MLA MR Manjunath issues title deed to public cemetery

ವರದಿ: ಬಂಗಾರಪ್ಪ .ಸಿ .
ಹನೂರು: ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಗನಕಟ್ಟೆ ಗ್ರಾಮದ ನಿವಾಸಿಗಳು ಮತ್ತು ಸಾರ್ವಜನಿಕ ಸ್ಮಶಾನಕ್ಕೆ 50 ಸೆಂಟ್ ಸರ್ಕಾರಿ ಜಾಗದ ಹಕ್ಕು ಪತ್ರವನ್ನು ಗ್ರಾಮದ ಮುಖಂಡರಿಗೆ ಶಾಸಕ ಎಂ.ಆರ್ ಮಂಜುನಾಥ್ ರವರು ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು
ಈ ಸ್ಮಶಾನವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಆದಷ್ಟು ಬೇಗನೆ ನರೇಗಾ ಮತ್ತು 15ನೇ ಹಣಕಾಸು ಯೋಜನೆ ಅನುಧಾನವನ್ನು ಬಳಕೆ ಮಾಡಿಕೊಂಡು ಉತ್ತಮವಾಗಿ ಅಭಿವೃದ್ಧಿ ಪಡಿಸಿ ಜನ ಸಾಮಾನ್ಯರ ಉಪಯೋಗಕ್ಕೆ ನೀಡುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾದ ವಿಶ್ವನಾಥ್ ರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ವೈ ಕೆ ಗುರುಪ್ರಸಾದ್, ಪಿಡಿಓ ವಿಶ್ವನಾಥ್ ,ವಿ.ಎ ಶೇಷಣ್ಣ ಸರ್ವೆ ಅಧಿಕಾರಿ ಸಿಂಗಾರಿ ಶೆಟ್ರು ಹಾಗೂ ಮುಖಂಡರುಗಳಾದ ಜೇಸಿಮ್ ಪಾಷ,ಸೈಯದ್ ಬಸರಾತ್ ಸೈಯದ್ ರಫೀಕ ಅತಿಕ್ ರಹೀಲ್ . ವಿಜಯ್ ಕುಮಾರ್ ಶ್ರೀರಂಗಂ ಎಸ್ ಆರ್ ಮಹದೇವ್ ವೆಂಕಟೇಶ್ ಇನ್ನಿತರರು ಹಾಜರಿದ್ದರು.