Breaking News

ರೈತರ ಜಮಿನಿಗೆ ದಾಳಿ ನೀಡುತ್ತಿರುವ ಆನೆಗಳು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ರೈತರ ಆಕ್ರೋಶ

The elephants attacking the farmers’ land is the anger of the farmers against the officials of the forest department.


ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ಕ್ಷೇತ್ರ ವ್ಯಾಪ್ತಿಯ
ಪಚ್ಚೆದೊಡ್ಡಿಯ ಗ್ರಾಮದಲ್ಲಿ ಮತ್ತೆ ಮತ್ತೆ ರೈತರು ಬೆಳೆದ ಬೆಳೆಗಳ ಮೇಲೆ ಆನೆಗಳು ದಾಳಿಯ ಆರ್ಭಟ ಆರ್ಭಟ ಮುಂದುವರಿಸಿದ್ದು ಇದರಿಂದ ರೈತರು ಕಂಗಲಾಗಿದ್ದಾರೆ.
ದಾಳಿಗೊಳಗಾದ ರೈತರ ಜಮಿನು ಹನೂರು ತಾಲೂಕು ಸೂಳೇರಿಪಾಳ್ಯ ಗ್ರಾಮ ಪಂಚಾಯತಿಯ
ಪಚ್ಚೆ ದೊಡ್ಡಿ ಗ್ರಾಮದ ಸರ್ವೆ ನಂಬರ್541/1 ನಲ್ಲಿ ಹಾಗೂ ಎರಡನೆ ಜಮೀನು .2. 40 ಸೆಂಟ್ಸ್ ನಲ್ಲಿ
ಮೇಕೆ ಜೋಳ ಮತ್ತೆ ಟಮೊಟಾ ಬೆಳೆಯ ಮೆಲೆ ಬೆಳೆ ಸಾಲ ಮಾಡಿದ್ದು ಕೈಗೆ ಬಂದ ಪಸಲು ಬಾಯಿಗೆ ಬರದಂತಾಗಿದೆ ಎಂದು ಆಕ್ರೋಶ ಹೋರಹಾಕಿದ್ದಾರೆ. ಸರಿಸುಮಾರು ಎರಡು ಲಕ್ಷಕ್ಕು ಹೆಚ್ಚುಸಾಲ ಮಾಡಿ ಆ ಕುಟುಂಬ ವ್ಯವಸಾಯ ನಂಬಿದ್ದು ಇದರಿಂದ ನಷ್ಟವುಂಟಾಗಿದ್ದು ಬಾಯಿ. ಬಾಯಿ ,ಬಿಡುವಂತಾಗಿದೆ ಇದನ್ನು ನೋಡಿದ ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನೆ ಕಾರ್ಯದರ್ಶಿಯಾದ ಬಸವರಾಜ್ ರೈತರ ತೋಟಕ್ಕೆ ಹೋಗಿ ಪರಿಶೀಲನೆ ಮಾಡಿ ನೋಡಿ ನಂತರ ಅರಣ್ಯ ಇಲಾಖೆಯವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ನಾಳೆ ನಾಳೆದ್ದು ಬರುತ್ತೆವೆಂದು ಹೇಳುತ್ತಾರೆ, ನೊಂದ ರೈತರಿಗೆ ಸೂಕ್ತ ಪರಿಹಾರವನ್ನು ನೀಡಿಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು .ಅಲ್ಲದೆ ಜಮೀನಲ್ಲಿ ಅಕ್ಕಪಕ್ಕ ಇರುವ ಜಮೀನಗಳಲ್ಲಿಯು ಸಹ ಆನೆಗಳು ಪ್ರತಿದಿನ ಬರುತ್ತಿದ್ದು.ಕಚೇರಿಗೆ ಅರ್ಜಿ ಕೊಟ್ಟಿದ್ದರು ಅದರ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿರುವುದು ಬೇಸರದ ಸಂಗಾತಿಯಾಗಿದೆ , ಇದೇ ರೀತಿಯಲ್ಲಿ ಪ್ರತಿಯೊಬ್ಬ ರೈತರ ಜಮೀನಿಗೆ ಬರುವ ಆನೆಗಳಿಗೆ ಸೂಕ್ತ ಕ್ರಮಕೈಗೊಳ್ಳದಿರುವುದರಿಂದ ನೋವುಂಟು ಮಾಡಲಾಗಿದೆ ಇದೇ ರೀತಿ ಮುಂದುವರಿಯ ಬಾರದಾಗಿ ತಿಳಿಸಿದರು .
ಇದೇ ಸಂದರ್ಭದಲ್ಲಿ ಪಚ್ಚೆದೊಡ್ಡಿ ಗ್ರಾಮದ ಮನಕೃಷ್ಣೆಗೌಡರ. ಮತ್ತೆ ಬಚ್ಚೇಗೌಡ. ಮುನೇಗೌಡ ಶಿವಣ್ಣ ಕೆಂಚೇಗೌಡ ಮನ್ನಾದ ರಾಜು ಭಾಗ್ಯ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.