Breaking News

ಮೀಸಲಾತಿಯಿಂದ ಧರ್ಮಗಳ ಮೇಲೆ ಆಗುತ್ತಿರುವ ಇಂದಿನ ಪರಿಣಾಮಗಳು ಹಾಗು ಮೀಸಲಾತಿಕೊನೆಗೊಂಡರೆ ಮುಂದೆ ಆಗುವ ಪರಿಣಾಮಗಳು:

Current Effects of Reservation on Religions and Future Effects if Reservation ends:

ಜಾಹೀರಾತು
ಜಾಹೀರಾತು

ವಿಶೇಷ:ಮೀಸಲಾತಿಯಿಂದ ಇಂದು ಬೌದ್ಧ ಕ್ರಿಶ್ಚಿಯನ್ ಮತ್ತು ಲಿಂಗಾಯತ ಧರ್ಮ ಅನುಯಾಯಿ ಸಂಖ್ಯಾ ಜನಗಣತಿಯಲ್ಲಿ ಕಡಿಮೆ ಇದೆ. ಮುಂದೆ ಮೀಸಲಾತಿ ಸರಕಾರ ತೆಗೆದು ಹಾಕಿದ್ದೆ ಆದರೆ ಹಿಂದೂ ಧರ್ಮದ ಜನಸಂಖ್ಯಾ ಸಂಪೂರ್ಣ ಕುಸಿಯುತ್ತದೆ, ಬೌದ್ಧ ಕ್ರಿಶ್ಚಿಯನ್ ಲಿಂಗಾಯತ ಜನಸಂಖ್ಯಾ ಜನಗಣತಿಯಲ್ಲಿ ನಾಲ್ಕು ಪಟ್ಟು ಹೆಚ್ಚು ಆಗಬಹುದು.

ಧರ್ಮಗಳು ಜಗತ್ತಿನಲ್ಲಿ ಎಲ್ಲಕಿಂತ ಹೆಚ್ಚು ಚರ್ಚೆ ಮತ್ತು ಗೊಂದಲಗಳಿಗೆ ಕಾರಣ ಆಗಿವೆ. ಧರ್ಮಗಳು ಸಮಾಜ ಮತ್ತು ಮನುಷ್ಯನ ಜೀವನಶೈಲಿ ಉನ್ನತಿಕರ್ಣಗೊಳಿಸಲು ಅಂದಿನ ಸಮಸ್ಯಗಳಿಗೆ ಸಮಾಧಾನ ಹುಡುಕಿದ್ದವು. ಯಾವ ಧರ್ಮಗಳು ಕೆಟ್ಟದ್ದಾಗಿವೆ ಹೇಳಲು ಆಗಲ್ಲ, ಅಂದಿನ ಕಾಲಘಟ್ಟದಲ್ಲಿರುವ ಸಮಸ್ಯಗಳಿಗೆ ಸಮಾಧಾನ ಹುಡುಕಲು ಅಂದಿನ ಬುದ್ಧಿವಂತರು ಮಹಾಪುರುಷರು ತಮ್ಮ ತಿಳುವಳಿಕೆ ಪ್ರಕಾರ ಸಮಾಧಾನ ಕಂಡುಕೊಂಡಿದ್ದಾರೆ. ಸನಾತನ ವೈದಿಕ ಧರ್ಮದಲ್ಲಿ ಇರುವ ಕುಂದುಕೊರತೆಗಳ ಮೌಢ್ಯಗಳಿಗೆ ಕಂದಾಚಾರಗಳ ತಾರತಮ್ಯಗಳ ವಿರುದ್ಧ ಭಾರತದಲ್ಲಿ ಬೌದ್ಧ, ಜೈನ್, ಲಿಂಗಾಯತ ಮತ್ತು ಸಿಖ್ ಧರ್ಮಗಳು ಉದಯ ಆದವು. ಭಾರತೀಯ ಹೊಸ ಧರ್ಮಗಳನ್ನು ಅವರ ಅನುಯಾಯಿಗಳು ಪಾಲಿಸುತ್ತಿದ್ದಾರೆ. ಈ ಎಲ್ಲಾ ಧರ್ಮಗಳಿಗೆ ತಮ್ಮದೇ ಆದ ಧರ್ಮಗ್ರಂಥ, ಧರ್ಮಗುರುಗಳು, ಆಚರಣೆಗಳು ಭಿನ್ನ ಆಗಿವೆ. ಅವರೆಲ್ಲರೂ ತಮ್ಮ ಧರ್ಮ ಪ್ರಕಾರ ಆಚರಣೆ ಮಾಡುತ್ತಾರೆ. ಆದರೆ ಪರದೇಶದಿಂದ ಭಾರತ ದೇಶದ ಮೇಲೆ ಆಕ್ರಮಣ ಮಾಡಿ ದೇಶ ಆಳಿದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ನಮ್ಮ ದೇಶದ ಸನಾತನ ವೈದಿಕ ಧರ್ಮದವರು ಆಕರ್ಷಣೆಗೊಂಡು ಕೆಲವರು ಧರ್ಮ ಪರಿವರ್ತನೆ ಮಾಡಿಕೊಂಡರು. ಹೊಸ ಧರ್ಮ ಉದಯ ಆಗಲು ಮತ್ತು ಮುಸ್ಲಿಂ ಕ್ರಿಶ್ಚಿಯನ್ ಧರ್ಮ ಪರಿವರ್ತನೆ ಆಗಲು ಮುಖ್ಯ ಕಾರಣ ಸನಾತನ ವೈದಿಕ ಹಿಂದೂ ಧರ್ಮದಲ್ಲಿ ಇರುವ ತಾರತಮ್ಯ, ಜಾತಿಯತೆ , ಅಸ್ಪುರುಷತೆ ಮತ್ತು ಶ್ರೇಣಿಕೃತ ಚಾತುರ್ವರ್ಣ ಮಾತ್ರ.

ಸಾವಿರಾರು ವರ್ಷಗಳಿಂದ ಚಾತುರ್ವರ್ಣ ಪದ್ಧತಿಯನ್ನು ಜಾರಿಗೆ ಗೊಳಿಸಿದ್ದ ಮನುಸ್ಮೃತಿ ಅದನ್ನು ಮುಂದುವರಿಸಿಕೊಂಡು ಬಂದ ಭಾರತೀಯ ಸನಾತನ ಗ್ರಂಥಗಳಾದ ವೇದ ಉಪನಿಷತ್ತು ಆಗಮ ಭಾಗವಾದ ಗೀತೆ ಕಾರಣ. ಬ್ರಾಹ್ಮಣ ಶ್ರೇಷ್ಟ, ಕ್ಷೇತ್ರೀಯ ಮತ್ತು ವೈಶ್ಯರು ನಂತರ ಸ್ಥಾನ, ಮೇಲಿನ ಮೂರು ವರ್ಗದವರು ಶ್ರಮ ರಹಿತ ಜೀವನ ಕಟ್ಟಿಕೊಂಡು ಬಂದರು. ನಾಲ್ಕನೇ ಕೊನೆಯ ಸ್ಥಾನದಲ್ಲಿ ಇರುವ ಶೂದ್ರರು ಮಾತ್ರ ದುಡಿಯಬೇಕು, ಆದರೆ ಅವರಿಗೆ ಪೂಜೆ ಪುನಸ್ಕಾರ, ಗ್ರಂಥ ಮಂತ್ರ ಪಠಣ ಸ್ವಾತಂತ್ರ್ಯ ಇದ್ದಿಲ್ಲ. ದಲಿತರು ಹಿಂದುಳಿದ ವರ್ಗದ ಅಷ್ಪುರುಷರಿಗೆ ಪುರ ಪ್ರವೇಶ ಕೂಡ ಇದ್ದಿಲ್ಲ, ಅದಕ್ಕೂ ನಿಯಮಗಳು ಇದ್ದವು. ಅವರ ಜೀವನ ಪಶುಗಳ ಜೀವನದಂತೆ ಆಗಿತ್ತು. ಅವರ ಮಾನಸಿಕ ಪರಿಸ್ಥಿತಿ ಹದಗೆಟ್ಟಿತ್ತು, ಅದಕ್ಕಾಗಿ ಅವರಿಗೆ ಮುಸ್ಲಿಂ ಕ್ರಿಶ್ಚಿಯನ್ ಧರ್ಮಗಳು ಆಕರ್ಷಣೆ ಆದವು. ಇವೆಲ್ಲವೂ ಡಾ ಬಾಬಾಸಾಹೇಬ ಅಂಬೇಡ್ಕರ್ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರಿ, ನಾನು ಹಿಂದೂ ಆಗಿ ಹುಟ್ಟಿದ್ದೇ ಆದರೆ ಹಿಂದೂ ಆಗಿ ಸಾಯಲ್ಲ ಎಂದು ಅವರು ಅನುಯಾಯಿಗಳ ಸಮೇತ ಧರ್ಮ ಪರಿವರ್ತನೆ ಮಾಡಿಕೊಂಡರು, ಲಕ್ಷ ಲಕ್ಷ ಜನರು ಬೌದ್ಧ ಧರ್ಮ ಸ್ವೀಕಾರ ಮಾಡಿದರು, ಇಂದು ಕೋಟಿ ಕೋಟಿ ಬೌದ್ಧರು ದೇಶದಲ್ಲಿ ಇದ್ದಾರೆ. ಹೀಗೆ ಹಿಂದೂ ಧರ್ಮ ಸ್ವಯಂಕೃತ ಪ್ರಮಾದಗಳಿಂದ ಕ್ಷೀಣ ಗೋಳುತ್ತ ಸಾಗಿತ್ತು.

ಆದರೆ ಹಿಂದಿನಿಂದ ಇಲ್ಲಿಯವರೆಗೆ ಹಿಂದೂ ಧರ್ಮದ ಗುರುಗಳಾಗಲಿ ಮುಖಂಡರಾಗಲಿ ಈ ಪರಿಸ್ಥಿತಿ ಬಂದೋದಗಲು ಕಾರಣ ಏನು, ಮುಖ್ಯ ಸಮಸ್ಯ ಕಂಡುಕೊಳ್ಳಲು ಇಲ್ಲಿಯವರೆಗೆ ಸಾಧ್ಯ ಆಗಿಲ್ಲ. ಕೇವಲ ದೇಶದ ಹೊಸ ಧರ್ಮಗಳ ಬೌದ್ಧ ಜೈನ ಲಿಂಗಾಯತ ಸಿಖ್ ವಿರುದ್ಧ ಆಪಾದನೆ ಮಾಡುವದು, ಹೊರ ದೇಶದ ಧರ್ಮಗಳಾದ ಮುಸ್ಲಿಂ ಕ್ರಿಶ್ಚಿಯನ್ ಅವಹೇಳನ ಮಾಡುವದೇ ಚಾಳಿ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮದಲ್ಲಿ 3% ಬ್ರಾಹ್ಮಣ, 3% ಕ್ಷೇತ್ರೀಯ 1 % ವೈಶ್ಯರು ಇದ್ದಾರೆ ಇವರೆಲ್ಲ ಶ್ರೇಷ್ಠರು, ಸುಮಾರು 93% ಶೂದ್ರರು ಇದ್ದಾರೆ ಇವರೆಲ್ಲ ಕೆಳದರ್ಜದವರು. ಶುದ್ರರಲ್ಲಿಯೂ ಕೂಡ 24% ದಲಿತರು 50% ಅತಿ ಹಿಂದುಳಿದ ಅಸ್ಪೂರಶರು, 26% ಹಿಂದುಳಿದ ಮತ್ತು ಭೂಮಾಲೀಕರು ಇದ್ದಾರೆ. ಹಿಂದೂ ಒಂದಾಗಬೇಕು ಎಂದು ಹೇಳುವ ಧರ್ಮಗುರುಗಳು ಮತ್ತು ಮುಖಂಡರು ಇನ್ನು 25% ಹಿಂದೂ ದಲಿತರನ್ನು ಮಂದಿರ ಪ್ರವೇಶ ಕೊಡುವುದಿಲ್ಲ, ಇಂತಹ ಮುಂದುವರೆದ ಆಧುನಿಕ ಯುಗದಲ್ಲಿ ಕೂಡ ಮಂದಿರ ಪ್ರವೇಶ ಮಾಡಿದ್ದ ದಲಿತರನ್ನು ಸಂಕೋಚ ಇಲ್ಲದೆ ಕೊಲೆ ಮಾಡುತ್ತಾರೆ. ಶೂದ್ರರಿಗೆ ಇಲ್ಲಿಯವರೆಗೆ ತಮ್ಮ ಕೈಯಿಂದ ಸ್ವತಃ ಪೂಜೆ ಮಾಡುವ ಮಂತ್ರ ಪಠಣ ಮಾಡುವ ಅಧಿಕಾರ ಇಲ್ಲ, ಅದಕ್ಕೂ ದೇವರ ಮತ್ತು ಭಕ್ತರ ಮಧ್ಯ ಪೂಜಾರಿ ಬೇಕು, ಇದರಿಂದ ಪುರೋಹಿತಶಾಹಿಗಳು ತಮ್ಮ ಪುರಾತನ ರೀತಿ ಮುಂದುವರೆಸಿಕೊಂಡು ಬಂದು ಸಾಮಾನ್ಯ ಜನರಿಗೆ ದೇವರ ಬಗ್ಗೆ ಚರ್ಚೆ ಚಿಂತಿಸುವ ಹಕ್ಕು ಮೋಟಕುಗೊಳಿಸಿದ್ದಾರೆ.

*ಹಿಂದೂ ಧರ್ಮದಲ್ಲಿ ಇದ್ದ ಮುಖ್ಯ ಸಮಸ್ಯ ಹಿಂದೂಗಳ ಮಧ್ಯಯೇ ತಾರತಮ್ಯ, ಉಚ್ಚ ನೀಚ, ಮೇಲ್ದರ್ಜೆ ಕೆಳದರ್ಜೆ , ಅಷ್ಪುರುಷತೆಗಳು. ಇದರ ಬಗ್ಗೆ ಯಾವ ಹಿಂದೂ ಧರ್ಮದ ಗುರುಗಳು ಮುಖಂಡರು ಚರ್ಚೆ ಮಾಡಲ್ಲ, ಇದನ್ನು ಮರೆ ಮಾಚಲು ಮುಸ್ಲಿಂ , ಕ್ರಿಶ್ಚಿಯನ್ ಮೇಲೆ ತಳ್ಳಿ ಮತ್ತೆ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡುತ್ತಾರೆ, ಇದರಿಂದ ದೇಶದ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ, ದೇಶದಲ್ಲಿ ಅಶಾಂತಿ ತಲೆದೋರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ರಾಜಕೀಯ ಪಕ್ಷಗಳು ಇದಕ್ಕೆ ಎಲ್ಲಾ ಸಹಕಾರ ಕೊಟ್ಟು ಸಮಾಜ ಒಡೆಯುತ್ತಿದ್ದಾರೆ, ಇದರಿಂದ ರಾಜಕೀಯ ಲಾಭ ಪಡೆಯುತ್ತಿದ್ದಾರೆ. *ಎಲ್ಲಿಯವರೆಗೆ ಗ್ರಾಮದ ಹೊರಗಿರುವ ಹಿಂದೂ ದಲಿತರನ್ನು ಅಷ್ಪುರುಷ ಹಿಂದುಳಿದವರನ್ನು ಗ್ರಾಮದಲ್ಲಿ ಸೇರಿಸಿಕೊಂಡು ಸಮಾನ ಹಕ್ಕು ಕೊಡುವದಿಲ್ಲವೋ, ಅಲ್ಲಿಯವರೆಗೆ ಹಿಂದೂ ಧರ್ಮದ ಅವನತಿ ಆಗುತ್ತಿರುತ್ತದೆ.*

ಮೀಸಲಾತಿ ಎಂದು ಕೊನೆಗಾಣುತ್ತದೋ, ಅಂದು ಹಿಂದೂ ಧರ್ಮ ಸಂಪೂರ್ಣ ನೆಲ ಕಚ್ಚುತ್ತದೆ:

ಸ್ವಾತಂತ್ರ ನಂತರ ಮೀಸಲಾತಿಯ ಅಡ್ಡ ಪರಿಣಾಮಗಳೂ ಧರ್ಮಗಳ ಮೇಲೆ ಆಗಿದೆ:
ಹಿಂದೂ ಧರ್ಮದಲ್ಲಿ ಇರುವ ದಲಿತರನ್ನು ಅಷ್ಪುರಶರನ್ನು ಹಿಂದುಳಿದವರನ್ನು ಮೀಸಲಾತಿ ಒದಗಿಸಲಾಗಿದೆ. ಯಾರು ಹಿಂದೂ ಧರ್ಮದಲ್ಲಿ ಜಾತಿ ಉಪಜಾತಿಗಳು ಇವೆ ಅವರಿಗೆ ಮೀಸಲಾತಿ. ಬೇರೆ ಧರ್ಮದವರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ಇಲ್ಲ, ಅದು ಇದ್ದರು ಕಡಿಮೆ, ಸಿಖ್ ಧರ್ಮದಲ್ಲಿ ಇರುವ ದಲಿತರನ್ನು ಪರಿಶಿಷ್ಟ ಜಾತಿ ಕೊಡಲ್ಲಾಗಿದೆ.

ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮ ಸ್ವೀಕಾರ ಮಾಡಿದವರಲ್ಲಿ 95% ದಲಿತರು ಆಗಿದ್ದಾರೆ, ಆದರೆ ಅವರು ಜನಗಣತಿಯಲ್ಲಿ ಬೌದ್ಧ ಕ್ರಿಶ್ಚಿಯನ್ ಎಂದು ಬಹುತೇಕರು ಬರೆಸುವದಿಲ್ಲ , ಜನಗಣತಿ ಸರಕಾರಿ ದಾಖಲೆಗಳಲ್ಲಿ ಹೆಚ್ಚು ಹೆಚ್ಚು ಜನ ಮೀಸಲಾತಿ ಸಲುವಾಗಿ ಮೂಲ ಜಾತಿ ಹಿಂದೂ ಹರಿಜನ, ಹಿಂದೂ ಮಾದಿಗ ಇತ್ಯಾದಿ ಬರೆಸುತ್ತಾರೆ. ಇದರಿಂದ ಜನಸಂಖ್ಯೆಯಲ್ಲಿ ಬೌದ್ಧ ಕ್ರಿಶ್ಚಿಯನ್ ಜನಸಂಖ್ಯಾ ಕಡಿಮೆ ನಮೂದು ಆಗುತ್ತದೆ, ವಾಸ್ತವಿಕವಾಗಿ ಅವರ ಸಂಖ್ಯ ಮೂರರಿಂದ ನಾಲ್ಕು ಪಟ್ಟು ಜಾಸ್ತಿ ಇದೆ.

ಲಿಂಗಾಯತ ಧರ್ಮದಲ್ಲಿ ಕೂಡ ಹಿಂದೆ ಇದ್ದ ದಲಿತ ಸಮಾಜ ಅತಿ ಹಿಂದುಳಿದ ಸಮಾಜದವರು ಕೂಡ ಮೀಸಲಾತಿ ಸಲುವಾಗಿ ಹಿಂದೂ ಧರ್ಮದ ಜಾತಿಗಳು ಉಪಜಾತಿಗಳು ಎಂದು ಬರೆಸುತ್ತಿದ್ದಾರೆ.ಉದಾ ಹೋಲಿಯ, ಮಾದಿಗ, ಚಮ್ಮಾರ, ಹಡಪದ, ಗಾಣಿಗ, ಹೂಗಾರ, ಕುಂಬಾರ, ಬೇಡ ಜಂಗಮ ಮುಂತಾದುವಗಳು.

ಸವರ್ಣೀಯ ಹಿಂದುಗಳು ಮೀಸಲಾತಿ ಬಂದ ಮಾಡಬೇಕು, ಜಾತಿ ಆಧಾರಿತ ಮೀಸಲಾತಿ ಬೇಡ ಎನ್ನುತ್ತಿದ್ದಾರೆ, ಒಂದು ವೇಳೆ ಮೀಸಲಾತಿ ಕೊನೆಗೊಂಡರೆ, ಮೀಸಲಾತಿ ಸಲುವಾಗಿ ಹಿಂದೂ ಎಂದು ಬರೆಸುತ್ತಿರುವ ಬಹುಸಂಖ್ಯ ಜನ ತಮ್ಮ ತಮ್ಮ ಧರ್ಮಗಳ ಹೆಸರು ಬರೆಸುತ್ತಾರೆ. ಆವಾಗ ಬೌದ್ಧ ಕ್ರಿಶ್ಚಿಯನ್ ಲಿಂಗಾಯತ ಜನಸಂಖ್ಯಾ ಏಕಾಏಕಿ ನಾಲ್ಕು ಪಟ್ಟು ಆಗಬಹುದು. ಆವಾಗ ಹಿಂದೂ ಧರ್ಮ ಕುಸಿದು 15-20% ತಲುಪತ್ತದೆ.

ಆದರಿಂದ ಮೀಸಲಾತಿಯಿಂದ ಇಂದು ಬೌದ್ಧ ಕ್ರಿಶ್ಚಿಯನ್ ಮತ್ತು ಲಿಂಗಾಯತ ಧರ್ಮ ಅನುಯಾಯಿ ಸಂಖ್ಯಾ ಜನಗಣತಿಯಲ್ಲಿ ಕಡಿಮೆ ಇದೆ. ಮುಂದೆ ಮೀಸಲಾತಿ ಸರಕಾರ ತೆಗೆದು ಹಾಕಿದ್ದೆ ಆದರೆ ಹಿಂದೂ ಧರ್ಮದ ಜನಸಂಖ್ಯಾ ಸಂಪೂರ್ಣ ಕುಸಿಯುತ್ತದೆ.

ಶ್ರೀಕಾಂತ ಸ್ವಾಮಿ ಬೀದರ

About Mallikarjun

Check Also

ಎಪಿಎಂಸಿ ಆವರಣದಲ್ಲಿ ಭರದಿಂದಸಿದ್ದತೆಗೊಳ್ಳುತ್ತಿರುವ ಸಹಕಾರಿ ಜಾಗೃತ ಸಮಾವೇಶಕಾರ್ಯಕ್ರಮದ ವೇದಿಕೆ,,, ಮುತುವರ್ಜಿವಹಿಸುತ್ತಿರುವಪೋಲಿಸ್ಇಲಾಖೆ,

The platform of Co-operative Vigilance Conference program is being prepared in full swing in APMC …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.