
Condemnation of street vendors operating stalls under Section 3(3) of the Street Vendors Protection Act, 2014: Bharadwaj

ಬೀದಿವ್ಯಾಪಾರಿಗಳ ಸಂರಕ್ಷಣಾ ಕಾಯ್ದೆ 2014ರ ಅಡಿಯಲ್ಲಿಕಲಂ 3(3) ಪ್ರಕಾರ ಬೀದಿ ವ್ಯಾಪಾರಿಗಳ ಎತ್ತಂಗಡಿ ಮಾಡುತ್ತಿರುವುದಕ್ಕೆ ಖಂಡನೆ: ಭಾರಧ್ವಾಜ

ಗಂಗಾವತಿ: ಬೀದಿ ವ್ಯಾಪಾರಿಗಳ ರಕ್ಷಣಾ ಕಾಯ್ದೆ ೨೦14 ರ ಕಲಂ 3(3) ರಂತೆ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದು ಕಾನೂನುಬಾಹಿರವಾಗಿರುತ್ತದೆ. ನಗರಸಭೆಯು ಕಾಯ್ದೆಗಳನ್ನು ಸಂಪೂರ್ಣ ಗಾಳಿಗೆ ತೂರಿ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಮರುಸ್ಥಾಪನೆಯ ಜಾಗವನ್ನು ತೀರ್ಮಾನಿಸುವ ಪ್ರಕ್ರಿಯೆಯಲ್ಲಿ ಇದ್ದ ಜಾಗಕ್ಕಿಂತ ಹೆಚ್ಚಿಗೆ ಅಥವಾ ಸಮವಾಗಿ ವ್ಯಾಪಾರವಾಗುವಂತಹ ಜಾಗಕ್ಕೆ ಮರುಸ್ಥಾಪನೆಯಾಗಬೇಕು ಎಂದು ಕಾಯ್ದೆಯಲ್ಲಿ ಉಲ್ಲೇಖವಿದ್ದರೂ ಕಾಯ್ದೆಯನ್ನು ಗಾಳಿಗೆ ತೂರಿ ನಗರಸಭೆಯವರು ವ್ಯಾಪಾರಿಗಳನ್ನು ಏಕಾಏಕಿ ಎತ್ತಂಗಡಿ ಮಾಡುತ್ತಿರುವುದು ಖಂಡನೀಯವಾಗಿದೆ.
ನಗರಸಭೆ ಕೂಡಲೇ ನಗರದ ಬೀದಿ ವ್ಯಾಪಾರಿಗಳ ಸಭೆ ನಡೆಸಿ, ಸಭೆಯಲ್ಲಿ ಕಾಯ್ದೆಯಡಿ ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸಬೇಕು. ಇಲ್ಲದಿದ್ದಲ್ಲಿ ನಮ್ಮ IFTU ಸಂಘಟನೆ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಪಡೆಯುತ್ತದೆ ಎಂದು ಸಂಘದ ಮುಖಂಡ ಭಾರಧ್ವಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
