Breaking News

ವಿದ್ಯಾರ್ಥಿಗಳು ಸಾಧನೆಯ ಮೂಲಕ ಪಾಲಕರ-ಶಿಕ್ಷಕರ ಕನಸು ನನಸು ಮಾಡಬೇಕು

Students should fulfill the parents-teachers dream through achievement


ಗಂಗಾವತಿ: ವಿದ್ಯಾರ್ಥಿಗಳು ಸತತ ಪರಿಶ್ರಮ ಮತ್ತು ಅಧ್ಯಾಯನದ ಮೂಲಕ ಜ್ಞಾನ ಸಂಪಾದಿಸಿ ಕೊಂಡು ಪಾಲಕರ-ಶಿಕ್ಷಕರ ಕನಸು ನನಸು ಮಾಡಬೇಕೆಂದು ಸಂಕಲ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಹೇಮಂತರಾಜ ಕಲ್ಮಂಗಿ ಹೇಳಿದರು.
ಅವರು ನಗರದ ಶ್ರೀಕೃಷ್ಣದೇವರಾಯ ಭವನದಲ್ಲಿ ಸಂಕಲ್ಪ ಪಿಯು ಕಾಲೇಜಿನ ವಿದ್ಯಾರ್ಥಿ ಚಟುವಟಿಕೆಗಳಿಗೆ ಚಾಲನೆ ಮತ್ತು ದ್ವಿತಿಯ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಕಲ್ಪ ವಿದ್ಯಾ ಸಂಸ್ಥೆಯ ಪಿಯುಸಿ ಮತ್ತು ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದು ವಿವಿಧ ಇಲಾಖೆಗಳಲ್ಲಿ ನೌಕರಿ ಪಡೆದುಕೊಂಡಿದ್ದು ಇಲ್ಲಿಯ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರ ಶ್ರಮದ ಫಲವಾಗಿದೆ ಎಂದರು. ಎಂಎನ್‌ಎಂ ಕಾಲೇಜು ಪ್ರಾಚಾರ್ಯ ಟಿ.ಶಾಂತಪ್ಪ ಮಾತನಾಡಿ, ವಿದ್ಯಾರ್ಥಿಗಳು ಸದೃಢ ಆರೋಗ್ಯ, ಮನಸ್ಸಿನ ಮೂಲಕ ಶ್ರದ್ಧೆಯಿಂದ ಪರಿಶ್ರಮಪಟ್ಟು ಓದುವ ಮೂಲಕ ಗುರಿ ಸಾಧನೆ ಮಾಡಬೇಕೆಂದರು. ಪ್ರಾಧ್ಯಾಪಕ ಅಮೀತಕುಮಾರ ಕಾಲೇಜು ವಿದ್ಯಾರ್ಥಿ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯ ಮತ್ತು ಅಧ್ಯಾಪಕರ ಮಾರ್ಗದರ್ಶನದಲ್ಲಿ ಓದುವ ಮೂಲಕ ಸಾಧನೆ ಮಾಡಬೇಕು. ಧನಾತ್ಮಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೊಬೈಲ್ ಬಳಕೆಯಿಂದ ಏಕಾಗ್ರತೆ ಕಡಿಮೆಯಾಗುತ್ತದೆ. ಆದ್ದರಿಂದ ಮೊಬೈಲ್ ಬಳಕೆ ಸೀಮಿತವಾಗಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ.ನಿಂಗಜ್ಜ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ ನಾಯಕ, ಅತೀ ಹೆಚ್ಚು ಅಂಕ ಪಡೆದ ಯಶವಂತ್ ಕುರಿ, ಶ್ರೀದೇವಿ ಸೇರಿ ಶಿಕ್ಷಣ, ಕಲಾ ಮತ್ತು ವಾಣಿಜ್ಯ ವಿಭಾಗದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿತ ಹೇಮಂತರಾಜ ಕಲ್ಮಂಗಿ, ಮಲ್ಲಿಕಾರ್ಜುನ ಸಿಂಗನಾಳ, ಅಮೀತಕುಮಾರ, ಪ್ರಾಚಾರ್ಯರಾದ ಮಂಜುನಾಥ ಸ್ವಾಮಿ, ಬಸಪ್ಪ ಶಿರಿಗೇರಿ, ಶಾಂತಪ್ಪ ಸೇರಿ ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.