Breaking News

ಎಡದಂಡೆ ಕಾಲುವೆಯ ಉಪಕಾಲುವೆ ಕೊನೆಯ ಭಾಗದರೈತರಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ರೈತರಿಂದ ಪ್ರತಿಭಟನೆ

Protest by the farmers for adequate water supply to the farmers’ lands in the sub-canal end of the left bank canal

ಜಾಹೀರಾತು

ಮಾನ್ವಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸಮಿತಿ ವತಿಯಿಂದ ತುಂಗಭದ್ರ ಎಡದಂಡೆ ಕಾಲುವೆಯ ಉಪಕಾಲುವೆ ಕೊನೆಯ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ರಾಯಚೂರು -ಸಿಂಧನೂರು ಮುಖ್ಯರಸ್ತೆಯಲ್ಲಿನ 85 ನೇ ಮೈಲ್ ಕಾಲುವೆ ಹತ್ತಿರ ನೂರಾರು ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು ಸ್ಥಳಕ್ಕೆ ಆಗಮಿಸಿದ ಮುನಿರಾಬಾದ್ ನೀರಾವರಿ ಇಲಾಖೆಯ ಮುಖ್ಯ ಇಂಜನೀಯರ್ ಹನುಮಂತಪ್ಪ ದಾಸರ್ ರವರಿಗೆ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ ಚಾಮರಸಮಾಲಿಪಾಟೀಲ್ ಮನವಿ ಸಲ್ಲಿಸಿ ಮಾತನಾಡಿ ತುಂಗಭದ್ರ ಎಡದಂಡೆ ಕಾಲುವೆಯ ಉಪಕಾಲುವೆಗಳಾದ 76,82,85,89,90,91 ಮತ್ತು 92 ಈ ಉಪಕಾಲುವೆಗಳ ಕೋನೆಭಾಗದ ರೈತರ ಜಮೀನುಗಳಿಗೆ ನೀರು ಪೂರೈಸಬೇಕು .ಕಾಲುವೆಗಳಿಗೆ ಅಳವಡಿಸಿರುವ ಭಾರಿ ಗಾತ್ರದ ಆನದಿಕೃತ ಪೈಪ್ ಗಳನ್ನು ತೆರವುಗೊಳಿಸಬೇಕು. ಕಾಲುವೆಗಳಲ್ಲಿನ ಹೂಳು ಮತ್ತು ರಸ್ತೆ ಮೇಲೆ ಜಂಗಲ್ ಕಟ್ಟಿಂಗ್ ಮಾಡಿಸಬೇಕು. ಕೂಡಲೇ ನೀರು ನಿರ್ವಹಣೆಗೆ ಅಗತ್ಯವಿರುವ ಕಾಲಿ ಇರುವ ಸ್ಥಳಗಳಿಗೆ ಇಂಜನೀಯರ್‌ಗಳನ್ನು ನೇಮಕ ಮಾಡಬೇಕು. ತುಂಗಭದ್ರಾ ಮುಖ್ಯ ಕಾಲುವೆಯ ಎಲ್ಲಾ ವಿಭಾಗಗಳಲ್ಲಿ ಆನಧಿಕೃತವಾಗಿ 1.5 ಲಕ್ಷ ಎಕರೆಯಷ್ಟು ಆನದಿಕೃತವಾಗಿ ನೀರಾವರಿ ಮಾಡಿಕೊಂಡಿರುವ ಜಮೀನುಮಾಲಿಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಮಾನ್ವಿ,ಸಿರವಾರ,ರಾಯಚೂರು ತಾಲೂಕುಗಳಿಗೆ ನಿರಂತರವಾಗಿ ನೀರು ಪೂರೈಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ತುಂಗಭದ್ರ ನೀರು ನಿರ್ವಹಣೆಯನ್ನು ನಿರ್ವಹಿಸುವ ಐ.ಸಿ.ಸಿ. ಸಭೆಯನ್ನು ಇನ್ನೂ ಕೂಡ ಕರೆಯದೆ ಬೇಕ ಬಿಟ್ಟಿಯಾಗಿ ನೀರನ್ನು ಹರಿಸಲಾಗುತ್ತಿರುವುದರಿಂದ ಹಾಗೂ ಆನಧಿಕೃತ ನೀರಾವರಿ ಮಾಡಿಕೊಂಡವರ ಮೇಲೆ ಕ್ರಮ ಕೈಗೊಳ್ಳದೆ ಇರುವುದರಿಂದ ಹಾಗೂ ಈ ಭಾಗದ ಉಸ್ತುವರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ,ಸಚಿವರಾದ ಎನ್.ಎಸ್.ಬೋಸರಾಜು,ಶಾಸಕ ಹಂಪಯ್ಯನಾಯಕ ಇವರು ರೈತರಿಗೆ ನೀರುಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅದರಿಂದ ಇಂದು ರೈತರು ಬೀದಿಗೆ ಇಳಿದು ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿದೆ.ರಾಜ್ಯ ಸರಕಾರ ರೈತರ ಹಿತ ಕಾಪಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಮಾನ್ವಿ ಮತ್ತು ಸಿರವಾರ ತಾಲೂಕುಗಳ ವಿವಿಧ ಉಪಕಾಲುವೆಗಳಿಗೆ ನೀರು ಒದಗಿಸುವ 65 ಮೈಲ್ ಮುಖ್ಯ ಕಾಲುವೆಯಲ್ಲಿಯೇ ಗೇಜ್ ನಿರ್ವಹಣೆ ಮಾಡುವುದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಅರೋಪಿಸಿದರು.
ರೈತರಿಂದ ಮನವಿ ಸ್ವಿಕರಿಸಿ ಮುನಿರಾಬಾದ್ ನೀರಾವರಿ ಇಲಾಖೆಯ ಮುಖ್ಯ ಇಂಜನೀಯರ್ ಹನುಮಂತಪ್ಪ ದಾಸರ್ ಮಾತನಾಡಿ ತುಂಗಭದ್ರ ಜಲಾಶಯದಲ್ಲಿ 105 ಟಿ.ಎಂ.ಸಿ. ಯಷ್ಟು ನೀರು ಸಂಗ್ರಹವಾಗಿದ್ದು 25ಸಾವಿರ ಕ್ಯೂಸೆಕ್ ನೀರು ಒಳಹರಿವು ಇದ್ದು ಈ ಭಾಗದ ಎಲ್ಲಾ ಕಾಲುವೆಗಳಿಗೆ ನೀರು ಹರಿಸುವುದಕ್ಕೆ ನೀರಿನ ಕೋರತೆ ಇಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ನೆರವನ್ನು ಪಡೆದು ಬಂದೋಬಸ್ತ ಕೈಗೊಂಡು ನೀರು ಹರಿಸುವುದಕ್ಕೆ ಕ್ರಮ ಕೈಗೊಳಲಾಗುವುದು ಖಾಲಿ ಇರುವ ಇಂಜಿನಿಯರ್ ಹುದ್ದೆಗಳಿಗೆ ಡೆಪುಟೇಶನ್ ಮಾಡಲಾಗುವುದು ಈ ಭಾಗದ ಕಾಲುವೆಗಳಿಗೆ ನೀರು ಹರಿಸುವುದಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಕ್ಷತೀತವಾಗಿ ನಡೆಸಿದ ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಯುವಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರನಾಯಕ, ಬಿಜೆಪಿ ಮಾನ್ವಿ ಮಂಡಲಾಧ್ಯಕ್ಷರಾದ ಜೆ.ಸುಧಕರ್,ಮಲ್ಲಿಕಾರ್ಜುನ ಜಕ್ಕಲದಿನ್ನಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ದೊಡ್ಡಬಸವನಗೌಡ ಬಲ್ಲಟಗಿ, ರಾಜ್ಯ ಕಾರ್ಯದರ್ಶಿಗಳಾದ ಸೂಗೂರಯ್ಯ ಆರ್.ಎಸ್.ಮಠ, ಯಂಕಪ್ಪ ಕಾರಬಾರಿ, ಜಿಲ್ಲಾಧ್ಯಕ್ಷರಾದ ಪ್ರಭಾಕರ ಪಾಟೀಲ್ ಇಂಗಳದಾಳ, ಬಸವರಾಜ ಮಾಲಿ ಪಾಟೀಲ್,ಲಿಂಗರೆಡ್ಡಿ ಪಾಟೀಲ್ , ಬೂದಯ್ಯಸ್ವಾಮಿ, ವೀರೇಶ ಗವಿಗಟ್, ಮಾನ್ವಿ ತಾಲೂಕು ಅಧ್ಯಕ್ಷರಾದ ಸಿದ್ದಯ್ಯಸ್ವಾಮಿ ಗೋರ್ಕಾಲ್,ಸಿರವಾರ ತಾ.ಅಧ್ಯಕ್ಷರಾದ ಹೆಚ್.ಶಂಕ್ರಪ್ಪ ದೇವತಗಲ್,ಬಾಲಜಿ ಜೀನೂರು ಕ್ಯಾಂಪ್,ಜಾವೀದ್ ಖಾನ್ ರಾಜ್ಯ ಯುವಮುಖಂಡರು, ಕನ್ನಡ ಪರ ಸಂಘಟನೆಗಳ ಅಧ್ಯಕ್ಷರಾದ ಬಸವನಗೌಡ,ಸುಬಾನ್ ಬೇಗ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ಭಾಗವಹಿಸಿದರು.
ಸಿಂಧನೂರು ಡಿ.ವೈ.ಎಸ್.ಪಿ. ಬಿ.ಎಸ್.ತಳವಾರ್, ಪಿ.ಐ.ವೀರಭದ್ರಯ್ಯ ಹಿರೇಮಠ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ ಏರ್ಪಡಿಸಿದರು.
ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30ರವರೆಗೆ ಹೆದ್ದಾರಿಯಲ್ಲಿ ರೈತರು ರಸ್ತೆ ತಡೆ ನಡೆಸಿದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು. ರೈತರ ಹೋರಾಟಕ್ಕೆ ಬೆಂಬಲವಾಗಿ ಪಟ್ಟಣದಲ್ಲಿನ ವ್ಯಾಪರಸ್ಥರು ಕೂಡ ತಮ್ಮ ಅಂಗಡಿಗಳನ್ನು ಮುಚ್ಚಿ ಬೆಂಬಲ ನೀಡಿದರು.
ಪ್ರತಿಭಟನೆ ವೇಳೆ ರೈತರು ವಿಷದ ಬಾಟಿಲ್ ಹಾಗೂ ಒಣಗಿರುವ ಭತ್ತದ ಬೆಳೆಯನ್ನು ಹಿಡಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಾಹಿಸಿದ ರೈತ ಸಂಘದ ರಾಜ್ಯ ಯುವ ಮುಖಂಡ ಜಾವೀದ್ ಖಾನ್ ಬಿಸಿಲಿನ ತಾಪಕ್ಕೆ ಮೂರ್ಚೆ ಹೋಗಿದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.