Breaking News

87 ನೇ ಅಖಿಲ ಭಾರತ ಕನ್ನಡಸಾಹಿತ್ಯಸಮ್ಮೇಳನಕ್ಕೆ ಆಹ್ವಾನಿಸಲು ಜಿಲ್ಲೆಗಳಲ್ಲಿ ಕನ್ನಡ ಜ್ಯೋತಿ ರಥ ಸಂಚಾರ

Kannada Jyoti Ratha Sanchar in districts to invite 87th All India Kannada Sahitya Conference

ಜಾಹೀರಾತು

ಮಂಡ್ಯ.ಸೆ.20 (ಕರ್ನಾಟಕವಾರ್ತೆ):- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20,21 ಹಾಗೂ 22 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಕನ್ನಡ ಜ್ಯೋತಿ ರಥಕ್ಕೆ ಸೆಪ್ಟೆಂಬರ್ 20 ರಂದು ಉತ್ತರ ಕನ್ನಡದ ಭುವನೇಶ್ವರಿ ದೇವಾಲಯದ ಆವರಣದಿಂದ ಚಾಲನೆ ನೀಡಲಾಗುವುದು.

ರಥವು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಸಂಚರಿಸಲಿದ್ದು, ಸೆಪ್ಟೆಂಬರ್ 22 ರಿಂದ 25 ರವರೆಗೆ ಉತ್ತರ ಕನ್ನಡ ಜಿಲ್ಲೆ ಯ ಸಿದ್ದಾಪುರ, ಹೊನ್ನಾವರ, ಕಮಟ, ಅಂಕೋಲ, ಕಾರವಾರ, ಕಾಣಕೋಣ(ಗೋವಾ), ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಶಿರಸಿಯಲ್ಲಿ ಸಂಚರಿಸಿ ಹಾವೇರಿ ತಲುಪಲಿದೆ.

ಸೆಪ್ಟೆಂಬರ್ 26 ಮತ್ತು 27 ರಂದು ಹಾವೇರಿ ಜಿಲ್ಲೆ ಯ ಹಾನಗಲ್ಲ, ಹಿರೇಕೇರೂರು, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಸವಣೂರು, ಶಿಗ್ಲಾಂವದಲ್ಲಿ ಸಂಚರಿಸಿ ಗದಗ ಜಿಲ್ಲೆ ತಲುಪಲಿದೆ.

ಸೆಪ್ಟೆಂಬರ್ 28 ಮತ್ತು 29 ರಂದು ಗದಗ ಜಿಲ್ಲೆ ಯ ಲಕ್ಷೆö್ಮÃಶ್ವರ, ಶಿರಹಟ್ಟಿ, ಮುಂಡರಗಿ, ಗಜೇಂದ್ರಗಡ, ರೋಣ, ನರಗುಂದ, ಗದಗ, ಬೆಟಗೇರಿಯಲ್ಲಿ ಸಂಚರಿಸಿ ಧಾರವಾಡ ಜಿಲ್ಲೆ ತಲುಪಲಿದೆ.

ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 01 ರಂದು ಧಾರವಾಡ ಜಿಲ್ಲೆ ಯ ಅಣ್ಣಿಗೇರಿ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಳ್ನಾವರದಲ್ಲಿ ಸಂಚರಿಸಿ ಬೆಳಗಾವಿ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 02 ರಿಂದ 05 ರವರೆಗೆ ಬೆಳಗಾವಿ ಜಿಲ್ಲೆ ಯ ರಾಮದುರ್ಗ, ಸವದತ್ತಿ, ಬೈಲಹೊಂಗಲ, ಕಿತ್ತೂರು, ಬೆಳಗಾವಿ, ಗೋಕಾಕ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ, ಕಾಗವಾಡ, ಅಥಣಿಯಲ್ಲಿ ಸಂಚರಿಸಿ ಬಾಗಲಕೋಟೆ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 06 ಹಾಗೂ 07 ರಂದು ಬಾಗಲಕೋಟೆ ಜಿಲ್ಲೆ ಯ ಜಮಖಂಡಿ, ಮಹಲಿಂಗಾಪುರ, ಮುಧೋಳ, ಬಾಗಲಕೋಟೆ, ಹುನಗುಂದ, ಕೂಡಲಸಂಗಮದಲ್ಲಿ ಸಂಚರಿಸಿ ವಿಜಯಪುರ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 08 ಹಾಗೂ 09 ರಂದು ವಿಜಯಪುರ ಜಿಲ್ಲೆ ಯ ಮುದ್ದೇಬಿಹಾಳ, ನಿಡಗುಂದಿ, ಕೊಲ್ಹಾರ, ಬಬಲೇಶ್ವರ, ತಿಕೋಟಾ, ವಿಜಯಪುರ, ಚಡಚಣ, ಇಂಡಿ, ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಬಸವನ ಬಾಗೇವಾಡಿಯಲ್ಲಿ ಸಂಚರಿಸಿ ಕಲಬುರಗಿ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 10 ಹಾಗೂ 11 ರಂದು ಕಲಬುರಗಿ ಜಿಲ್ಲೆ ಯ ಯಡ್ರಾಮಿ, ಜೀವರ್ಗಿ, ಅಫಜಲ್ಪುರ, ಅಳಂದ, ಕಲಬುರಗಿ, ಶಹಾಪುರ, ಚಿತ್ತಾಪುರ, ಸೇಡಂ, ಕಾಳಗಿ, ಚಿಂಚೋಳಿ, ಕಮಲಾಪುರದಲ್ಲಿ ಸಂಚರಿಸಿ ಬೀದರ್ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 12 ಹಾಗೂ 13 ರಂದು ಬೀದರ್ ಜಿಲ್ಲೆ ಯ ಬಸವಕಲ್ಯಾಣ, ಹುಮದಾಬಾದ್, ಹುಲಸೂರು, ಭಾಲ್ಕಿ, ಔರದ್, ಬೀದರ್, ಚಿಟಗುಪ್ಪಾದಲ್ಲಿ ಸಂಚರಿಸಿ ಯಾದಗಿರಿ ಜಿಲ್ಲೆಗೆ ತಲುಪಲಿದೆ.

ಅಕ್ಟೋಬರ್ 14 ಮತ್ತು 15 ರಂದು ಯಾದಗಿರಿ ಜಿಲ್ಲೆ ಯ ಗುರುಮಠಕಲ್, ಯಾದಗಿರಿ, ವಡಗೇರಾ, ಶಹಾಪುರ, ಸುರಪುರ, ಹುಣಸಗಿ, ಕೆಂಬಾವಿ, ಸೈದಾಪುರ, ಕೊಡೆಕಲ್, ಖಾನಪುರದಲ್ಲಿ ಸಂಚರಿಸಿ ರಾಯಚೂರು ಜಿಲ್ಲೆ ತಲುಪಲಿದೆ.

ಅಕ್ಟೋಬರ್ 16 ಮತ್ತು 17 ರಂದು ರಾಯಚೂರು ಜಿಲ್ಲೆ ಯ ಲಿಂಗಸೂಗೂರು, ದೇವದುರ್ಗ, ರಾಯಚೂರು, ಮಾನ್ವಿ, ಶಿರವಾರ, ಮಸ್ಕಿ, ಸಿಂಧನೂರು ಇಲ್ಲಿ ಸಂಚರಿಸಿ ಕೊಪ್ಪಳ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 18 ಮತ್ತು 19 ರಂದು ಕೊಪ್ಪಳ ಜಿಲ್ಲೆ ಯ ಕುಷ್ಟಗಿ, ಯಲಬುರ್ಗಾ, ಕುಕನೂರು, ಕೊಪ್ಪಳ, ಗಂಗಾವತಿ, ಕನಕಗಿರಿ, ಕಾರಟಗಿಯಲ್ಲಿ ಸಂಚರಿಸಿ ಬಳ್ಳಾರಿ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 20 ಮತ್ತು 21 ರಂದು ಬಳ್ಳಾರಿ ಜಿಲ್ಲೆ ಯ ಸಿರಗುಪ್ಪ, ಕುರುಗೋಡ, ಬಳ್ಳಾರಿ, ಸಂಡೂರು, ಕಂಪ್ಲಿಯಲ್ಲಿ ಸಂಚರಿಸಿ ವಿಜಯನಗರ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 22 ಮತ್ತು 23 ರಂದು ವಿಜಯನಗರ ಜಿಲ್ಲೆ ಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿಯಲ್ಲಿ ಸಂಚರಿಸಿ ದಾವಣಗೆರೆ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 24 ಮತ್ತು 25 ರಂದು ದಾವಣಗೆರೆ ಜಿಲ್ಲೆಯ ಜಗಳೂರು, ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ, ನ್ಯಾಮತಿಯಲ್ಲಿ ಸಂಚರಿಸಿ ಶಿವಮೊಗ್ಗ ಜಿಲ್ಲೆ ತಲುಪಲಿದೆ.

*ಅಕ್ಟೋಬರ್ 26 ರಿಂದ 28 ರವರೆಗೆ ಶಿವಮೊಗ್ಗ ಜಿಲ್ಲೆ ಯ ಶಿಕಾರಿಪುರ, ಸೊರಬ, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಭದ್ರಾವತಿಯಲ್ಲಿ ಸಂಚರಿಸಿ ಚಿತ್ರದುರ್ಗ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 29 ರಿಂದ 31 ರವರೆಗೆ ಚಿತ್ರದುರ್ಗ ಜಿಲ್ಲೆ ಯ ಹೊಳಲ್ಕೆರೆ, ಚಿತ್ರದುರ್ಗ, ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಪರಶುರಾಮಪುರ, ಭರ್ಮಸಾಗರ, ಭೀಮಸಮುದ್ರ, ಧರ್ಮಪುರ, ಬೂದಿಹಾಳ, ವಾಣಿವಿಲಾಸ ಸಾಗರದಲ್ಲಿ ಸಂಚರಿಸಿ ಚಿಕ್ಕಮಗಳೂರು ಜಿಲ್ಲೆ ತಲುಪಲಿದೆ.

ನವೆಂಬರ್ 01 ರಿಂದ 04 ರವರೆಗೆ ಚಿಕ್ಕಮಗಳೂರು ಜಿಲ್ಲೆ ಯ ಅಜ್ಜಂಪುರ, ಕಡೂರು, ತರಿಕೆರೆ, ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ, ಕಳಸದಲ್ಲಿ ಸಂಚರಿಸಿ ಉಡುಪಿ ಜಿಲ್ಲೆ ತಲುಪಲಿದೆ.

ನವೆಂಬರ್ 05 ಹಾಗೂ 06 ರಂದು ಉಡುಪಿ ಜಿಲ್ಲೆ ಯ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳದಲ್ಲಿ ಸಂಚರಿಸಿ ದಕ್ಷಿಣ ಕನ್ನಡ ಜಿಲ್ಲೆ ತಲುಪಲಿದೆ.

ನವೆಂಬರ್ 07 ರಿಂದ 09 ರವರೆಗೆ ದಕ್ಷಿಣ ಕನ್ನಡ ಜಿಲ್ಲೆ ಯ ಮೂಡುಬಿದಿರೆ, ಮಂಗಳೂರು, ಕಾಸರಗೋಡು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯದಲ್ಲಿ ಸಂಚರಿಸಿ ಕೊಡಗು ಜಿಲ್ಲೆ ತಲುಪಲಿದೆ.

ನವೆಂಬರ್ 10 ಹಾಗೂ 11 ರಂದು ಕೊಡಗು ಜಿಲ್ಲೆ ಯ ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಪುನ್ನಂಪೇಟೆ, ಸೋಮವಾರಪೇಟೆಯಲ್ಲಿ ಸಂಚರಿಸಿ ಹಾಸನ ಜಿಲ್ಲೆ ತಲುಪಲಿದೆ.

ನವೆಂಬರ್ 12 ರಿಂದ 14 ರವರೆಗೆ ಹಾಸನ ಜಿಲ್ಲೆ ಯ ಅರಕಲಗೂಡು, ಹೊಳೆನರಸಿಪುರ, ಚನ್ನರಾಯಪಟ್ಟಣ, ಹಾಸನ, ಆಲೂರು, ಸಕಲೇಶಪುರ, ಬೇಲೂರು, ಅರಸೀಕೆರೆಯಲ್ಲಿ ಸಂಚರಿಸಿ ತುಮಕೂರು ಜಿಲ್ಲೆ ತಲುಪಲಿದೆ.

ನವೆಂಬರ್ 15 ರಿಂದ 18 ರವರೆಗೆ ತುಮಕೂರು ಜಿಲ್ಲೆ ಯ ತಿಪಟೂರು, ತುರುವೇಕೆರೆ, ಕುಣಿಗಲ್, ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ, ಚೇಳೂರು, ಚನ್ನರಾಯದುರ್ಗ, ನಿಟ್ಟೂರು, ಮಾಯಸಂದ್ರದಲ್ಲಿ ಸಂಚರಿಸಿ ಚಿಕ್ಕಬಳ್ಳಾಪುರ ಜಿಲ್ಲೆ ತಲುಪಲಿದೆ.

ನವೆಂಬರ್ 19 ಹಾಗೂ 20 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಯ ಗೌರಿಬಿದನೂರು, ಗುಡಿಬಂಡೆ, ಚಿಕ್ಕಬಳ್ಳಾಪುರ, ಶಿಡ್ಲಾಘಟ್ಟ, ಬಾಗೇಪಲ್ಲಿ, ಚಿಂತಾಮಣಿ, ಚೇಳೂರಿನಲ್ಲಿ ಸಂಚರಿಸಿ ಕೋಲಾರ ಜಿಲ್ಲೆ ತಲುಪಲಿದೆ.

ನವೆಂಬರ್ 21 ರಿಂದ 23 ರವರೆಗೆ ಕೋಲಾರ ಜಿಲ್ಲೆ ಯ ಕೋಲಾರ, ಬಂಗಾರಪೇಟೆ ಹಾಗೂ ಕೆ.ಜಿ.ಎಫ್‌ನಲ್ಲಿ ಸಂಚರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ತಲುಪಲಿದೆ.

ನವೆಂಬರ್ 24 ರಿಂದ 26 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸ್‌ಪೇಟೆ, ದೊಡ್ಡಬೆಳವಂಗಲದಲ್ಲಿ ಸಂಚರಿಸಿ ಬೆಂಗಳೂರು ನಗರ ಜಿಲ್ಲೆ ತಲುಪಲಿದೆ.

ನವೆಂಬರ್ 27 ರಿಂದ 30 ರವರೆಗೆ ಬೆಂಗಳೂರು ನಗರ ಜಿಲ್ಲೆ ಯ ಬೆಂಗಳೂರು, ಯಲಹಂಕ, ಆನೇಕಲ್, ಕೆಂಗೇರಿ, ಕೃಷ್ಣರಾಜಪುರಂನಲ್ಲಿ ಸಂಚರಿಸಿ ರಾಮನಗರ ಜಿಲ್ಲೆ ತಲುಪಲಿದೆ.

ಡಿಸೆಂಬರ್ 01 ರಿಂದ 03 ರವರೆಗೆ ರಾಮನಗರ ಜಿಲ್ಲೆ ಯ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿಯಲ್ಲಿ ಸಂಚರಿಸಿ ಚಾಮರಾಜನಗರ ಜಿಲ್ಲೆ ತಲುಪಲಿದೆ.

ಡಿಸೆಂಬರ್ 04 ರಿಂದ 06 ರವರೆಗೆ ಚಾಮರಾಜನಗರ ಜಿಲ್ಲೆ ಯ ಕೊಳ್ಳೇಗಾಲ, ಹನೂರು, ಯಳಂದೂರು, ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಸಂಚರಿಸಿ ಮೈಸೂರು ಜಿಲ್ಲೆ ತಲುಪಲಿದೆ.

ಡಿಸೆಂಬರ್ 07 ರಿಂದ 10 ರವರೆಗೆ ಮೈಸೂರು ಜಿಲ್ಲೆ ಯ ಸರಗೂರು, ಹೆಗ್ಗಡದೇವನಕೋಟೆ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್ ನಗರ, ಸಾಲಿಗ್ರಾಮ, ಮೈಸೂರು, ನಂಜನಗೂಡು, ಟಿ.ನರಸೀಪುರದಲ್ಲಿ ಸಂಚರಿಸಿ ಮಂಡ್ಯ ಜಿಲ್ಲೆ ತಲುಪಲಿದೆ.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.