Breaking News

ಅಭಿಷೇಕ ಹುಟ್ಟುಹಬ್ಬದ ಸ್ಮರಣಾರ್ಥವೃದ್ದಶ್ರಮದಲ್ಲಿ ಆಹಾರ ವಿತರಣೆ,,

Food distribution in old age home to commemorate Abhishek’s birthday.

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ತಾಲೂಕಿನ ರಾಜೂರ ಗ್ರಾಮದ ಕಾಂಗ್ರೆಸ್ ಮುಖಂಡ ವಿರುಪಾಕ್ಷಪ್ಪ ದೊಡ್ಮನಿ ಇವರ ಪುತ್ರ ಡಿ.14 ರ 2023ರಂದು ಅನಾರೋಗ್ಯ ನೀಮಿತ್ತ ನಿಧನರಾದ ಹಿನ್ನೆಲೆ ಅವರ ಸ್ಮರಣಾರ್ಥ ರಾಜೂರ ಗ್ರಾಮದಲ್ಲಿ ಕೇರಂ ಸ್ಪರ್ಧೆ ಹಾಗೂ ಕುಕನೂರು ಪಟ್ಟಣದ ವೃದ್ದಾಶ್ರಮದಲ್ಲಿ ವೃದ್ದರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ವೇಳೆ ದೆವೇಂದ್ರಪ್ಪ ಬಡಗೇರ ಮಾತನಾಡಿ ಅಭಿಷೇಕ ಒಬ್ಬ ಕ್ರೀಯಾಶೀಲ ವ್ಯಕ್ತಿಯಾಗಿ ಎಲ್ಲರೊಂದಿಗೂ ಅನ್ಯೂನ್ಯತೆಯಿಂದ ಬೇರೆಯುತ್ತಿದ್ದವರು, ಇವರ ಈ ಅಕಾಲಿಕ ಮರಣದಿಂದ ಗೆಳೆಯರಿಗೆ ಹಾಗೂ ಕುಟುಂಬಸ್ಥರಿಗೆ ಅಗಾಧ ನೋವನ್ನುಂಟು ಮಾಡಿದೆ ಎಂದರು.

ಮನುಷ್ಯ ಬದುಕಿರುವಾಗ ಸಮಾಜದಲ್ಲಿ ಅವನು ಮಿಡಿದ ಸಾಧನೆಗಳು ಮಾತ್ರ ಅಜರಾಮರವಾಗಿ ಉಳಿಯುತ್ತವೆ. ಆದ್ದರಿಂದ ಪ್ರತಿಯೊಬ್ಬರು ಸಮಾಜಕ್ಕೆ ಉತಾತಮ ಮಾರ್ಗದರ್ಶಕರಾಗಿ, ಸಮಾಜಕ್ಕೆ ಕೊಡುಗೆ ನೀಡುವವರಾಗಬೇಕು ಎಂದರು.

ನಂತರದಲ್ಲಿ ಗಗನ ನೋಟಗಾರ ಮಾತನಾಡಿ ನಮ್ಮ ಸಹೋದರ ಅಭಿಷೇಕ ಸಮಾಜದಲ್ಲಿ ಒಬ್ಬ ಒಳ್ಳೆಯ ಒಡನಾಟ ಹೊಂದಿದ ವ್ಯಕ್ತಿಯಾಗಿದ್ದ, ಎಲ್ಲರೊಂದಿಗೆ ಸಹಕಾರ ಮನೋಭಾವನೆಯಿಂದ ತನ್ನ ಕೈಲಾದ ಸಹಾಯ ಸಹಕಾರ ಮಾಡುತ್ತಾ ಎಲ್ಲರ ಮನದಲ್ಲಿ ಅಚ್ಚುಳಿಯುವ ವ್ಯಕ್ತಿಯಾಗಿದ್ದ ಎಂದರು.

ಅಭಿಷೇಕನ ಹುಟ್ಟು ಹಬ್ಬದ ದಿನಂದಂದು ನಮ್ಮ ಭಾರತ ದೇಶದ ಪ್ರಧಾನಿ ಮನಮೋಹನ ಸಿಂಗ್ ಅವರು ಇಹ ಲೋಕ ತ್ಯಜಿಸಿದ್ದು ಅವರು ಒಬ್ಬ ಒಳ್ಳೆಯ ಆಡಳಿಗಾರರು ಆಗಿದ್ದರು ಎಂದು ಅವರ ಕುರಿತು ಮಾತನಾಡಿದರು.

ಈ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಿರಾಜ ಕರಮುಡಿ, ವಿರುಪಾಕ್ಷ ದೊಡ್ಮನಿ, ಪ್ರಕಾಶ ಹಿರೇಮನಿ, ಫಕೀರಸಾಬ ನದಾಫ್, ಶಂಕರ ಬಂಡಾರಿ, ಸುನೀಲ ಗೊರ್ಲೆಕೊಪ್ಪ,ನವೀನ ಹಿರೇಮನಿ, ಮಂಜು ಹಿರೇಮನಿ, ವಿಜಯ ದೊಡ್ಮನಿ, ತಾಯಪ್ಪ ನೀರಲಗಿ, ಪ್ರಶಾಂತ ಆರಬೆರಳಿನ ಇನ್ನಿತರರು ಇದ್ದರು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *