Breaking News

ಸ್ವಚ್ಛತಾ ಅಭಿಯಾನದ ಜಾಗೃತಿ ಕಾರ್ಯಕ್ರಮಕ್ಕೆ ಸಚಿವರಿಂದ ಚಾಲನೆ

The Minister launched an awareness program for the Cleanliness Campaign

ಜಾಹೀರಾತು


ಸ್ವಚ್ಛತಾ ಕಾಪಾಡಿಕೊಳ್ಳುವಲ್ಲಿ ಸಾರ್ವನಿಕರ ಸಹಕಾರ ಅಗತ್ಯ: ಸಚಿವ ಎನ್.ಎಸ್.ಬೋಸರಾಜು


ರಾಯಚೂರು,ಸೆ.೧೯,):- ನಗರದ ಸ್ವಚ್ಚತಾ ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕತೆವಿದ್ದು, ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಸಾರ್ವನಿಕರ ಸಹಕಾರ ಮಾಡಿದ್ದಲ್ಲಿ ಸ್ವಚ್ಛತಾ ನಗರವನ್ನಾಗಿ ಮಾಡಲು ಸಾಧ್ಯವೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಹೇಳಿದರು.
ಅವರು ಸೆ.೧೯ರ ಗುರುವಾರ ದಂದು ನಗರದ ನೇತಾಜಿ ನಗರದ ಶೆಟ್ಟಿಭಾವಿ ವೃತ್ತದಿಂದ ಸೂಪರ್ ಮಾರ್ಕೇಟವರೆಗೆ ಜಿಲ್ಲಾಡಳಿತ ಹಾಗೂ ನಗರಸಭೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.


ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಯಾವ ರೀತಿ ಸ್ವಚ್ಛತೆ ಕಾಪಾಡಿ ಕೊಳ್ಳುತ್ತೇವೆ. ಅದೇ ರೀತಿಯಲ್ಲಿ ಸ್ವಚ್ಛತಾ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೇವಲ ಆಡಳಿತ ಮಂಡಳಿಯಿAದ ಸಾದ್ಯವಿಲ್ಲ. ಇದರ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಕಳೆದ ಒಂದು ವರ್ಷದಿಂದ ಪೌರಕಾರ್ಮಿಕರನ್ನು ಒಗ್ಗೂಡಿಸಿ ವಾರ್ಡ್ ವಾರು ಸ್ವಚ್ಚತಾ ಕಾರ್ಯಕ್ರಮ ನಡೆಸಲಾಗಿತ್ತು. ಎರಡು ಮೂರು ದಿನ ಬಳಿಕ ಮತ್ತೆ ಅದೇ ವಾರ್ಡ್ ನಲ್ಲಿ ಕಸ ಶೇಖರಣೆ ಆಗುತ್ತಿದೆ. ಇದರಿಂದ ನಾವು ಎಷ್ಟೆ ಸ್ವಚ್ಛತಾ ಕೆಲಸ ಮಾಡಿದರೂ ಮತ್ತೆ ಕಸ ಬರುತ್ತಿದ್ದು ಇದಕ್ಕೆ ಜಾಗೃತಿ ಕೊರತೆ ಇದೆ. ಪ್ರತಿ ಮನೆಯಿಂದಲೂ ಕಸವನ್ನು ಸಮರ್ಪಕ ವೀಲೆವಾರಿ ಆಗಬೇಕಿದೆ. ಜೊತೆಗೆ ನಗರದಲ್ಲಿನ ವ್ಯಾಪಾರಸ್ಥರು, ಅಂಗಡಿಗಳು, ಆಸ್ಪತ್ರೆ ಸೇರಿದಂತೆ ಎಲ್ಲಾ ಕಡೆಯಿಂದ ಕಸ ಶೇಖರಣೆ ಮಾಡಿ ವೀಲೆವಾರಿ ಮಾಡಲು ಕೊ-ಆರ್ಡಿನೇಷನ್ ಮಾಡಿಕೊಂಡು ಕೆಲಸ ಮಾಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಿಲ್ಲೆದ್ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಸ್ಮಿತಾ ಅಕ್ಕನವರು, ನಗರಸಭೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ್, ನಗರಸಭೆ ಹಿರಿಯ ಸದಸ್ಯ ಜಯಣ್ಣ, ಮಹಮದ್ ಶಾಲಂ, ಮೌಲಾನ ಮೌಲಿ, ಸೈಯದ್ ಚಾಂದ್ ವೀರ ಹುಸೇನ್, ಸೈಯದ್ ಅಲಿ, ಜಿಂದಪ್ಪ, ಬಸವರಾಜ ದರೂರು, ಅನಿತಾ ತಿಮ್ಮಾರೆಡ್ಡಿ, ಹೇಮಲತಾ ಬೂದೆಪ್ಪ, ಬಿ.ರಮೇಶ, ತಿಮ್ಮರೆಡ್ಡಿ, ಹರಿಬಾಬು, ತಿಮ್ಮಪ್ಪ ನಾಯಕ, ನರಸರೆಡ್ಡಿ, ಭೀಮರಾಯ, ಸೇರಿದಂತೆ ಇತರರು ಇದ್ದರು.

About Mallikarjun

Check Also

ಚಾಮರಾಜಪೇಟೆ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಜಾಗದ ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಹೊರಡಿಸಿದಅಧಿಸೂಚನೆ ರದ್ದುಗೊಳಿಸಿ ಹೈಕೋರ್ಟ್ ತೀರ್ಪು*

High Court verdict quashes Karnataka government’s notification for land acquisition of Chandra Spinning and Weaving …

Leave a Reply

Your email address will not be published. Required fields are marked *