Breaking News

ಬೆಂಗಳೂರಿನಲ್ಲಿ ತ್ರಿಚಕ್ರ ವಾಹನ ‘ಸೂಪರ್ ಕಾರ್ಗೋ’ ಬಿಡುಗಡೆ ಮಾಡಿದ ಮೋಂಟ್ರಾ ಎಲೆಕ್ಟ್ರಿಕ್

Montra Electric launches three-wheeler ‘Super Cargo’ in Bengaluru

ಜಾಹೀರಾತು
Screenshot 2025 06 11 16 55 11 05 6012fa4d4ddec268fc5c7112cbb265e7

• ಸೂಪರ್ ಕಾರ್ಗೋ (ಇ-3ಡಬ್ಲ್ಯೂ) ಉದ್ಯಮದಲ್ಲೇ ಅತ್ಯಧಿಕವಾದ 200+ ಕಿಮೀ ಪ್ರಮಾಣಿತ ರೇಂಜ್ ಒದಗಿಸುತ್ತದೆ ಮತ್ತು ಇದರ ರಿಯಲ್ ಲೈಫ್ ರೇಂಜ್ 170 ಕಿಮೀ ಆಗಿದೆ.
• ಇದರ ಆರಂಭಿಕ ಬೆಲೆ ರೂ. 4.37 (ಬೆಂಗಳೂರು ಎಕ್ಸ್-ಶೋರೂಮ್, ಸಬ್ಸಿಡಿ ನಂತರ)* ಮತ್ತು ಉದ್ಯಮದಲ್ಲಿಯೇ ಅತ್ಯುತ್ತಮವಾದ 5 ವರ್ಷ ಅಥವಾ 1.75 ಲಕ್ಷ ಕಿಮೀಗಳ ಬ್ಯಾಟರಿ ವಾರಂಟಿ ನೀಡಲಾಗುತ್ತಿದೆ.
• ಸೂಪರ್ ಕಾರ್ಗೋ 13.8 ಕಿಲೋವ್ಯಾಟ್ ಲಿಥಿಯಂ- ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಮೂರು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಅವು ಹೀಗಿವೆ: 170 ಕ್ಯೂಬಿಕ್ ಫೀಟ್, 140 ಕ್ಯೂಬಿಕ್ ಫೀಟ್ ಮತ್ತು ಟ್ರೇ ಡೆಕ್.
• ಸೂಪರ್ ಕಾರ್ಗೋ 15 ನಿಮಿಷಗಳಲ್ಲಿ ಶೇ.100 ಚಾರ್ಜಿಂಗ್ ಆಗುವ ಆಯ್ಕೆಯೊಂದಿಗೆ ಲಭ್ಯವಿರುತ್ತದೆ, ಎಕ್ಸ್‌ ಪೋನೆಂಟ್ ಎನರ್ಜಿ ಸಂಸ್ಥೆಯ ಪಾಲುದಾರಿಕೆಯಿಂದ ಈ ಸೌಲಭ್ಯ ಒದಗಿಸಲಾಗುತ್ತಿದೆ.

ಬೆಂಗಳೂರು-11 ಜೂನ್ 2025: ಮುರುಗಪ್ಪ ಗ್ರೂಪ್‌ ನ ಕ್ಲೀನ್ ಮೊಬಿಲಿಟಿ ಬ್ರಾಂಡ್ ಆದ ಮೋಂಟ್ರಾ ಎಲೆಕ್ಟ್ರಿಕ್ ಇಂದು ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ‘ಸೂಪರ್ ಕಾರ್ಗೋ’ ಅನ್ನು ಬಿಡುಗಡೆ ಮಾಡಿದೆ. ಹೊಸ ಸೂಪರ್ ಕಾರ್ಗೋ ಕೊನೆಯ ಹಂತದ ತ್ರಿಚಕ್ರ ಸರಕು ಸಾಗಾಣಿಕಾ ವಿಭಾಗದಲ್ಲಿ ಸಂಚಲನ ಮೂಡಿಸಲಿದ್ದು, ಪ್ರಸ್ತುತ ಮಾರುಕಟ್ಟೆಯ ಕೊರತೆಗಳನ್ನು ನೀಗಿಸುವ ಭರವಸೆಯಿಂದ ಮಾರುಕಟ್ಟೆಗೆ ಬಂದಿದೆ. ಈ ವಾಹನವು ಗ್ರಾಹಕರಿಗೆ ಉತ್ತಮ ಆದಾಯ ಗಳಿಸಲು ನೆರವಾಗುತ್ತದೆ ಮತ್ತು ಯಾವುದೇ ಭೂಪ್ರದೇಶದಲ್ಲಿ ಸುಲಭವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಟಿಐ ಕ್ಲೀನ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಲಜ್ ಗುಪ್ತಾ, ಲಾಸ್ಟ್ ಮೈಲ್ ಮೊಬಿಲಿಟಿಯ ಬಿಸಿನೆಸ್ ಹೆಡ್ ಶ್ರೀ ರಾಯ್ ಕುರಿಯನ್, ಸಣ್ಣ ವಾಣಿಜ್ಯ ವಾಹನಗಳ ಸಿಇಓ ಶ್ರೀ ಸಾಜು ನಾಯರ್ ಮತ್ತು ಇತರ ಪ್ರಮುಖ ಪಾಲುದಾರರ ಸಮ್ಮುಖದಲ್ಲಿ ಸೂಪರ್ ಕಾರ್ಗೋವನ್ನು ಬಿಡುಗಡೆ ಮಾಡಲಾಗಿದೆ.

ಸೂಪರ್ ಕಾರ್ಗೋ 13.8 ಕಿಲೋವ್ಯಾಟ್ ಲಿಥಿಯಂ- ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ವಿಭಾಗದಲ್ಲೇ ಅತ್ಯುತ್ತಮವಾದ 170 ಕಿಮೀ ಆನ್- ರೋಡ್ ರೇಂಜ್ ನೀಡುತ್ತದೆ. ಇದರ ಶಕ್ತಿಶಾಲಿ ಡ್ರೈವ್‌ ಟ್ರೇನ್ ಶೇ.23ರಷ್ಟು ಗ್ರೇಡೇಬಿಲಿಟಿಯೊಂದಿಗೆ 70 ಎನ್‌ಎಂ ಟಾರ್ಕ್ ಮತ್ತು 11 ಕಿಲೋವ್ಯಾಟ್ ಗರಿಷ್ಠ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 1.2 ಟನ್ ಒಟ್ಟು ತೂಕ ಹೊಂದಿರುವ ಈ ವಾಹನವನ್ನು ಎಲ್ಲಾ ರೀತಿಯ ಲೋಡ್‌ ಗಳನ್ನು ಸುಲಭವಾಗಿ, ಆರಾಮದಾಯಕವಾಗಿ ಸಾಗಿಸಲು ವಿನ್ಯಾಸಗೊಳಿಸಲಾಗಿದೆ.

ಇದು ಗಟ್ಟಿಮುಟ್ಟಾದ ಬೋರಾನ್ ಸ್ಟೀಲ್ ಚಾಸಿಸ್‌ ನೊಂದಿಗೆ ಬರುತ್ತದೆ, ಇದು ಉತ್ತಮ ಶಕ್ತಿ ಹೊಂದಿದೆ ಮತ್ತು ಗ್ರಾಹಕರಿಗೆ ದೀರ್ಘ ಬಾಳಿಕೆಯನ್ನು ನೀಡುತ್ತದೆ. ಜೊತೆಗೆ ವಿಭಾಗದಲ್ಲೇ ಅತ್ಯುತ್ತಮ ಕಾರ್ಯನಿರ್ವಹಣೆಯ ಭರವಸೆಯನ್ನು ನೀಡುತ್ತದೆ. ಸೂಪರ್ ಕಾರ್ಗೋ ತನ್ನ ವಿಭಾಗದಲ್ಲಿಯೇ ಅತೀ ಉದ್ದದ ವೀಲ್‌ ಬೇಸ್ ಹೊಂದಿದ್ದು, ಭಾರಿ ವಿಶಾಲವಾದ ಡ್ರೈವರ್ ಕ್ಯಾಬಿನ್ ಹೊಂದಿದೆ. ದೊಡ್ಡ ದೊಡ್ಡ ಡೆಲಿವರಿ ಮಾಡಲು ಅನುಕೂಲಕರವಾದ 6.2 ಅಡಿಯ ಲೋಡ್ ಟ್ರೇ ಕೂಡ ಹೊಂದಿದ್ದು, ಇದರಿಂದ ಚಾಲಕರಿಗೆ ಅನುಕೂಲವಾಗಲಿದೆ.

ಸುರಕ್ಷತಾ ಫೀಚರ್ ಗಳು :
ಸೂಪರ್ ಕಾರ್ಗೋ ಅತ್ಯುತ್ತಮ ಸುರಕ್ಷತಾ ಫೀಚರ್ ಗಳನ್ನು ಹೊಂದಿದ್ದು, ಅವು ಹೀಗಿವೆ:
• ಉನ್ನತ ಕಾರ್ಯಕ್ಷಮತೆಯ ಫ್ರಂಟ್ ಡಿಸ್ಕ್ ಬ್ರೇಕ್‌ ಗಳು
• ಹಿಲ್ ಹೋಲ್ಡ್ ಫೀಚರ್
• ರಿವರ್ಸ್ ಅಸಿಸ್ಟ್
• ಸೀಟ್ ಬೆಲ್ಟ್‌
• ವಾಹನದ ದಕ್ಷತೆಯನ್ನು ಹೆಚ್ಚಿಸುವ ರಿಜನರೇಟಿವ್ ಬ್ರೇಕಿಂಗ್ ಮತ್ತು ಹಲವು ಡ್ರೈವ್ ಮೋಡ್‌ ಗಳು.

ಈ ಸಂದರ್ಭದಲ್ಲಿ ಮಾತನಾಡಿದ ಟಿಐ ಕ್ಲೀನ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಲಜ್ ಗುಪ್ತಾ ಅವರು, “ನಮ್ಮ ಉತ್ಪನ್ನ ಸರಣಿಗೆ ಮೋಂಟ್ರಾ ಎಲೆಕ್ಟ್ರಿಕ್ ಸೂಪರ್ ಕಾರ್ಗೋ ಸೇರ್ಪಡೆಯಾಗಿರುವುದು ಕೊನೆಯ ಹಂತದ ಡೆಲಿವರಿ ವಿಭಾಗದ ನಮ್ಮ ಅಭಿವೃದ್ಧಿಯ ಕಥೆಯ ಹೊಸ ರೋಮಾಂಚಕ ಅಧ್ಯಾಯದ ಪ್ರಾರಂಭವಾಗಿದೆ. ನಾವು ಪ್ರಯಾಣಿಕ ತ್ರಿ- ಚಕ್ರದ ವಾಹನ ಸೂಪರ್ ಆಟೋದಿಂದ ನಮ್ಮ ಪಯಣವನ್ನು ಆರಂಭಿಸಿದ್ದು, ನಂತರ ರೈನೋ ಎಂಬ ಭಾರೀ ಟ್ರಕ್‌ ಗಳ ಮೂಲಕ ಮೊದಲ ಹಂತದ ಸರಕು ಸಾಗಾಣಿಕಾ ವಿಭಾಗಕ್ಕೆ ಕಾಲಿಟ್ಟೆವು. ನಾವು ಕಾರ್ಗೋ ವಿಭಾಗದಲ್ಲಿ ಮಧ್ಯಮ ಹಂತದ ಮತ್ತು ಕೊನೆಯ ಹಂತದ ಸರಕು ಸಾಗಾಣಿಕಾ ವಿಭಾಗಕ್ಕೆ ಪ್ರವೇಶಿಸಲು ಯಾವಾಗಲೂ ಬಯಸಿದ್ದೆವು. ಏವಿಯೇಟರ್ ಮೂಲಕ ಮಧ್ಯಮ ಹಂತದ ಸರಕು ಸಾಗಾಣಿಕಾ ವಿಭಾಗಕ್ಕೆ ಈಗಾಗಲೇ ನಾವು ಪ್ರವೇಶಿಸಿದ್ದೇವೆ. ಮತ್ತೀಗ ಸೂಪರ್ ಕಾರ್ಗೋ ಬಿಡುಗಡೆ ಮಾಡುವ ಮೂಲಕ ತಾಂತ್ರಿಕವಾಗಿ ಕೊನೆಯ ಹಂತದ ಡೆಲಿವರಿ ಸ್ಥಾನಕ್ಕೂ ಪ್ರವೇಶ ಮಾಡಿದ್ದೇವೆ. ಈ ಮೂಲಕ ಮಹತ್ವದ ಸಾಧನೆ ಮಾಡಿದ್ದೇವೆ. ಟ್ರೂ- ಇವಿ ಬ್ರಾಂಡ್ ಆಗಿ, ಕೇವಲ ವಾಹನಗಳನ್ನು ಒದಗಿಸುವುದನ್ನು ಮೀರಿ, ಶುದ್ಧ ಮತ್ತು ದಕ್ಷ ಭವಿಷ್ಯಕ್ಕೆ ಕೊಡುಗೆ ನೀಡುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ. ಇದರೊಂದಿಗೆ, ಭಾರತದ ಸಾರಿಗೆ ಕ್ಷೇತ್ರವನ್ನು ಸುಸ್ಥಿರತೆಯ ಕಡೆಗೆ ಕೊಂಡೊಯ್ಯಲು ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೋಂಟ್ರಾ ಎಲೆಕ್ಟ್ರಿಕ್ ನ ಲಾಸ್ಟ್ ಮೈಲ್ ಮೊಬಿಲಿಟಿ ಬಿಸಿನೆಸ್ ಹೆಡ್ ಶ್ರೀ ರಾಯ್ ಕುರಿಯನ್ ಅವರು, “ಮೋಂಟ್ರಾ ಎಲೆಕ್ಟ್ರಿಕ್ ಸೂಪರ್ ಕಾರ್ಗೋ ವಾಹನವನ್ನು ಗ್ರಾಹಕರ ಒಳನೋಟಗಳನ್ನು ಪಡೆದು ವಿನ್ಯಾಸ ಮಾಡಲಾಗಿದೆ. ಇದು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದು, ಇದರಲ್ಲಿ ಲಭ್ಯವಿರುವ 15 ನಿಮಿಷದ ಪೂರ್ಣ ಚಾರ್ಜಿಂಗ್ ಸಾಮರ್ಥ್ಯದ ಆಯ್ಕೆಯು ಬಿ2ಬಿ ಕ್ಷೇತ್ರದ ಗ್ರಾಹಕರಿಗೆ ಒಂದು ದೊಡ್ಡ ಲಾಭ ತಂದುಕೊಡಲಿದೆ. ಸೂಪರ್ ಕಾರ್ಗೋ ವಾಹನ ನಿರ್ವಾಹಕರಿಗೆ ಮತ್ತು ವೈಯಕ್ತಿಕ ಉದ್ಯಮಿಗಳಿಗೆ ವಿವಿಧ ಕಾರ್ಯಗಳಿಗೆ ಸೂಕ್ತವಾಗಿದೆ. ನಮ್ಮ ವಿಸ್ತರಿಸುತ್ತಿರುವ ಡೀಲರ್ ಜಾಲವು ರಾಷ್ಟ್ರಾದ್ಯಂತ ಅತ್ಯುತ್ತಮ ಸೇವೆ ನೀಡುವ ಭರವಸೆ ನಮಗಿದೆ” ಎಂದು ಹೇಳಿದರು.

ಎಕ್ಸ್‌ ಪೋನೆಂಟ್ ಎನರ್ಜಿಯ ಸಹ-ಸಂಸ್ಥಾಪಕರಾದ ಶ್ರೀ ಅರುಣ್ ವಿನಾಯಕ್ ಅವರು, “ಮೋಂಟ್ರಾ ಎಲೆಕ್ಟ್ರಿಕ್ ಜೊತೆಗೆ ಪಾಲುದಾರಿಕೆಯನ್ನು ಹೊಂದಿರುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ನಮ್ಮ 15 ನಿಮಿಷದ 100% ಚಾರ್ಜಿಂಗ್ ವ್ಯವಸ್ಥೆಯು ವಾಹನವನ್ನು ಹೆಚ್ಚು ಸಮಯ ಕಾರ್ಯ ನಿರ್ವಹಿಸುವಂತೆ ಮಾಡಲಿದೆ ಮತ್ತು ಈ ಸೌಲಭ್ಯವು ಮಾರುಕಟ್ಟೆಯಲ್ಲಿ ಉತ್ತಮವಾಗಿ ಸ್ವೀಕರಿಸಲ್ಪಟ್ಟಿದೆ. ಮೋಂಟ್ರಾ ಎಲೆಕ್ಟ್ರಿಕ್ ಜೊತೆಗಿನ ಈ ಕಾರ್ಯತಂತ್ರದ ಪಾಲುದಾರಿಕೆಯು ಕ್ಲೀನ್ ಮೊಬಿಲಿಟಿ ಉದ್ದೇಶ ಸಾಧನೆಯನ್ನು ದೊಡ್ಡ ಪ್ರಮಾಣದಲ್ಲಿ ಸಾಧ್ಯವಾಗಿಸಲು ಸಹಾಯ ಮಾಡುತ್ತದೆ. ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ನಾವು ಚಾರ್ಜಿಂಗ್ ಜಾಲವನ್ನು ವಿಸ್ತರಿಸಲು ಬ್ರಾಂಡ್ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತೇವೆ” ಎಂದು ಹೇಳಿದರು.

ಮೋಂಟ್ರಾ ಎಲೆಕ್ಟ್ರಿಕ್ ಸೂಪರ್ ಕಾರ್ಗೋ ಈಗ 90ಕ್ಕೂ ಹೆಚ್ಚು ನಗರಗಳಲ್ಲಿನ ವಿಶೇಷ ಶೋರೂಮ್‌ ಗಳಲ್ಲಿ ಬುಕಿಂಗ್‌ ಮಾಡಲು ಲಭ್ಯವಿದೆ. ವಾಹನವು ಮೂರು ಕಾರ್ಗೋ ಬಾಡಿ ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ಅವು ಹೀಗಿವೆ: ಟ್ರೇ ಇಸಿಎಕ್ಸ್, 140 ಕ್ಯೂಬಿಕ್ ಫೀಟ್ ಇಸಿಎಕ್ಸ್ ಡಿ, ಮತ್ತು 170 ಕ್ಯೂಬಿಕ್ ಫೀಟ್ ಇಸಿಎಕ್ಸ್ ಡಿ+.
ಇದರ ಜೊತೆಗೆ, ವಿಶೇಷವಾಗಿ ಎರಡು ವೇರಿಯಂಟ್‌ಗಳು (ಟ್ರೇ ಇಕ್ಯೂಎಕ್ಸ್ ಮತ್ತು 170 ಕ್ಯೂಬಿಕ್ ಫೀಟ್ ಇಕ್ಯೂಎಕ್ಸ್ ಡಿ+) 15 ನಿಮಿಷದಲ್ಲಿ 100% ಕ್ವಿಕ್ ಚಾರ್ಜಿಂಗ್ ಆಯ್ಕೆಯನ್ನು ನೀಡುತ್ತವೆ. ಸೂಪರ್ ಕಾರ್ಗೋ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ, ಆ ಬಣ್ಣಗಳು ಹೀಗಿವೆ: ಚಿಲ್ಲಿ ರೆಡ್, ಸ್ಟೀಲ್ ಗ್ರೇ, ಇಂಡಿಯನ್ ಬ್ಲೂ, ಮತ್ತು ಸ್ಟಾಲಿಯನ್ ಬ್ರೌನ್.

About Mallikarjun

Check Also

unnamed

ಕಟ್ಟಡ ಇತರೆ ನರ‍್ಮಾಣ ಕರ‍್ಮಿಕರ ಆನ್ಲೈನ್ ರ‍್ಜಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ. ರ‍್ಕಾರ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಜಾರಿ ಮಾಡಿ

ಕಟ್ಟಡ ಇತರೆ ನರ‍್ಮಾಣ ಕರ‍್ಮಿಕರ ಆನ್ಲೈನ್ ರ‍್ಜಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ. ರ‍್ಕಾರ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಜಾರಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.