್ಷಣೆ ಮಾಡುವುದೇ ಆನಂದ ಎಂದು ಹಾಡಿ ಹೊಗಳಿತು ಬಳಗ . ನಂತರ ಹನುಸಾಗರದ ಅಭಿನವ ತಿರುಪತಿದೇವಸ್ಥಾನ ಹಾಗೂ ಚಂದಾಲಿAಗೇಶ್ವರ ದೇವಸ್ಥಾನಗಳಿಗೆ ತೆರಳಿ ನಂತರ ಕುಮ್ಮಟ ದುರ್ಗದ ರಸ್ತೆ ಹಾಗೂ ಅಲ್ಲಿನ ಪರಿಸರ ವೀಕ್ಷಿಸಿ ಮರಳಿ ಗಂಗಾವತಿಗೆ ಆಗಮಿಸದರು.
ಈ ವೇಳೆ ಗಂಗಾವತಿ ಚಾರಣ ಬಳಗದ ಪದಾಧಿಕಾರಿಗಳಾದ ಡಾ.ಶಿವಕುಮಾರ ಮಾಲಿಪಾಟೀಲ, ಮಂಜುನಾಥ ಗುಡ್ಲಾನೂರ, ಮೈಲಾರಪ್ಪ ಬೂದಿಹಾಳ, ಪ್ರಹ್ಲಾದ ಕುಲಕರ್ಣಿ, ಸಿ.ಮಹಾಲಕ್ಷ್ಮಿ, ರಾಘವೇಂದ್ರ ಶಿರಿಗೇರಿ ದಂಪತಿಗಳು ಹಾಗೂ ಹರನಾಯಕ, ಮಲ್ಲಿಕಾರ್ಜುನ ಬಸವಪಟ್ಟಣ, ಶ್ರೀಧರ ಐಲಿ, ಮಂಜುನಾಥ ಕೆ.ಎಮ್, ಸುರೇಶ ಸಮಗಂಡಿ ಸೇರಿದಂತೆ ಇತರರು ಇದ್ದರು.