Breaking News

ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮ.

Karnataka Parivar Milan Program.

ಚಿಟಗುಪ್ಪ :  ವಿಕಾಸ ಅಕಾಡೆಮಿ,ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತೋತ್ಸವ ನಿಮಿತ್ತ ಡಿ.3ರಂದು ಬಸವಕಲ್ಯಾಣದಲ್ಲಿ ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣ್ಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.

ನಗರದ ಶ್ರೀ ಗುರು ಅಯ್ಯಪ್ಪ ಸ್ವಾಮಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಚಿಟಗುಪ್ಪ ತಾಲೂಕು ವಿಕಾಸ ಅಕಾಡೆಮಿಯ ವತಿಯಿಂದ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದ ಅವರು 

ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದೇಶದ ಸರ್ವತೋಮುಖ ಅಭಿವೃದ್ಧಿ ಬೆಳವಣಿಗೆ ವಿಕಾಸ ಅಕಾಡೆಮಿ ಹಗಲಿರುಳು ಶ್ರಮಿಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಮುಖರಾದ ಸೂರ್ಯಕಾಂತ ಮಠಪತಿ, ರವಿ ಸ್ವಾಮಿ ನೀರ್ಣಾ, ಹಣಮಂತರಾವ ಪಾಟೀಲ ಮಾತನಾಡಿದರು.

ತಾಲೂಕು ವಿಕಾಸ ಅಕಾಡೆಮಿಯ ಸಂಚಾಲಕ ಸಂಗಮೇಶ ಎನ್ ಜವಾದಿ ಮಾತನಾಡಿ ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿ ವತಿಯಿಂದ ಭಾರತೀಯ ಸಂಸ್ಕೃತಿ ಉತ್ಸವ -7 ಕೊತ್ತಲ ಸ್ವರ್ಣ ಜಯಂತಿ ಅಂಗವಾಗಿ  ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮವು ಬಸವಕಲ್ಯಾಣದಲ್ಲಿ ದಿನಾಂಕ 03-12-2023ರ ಬೆಳಗ್ಗೆ 09 ಗಂಟೆಗೆ 

ಹಮ್ಮಿಕೊಳ್ಳಲಾಗಿದೆ.ಅದಕ್ಕಾಗಿ ಚಿಟಗುಪ್ಪ ತಾಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪ್ರೇಮಿಗಳು, ಶಿಕ್ಷಕರು, ವಿಧ್ಯಾರ್ಥಿಗಳು ಭಾಗವಹಿಸಬೇಕೆಂದು ವಿನಂತಿಸಿದರು.

ಐಟಿಐ ಕಾಲೇಜು ಪ್ರಾಂಶುಪಾಲರಾದ ವಾಗೇಶ ಹಿರೇಮಠ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಉಪನ್ಯಾಸಕ ಭೀಮಶೆಟ್ಟಿ ವಡ್ಡನಕೇರಾ ನಿರೂಪಿಸಿದರು.

ಪ್ರಾಂಶುಪಾಲರಾದ ಎನ್ ಎಸ್ ಮಲ್ಲಶೆಟ್ಟಿ ವಂದಿಸಿದರು.

ಸಭೆಯಲ್ಲಿ ರವಿ ಲಿಂಗಣ್ಣಿ, ಗೋಪಾಲರಡ್ಡಿ, ಶಿವಕುಮಾರ ಚನ್ನೂರ, ತುಕಾರಾಮ ಬಡಗು, ಈಶ್ವರ ಚವ್ಹಾಣ, ಆರ್ ಎಸ್ ಪಾಟೀಲ, ಮನೋಹರ ಮೇಧಾ, ಚಂದ್ರಶೇಖರ ತಂಗಾ, ಮನೋಹರ್ ಜಕ್ಕಾ, ಆನಂದ ಚೌಧರಿ,ತುಕರಾಮ ಬಡಗು,ಮಹಾರುದ್ರಪ್ಪ ಅಣದೂರ, ಸುರೇಶ ಕುಂಬಾರ, ಮಲ್ಲಿಕಾರ್ಜುನ ಸಿಂಗಿನ್, ಕಂಠಯ್ಯ ಸ್ವಾಮಿ, ಮಲ್ಲಿಕಾರ್ಜುನ ಭೂರನಾಪುರ, ಮಾಹಾದೇವ ಗೌಳಿ, ಮಲ್ಲಪ್ಪಾ ಗೌರಾ, ಶೀಲಾದೇವಿ ಪಾಟೀಲ,  ಬಸಮ್ಮ ಮಠಪತಿ,ಇಂದುಮತಿ ಗಾರಂಪಳ್ಳಿ, ಪಿಯುಸಿ ಕಾಲೇಜಿನ ಪ್ರಾಚಾರ್ಯರ  ಪೂಜಾ ವಿ ಹಿರೇಮಠ, ಮಲ್ಲಿಕಾರ್ಜುನ್ ಹೊನ್ನ,  ಉಪನ್ಯಾಸಕಿಯಾದ  ಶಿಬಾ, ಕುಮಾರಿ ಚೈತನ್ಯ, ಐಕ್ಯ, ರವಿ ಹಿರೇಮಠ ಸೇರಿದಂತೆ 

ಚಿಟಗುಪ್ಪಾ ತಾಲೂಕು ವಿಕಾಸ ಅಕಾಡೆಮಿ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು – ಶಿಕ್ಷಕಿಯರು,ಗಣ್ಯರು ಉಪಸ್ಥಿತರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.