Breaking News

ಕಾರ್ಗಿಲ್ ವಿಜಯ ದೇಶವಾಸಿಗಳಿಗೆ ಪ್ರೇರಣೆ: ನಾಗರಾಜ ಗುತ್ತೇದಾರ

Kargil victory inspires compatriots: Nagaraja Guttedar.

ಗಂಗಾವತಿ: ಗಂಗಾವತಿಯ ನ್ಯಾಯವಾದಿಗಳಾದ ನಾಗರಾಜ ಗುತ್ತೇದಾರರವರು ಕಾರ್ಗಿಲ್ ವಿಜಯೋತ್ಸವ ದೇಶವಾಸಿಗಳಲ್ಲಿ ದೇಶಪ್ರೇಮದ ಪ್ರೇರಣೆಯನ್ನು ಹುಟ್ಟುಹಾಕುವಂತಹದ್ದಾಗಿದೆ. ೫೨೭ ಜನ ವೀರಯೋಧರು ತಮ್ಮ ತ್ಯಾಗ, ಬಲಿದಾನಗಳ ಮೂಲಕ ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಡುಗಡೆಗೊಳಿಸಿ, ತಾಯಿ ಭಾರತ ಮಾತೆಗೆ ತಮ್ಮ ಆತ್ಮಾರ್ಪಣೆಯನ್ನು ಮಾಡುವ ಮೂಲಕ ದೇಶದ ಸಮಸ್ತರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರ ದೇಶಪ್ರೇಮ ದೇಶವಾಸಿಗಳಿಗೆ ಮಾದರಿಯಾದದ್ದು ಎಂದು ಅಭಿಪ್ರಾಯಪಟ್ಟರು.
ಅವರು ದಿನಾಂಕ: ೨೬.೦೭.೨೦೨೩ ರಂದು ಟಿ.ಎಂ.ಎ.ಇ ಬಿ.ಎಡ್ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ನೇತೃತ್ವದಲ್ಲಿ ಕಾರ್ಗಿಲ್ ವಿಜಯ ದಿವಸ್ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ೧೩೬೩ ಕ್ಕೂ ಹೆಚ್ಚು ಜನ ಸೈನಿಕರು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಗಾಯಾಳುಗಳಾದರು. ರಾಜ್ಯದ ೧೩ ವೀರಯೋಧರು ಅಮರರಾದರು. ಹಾಗಾಗಿ ಕಾರ್ಗಿಲ್ ವಿಜಯ ದಿವಸ್ ಕೇವಲ ಒಂದು ಯುದ್ಧದ ವಿಜಯದ ದಿನವಾಗದೆ ದೇಶದ ಸಮಸ್ತ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ, ಯುವಕರಿಗೆ ದೇಶಪ್ರೇಮದ ದೊಡ್ಡ ಪಾಠವೆಂದರೆ ಅದು ತಪ್ಪಲ್ಲ, ದೇಶದ ಗಡಿಯನ್ನು ಕಾಯುವ ವೀರಯೋಧರ ನಿಷ್ಕಲ್ಮಶ ತ್ಯಾಗ, ಹೋರಾಟ, ಶ್ರದ್ಧಾಪೂರ್ಣವಾದ ಕಾರ್ಯಕ್ಷಮತೆಯಿಂದಲೇ ಭಾರತ ಸದೃಢವಾಗಿ ಇರುವುದಕ್ಕೆ ಸಾಧ್ಯವಾಗಿದೆ. ಇಂತಹ ಸೈನಿಕರ ಸಂತತಿ ಸಾವಿರವಾಗಲಿ, ಮುಂದಿನ ನಮ್ಮ ಯುವ ಪೀಳಿಗೆ ದೇಶಪ್ರೇಮದ ಕಡೆಗೆ ಸೈನಿಕ ವೃತ್ತಿಯ ಕಡೆಗೆ ತಮ್ಮ ಮನಸ್ಸು ಮತ್ತು ದೇಹವನ್ನು ಹದಗೊಳಿಸಿಕೊಳ್ಳಲಿ. ಆ ಮೂಲಕ ದೇಶಸೇವೆ ಮಾಡುವಂತಹ ಕಾರ್ಯ ಅವರಿಗೆ ಒದಗಲಿ ಎಂದು ಆಶಿಸುವುದರ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಮಡಿದ ಎಲ್ಲ ವೀರಯೋಧರನ್ನು ಸ್ಮರಿಸುವುದರ ಜೊತೆಗೆ ಆ ಸಂದರ್ಭದಲ್ಲಿ ಸೈನಿಕರು ಕುಟುಂಬಗಳು ಮೆರೆದ ತ್ಯಾಗವನ್ನು, ಧೈರ್ಯವನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಎ.ಬಿ.ವಿ.ಪಿ ನಗರ ಕಾರ್ಯದರ್ಶಿ ಅಭಿಷೇಕ ಹಿರೇಮಠ, ಸಂಸ್ಥೆಯ ಪ್ರಾಂಶುಪಾಲರಾದ ಕೆ.ಸಿ ಕುಲಕರ್ಣಿ, ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶರಣಬಸವ ಬಿಳಿಎಲಿ, ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾದ ಕಿರಣ, ಗೌತಮ, ಭೀಮಾಶಂಕರ, ಸುರೇಂದ್ರ, ಶರಣು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.