Breaking News

ಕಾಡಂಚಿನ ಗ್ರಾಮಗಳನ್ನು ನಾವು ತೊರೆಯುವುದಿಲ್ಲ :ರಾಜ್ಯ ರೈತ ಸಂಘ ಸರ್ಕಾರಕ್ಕೆ ಎಚ್ಚರಿಕೆ .

We will not leave forested villages: State farmers’ association warns the governmen

ಜಾಹೀರಾತು


ವರದಿ : ಬಂಗಾರಪ್ಪ .ಸಿ

ಹನೂರು : ಇತ್ತಿಚಿನ ದಿನಗಳಲ್ಲಿ ಸರ್ಕಾರಗಳು ಬಂಡವಾಳ ಶಾಹಿಗಳ ಪರವಾಗಿ ಕಾನೂನು ತಿದ್ದುಪಡಿ ಮಾಡಿ ಅರಣ್ಯ ಪ್ರದೇಶದಲ್ಲಿ ಖನಿಜ ಸಂಪತ್ತು ತೆಗೆಯಲು ಅವಕಾಶ ಕಲ್ಪಿಸಿರುವ ಕೇಂದ್ರ ರಾಜ್ಯ ಸರ್ಕಾರ ಕಾಡಂಚಿನ ಗ್ರಾಮದ ಜನತೆಯನ್ನು ಒಕ್ಕಲಬ್ಬಿಸುವ ಮುನ್ನಾರ ಮಾಡುತ್ತಿದೆ‌, ರೈತ ಸಂಘ ಇದಕ್ಕೆ ತೀವ್ರವಾಗಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಹನೂರು ತಾಲೂಕಿನ ಗಡಿ ಗ್ರಾಮವಾದ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಡಿ ಹು ಪುದುಕಾಡು ಅಪ್ಪು ಕಾ ಪಟ್ಟಿ ಪುಂಗಂ ಆತೂರು ಗ್ರಾಮಗಳಲ್ಲಿ ನೂತನ ಗ್ರಾಮ ಘಟಕದ ನಾಮಪಾಲಕ ಉದ್ಘಾಟನೆ ಮಾಡಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು
ಬಂಡವಾಳ ಶಾಹಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿ ಒಂದು ಲಕ್ಷ ಎಕರೆ ಭೂಮಿಯನ್ನು ಖನಿಜ ಸಂಪತ್ತು ತೆಗೆಯಲು ಪ್ರತ್ಯಕ್ಕ ಕಾಯಿದೆ ಕಾನೂನು ತಂದು ಅವಕಾಶ ಕಲ್ಪಿಸಿದೆ ಜೊತೆಗೆ ಸಂಡೂರು ಗ್ರಾಮದ ಜಿಂದಾಲ್ ಕಂಪನಿಗೆ ರೂ.3676 ಎಕರೆ ಜಮೀನು ಸಹ ಕಾಯ್ದೆ ಬದಲಾವಣೆ ಮಾಡಿ ಸರ್ಕಾರ ಬಂಡವಾಳ ಶಾಹಿಗಳಿಗೆ ಅವಕಾಶ ಕಲ್ಪಿಸಿದೆ ಕಾಡಂಚಿನ ಗ್ರಾಮಗಳ ನೂರಾರು ವರ್ಷಗಳಿಂದ ತಲತಲಾಂತರದಿಂದ ವಾಸ ಮಾಡುವ ಬಡ ರೈತ ಕುಟುಂಬಗಳಿಗೆ ಅರಣ್ಯದಂಚಿನ ಗ್ರಾಮಗಳನ್ನು ಒಕ್ಕಲಿಪಿಸಲು ಅರಣ್ಯ ಇಲಾಖೆ ಕಾಯ್ದೆ ಉಪಯೋಗಿಸಿ ಈಗಾಗಲೇ ಈ ಭಾಗದ ಎರಡು ನೋಟಿಸ್ ಅನ್ನು ಜಾರಿಗೊಳಿಸಿ ಬಡ ಮುಗ್ಧ ರೈತ ಕುಟುಂಬದವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದುರ್ನಡತೆಯಿಂದ ದಬ್ಬಾಳಿಕೆಯಿಂದ ಏನೋ ತಿಳಿಯದ ಮುಗ್ಧ ಜನರನ್ನು ಒಕ್ಕಲಿ ಎಬ್ಬಿಸಲು ಮುನ್ನಾರ ಮಾಡುತ್ತಿದೆ ಹೀಗಾಗಿ ರಾಜ್ಯ ರೈತ ಸಂಘ ಹನೂರು ತಾಲೂಕಿನ ವಿವಿಧ ಗ್ರಾಮಗಳ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಈಗಾಗಲೇ ರೂಪ ರೇಷ್ಮೆಗಳನ್ನು ಪಟ್ಟಿ ಮಾಡಿದೆ ಅರಣ್ಯ ಇಲಾಖೆ ಇಲ್ಲಿನ ಬಡ ಕುಟುಂಬಗಳನ್ನು ಮುಂದುವರೆದರೆ ರಾಜ್ಯ ಸಂಘ ಇಡೀ ಕರ್ನಾಟಕ ರಾಜ್ಯದ್ಯಂತ ಇದರ ಬಗ್ಗೆ ಹೋರಾಟ ಸಮಿತಿ ವತಿಯಿಂದ ಮಾಡಲಾಗುತ್ತದೆ ಹೀಗಾಗಿ ಇಲ್ಲಿನ ಶಾಸಕರು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಇಲ್ಲಿನ ಕಾಡಂಚಿನ ಗಡಿ ಗ್ರಾಮದಲ್ಲಿರುವ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು….

ಚಾಮರಾಜನಗರ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ಸ್ವಾತಂತ್ರ್ಯ ಪೂರ್ವಕಾಲದಿಂದಲೂ ಇಲ್ಲಿನ ಜನತೆ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಅರಣ್ಯ ಇಲಾಖೆ ವಲಯಗಳನ್ನು ರೂಪಿಸಿಕೊಂಡು ಬಡ ಜನತೆಯನ್ನು ಒಕ್ಕಲಿಬ್ಬಿಸಲು ಕಾನೂನು ರೂಪಿಸುತ್ತಿದೆ ಬಂಡವಾಳ ಶಾಹಿಗಳಿಗೆ ಕಾನೂನನ್ನು ಬದಲಾವಣೆ ಮಾಡಿ ಅರಣ್ಯ ಪ್ರದೇಶದಲ್ಲಿ ಖನಿಜ ಸಂಪತ್ತನ್ನು ಲೂಟಿ ಮಾಡಲು ಅವಕಾಶ ಕಲ್ಪಿಸುತ್ತಿದೆ ಬಡ ಜನತೆ ಮೇಲೆ ಅರಣ್ಯ ಇಲಾಖೆ ಮುಖಾಂತರ ಮಾಡುತ್ತಿರುವ ದುರ್ನಡತೆ ಕಿರುಕುಳ ಸಹಿಸುವುದಿಲ್ಲ ಮುಂದೆ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ಜನತೆಯನ್ನು ಒಕ್ಕಲಿಬ್ಬಿಸಲು ಮುಂದಾದರೆ ಜಿಲ್ಲಾಧ್ಯಂತ ಇರುವ ಸಂಘಟನೆ ಇದನ್ನು ಖಂಡಿಸಿ ಹೋರಾಟದ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ…

ಉಪಾಧ್ಯಕ್ಷ ಗೌಡೆ ಗೌಡ : ಮಾತನಾಡಿ ತಾಲೂಕಿನಲ್ಲಿ ಅರಣ್ಯ ಪ್ರದೇಶದಿಂದ ಕೂಡಿರುವ ಬಹುತೇಕ ಗ್ರಾಮಗಳು ಅರಣ್ಯದಂಚಿನಲ್ಲೇ ಇರುವುದರಿಂದ ರೈತರು ಇಲ್ಲಿನ ಜನಸಾಮಾನ್ಯರು ಕಾಡುಪ್ರಾಣಿಗಳ ಹಾವಳಿಯಿಂದ ಈಗಾಗಲೇ ತತ್ತರಿಸಿದ್ದಾರೆ ಜೊತೆಗೆ ಅರಣ್ಯ ಇಲಾಖೆ ಸಹ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಜನಸಾಮಾನ್ಯರ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಸಂಘಟನೆ ಸಹಿಸುವುದಿಲ್ಲ ಹೋರಾಟದ ಮೂಲಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ಷ ಶೈಲೆಂದರ್ ಹನೂರು ತಾಲೂಕು ಘಟಕ ಅಧ್ಯಕ್ಷ ಅಮ್ಜದ್ ಖಾನ್ ಗುಂಡ್ಲುಪೇಟೆ ಯುವ ಘಟಕದ ಅಧ್ಯಕ್ಷ ಭರತ್ ಹನೂರು ತಾಲೂಕು ಗೌರವಾಧ್ಯಕ್ಷ ರಾಜಣ್ಣ ಮತ್ತು ಇನ್ನಿತರ ರೈತ ಮುಖಂಡರಾದ ಪಳನಿ ಸ್ವಾಮಿ ವಸಂತ ವೇಲು ಸ್ವಾಮಿ ಸೂರ್ಯ ರತ್ನವೇಲು ತಂಗವೇಲು ಸೇರಿದಂತೆ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು…

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *