Breaking News

ಶನಿವಾರ ಪತ್ರಕರ್ತರ ಸಹಕಾರಿ ಸಂಘದ ಸಭೆ

Meeting of Co-operative Union of Journalists on Saturday

ಜಾಹೀರಾತು


ಬೆಳಗಾವಿ ; ಕರ್ನಾಟಕ ಪತ್ರಕರ್ತರ ವಿವಿಧೋ ಉದ್ದೇಶಗಳ ಸಹಕಾರಿ ಸಂಘದ ಸಭೆಯು ಶನಿವಾರ ದಿನಾಂಕ 21-09-2024 ರಂದು ಮುಂಜಾನೆ 10:30 ಗಂಟೆಗೆ ಬೆಳಗಾವಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಅವರಣದಲ್ಲಿರುವ ವಿಜ್ಞಾನ ಕೇಂದ್ರದ ಬಯಲು ಸಭಾ ಗ್ರಹದಲ್ಲಿ ಜರುಗಲಿದೆ.
ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ಶಾಸಕ ಅಸಿಫ್ (ರಾಜು) ಸೇಠ್ ಮತ್ತು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಮತಿ ಮಂಗಲಾ ಮೆಟಗುಡ್ ಆಗಮಿಸಲಿದ್ದಾರೆ, ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುಧಾ ಪಟ್ಟೇದ ಅವರನ್ನು ಸತ್ಕರಿಸಲಾಗುವುದು. ಹಿರಿಯ ಸಂಪಾದಕ ಶ್ರೀ ಸಲೀಂ ಧಾರವಾಡಕರ್, ಹಿರಿಯ ಸಾಹಿತಿಗಳಾದ ಶ್ರೀ ಎಲ್.ಎಸ್.ಶಾಸ್ತ್ರಿ, ಶ್ರೀ ಸಿದ್ದು ಯಾಪಲಪರವಿ ಉಪಸ್ಥಿತರಿರಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ. ಸಂಪತ್ ಕುಮಾರ್ ಮುಚಳಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.