Breaking News

ಸಂಗೀತದಿಂದ ಮಾನಸಿಕ ನೆಮ್ಮದಿ, ಒತ್ತಡ ನಿಗ್ರಹ ಸಾಧ್ಯ

Music can help you relax and reduce stress






ಗಂಗಾವತಿ: ವೇಗದ ಮತ್ತು ಒತ್ತಡದ ಜೀವನದಲ್ಲಿ ಮನುಷ್ಯನಿಗೆ ನೆಮ್ಮದಿ ಇಲ್ಲದಂತಾಗಿದೆ. ಸಂಗೀತದಿAದ ಮನುಷ್ಯನು ಆ ನೆಮ್ಮದಿಯನ್ನು ಪಡೆಯಲು ಸಾಧ್ಯವಾಗಿದೆ
ಎಂದು ನ್ಯಾಯವಾದಿ ದೊಡ್ಡಬಸಪ್ಪ ಹಾಲಸಮುದ್ರ ಹೇಳಿದರು.
ಅವರು ನಗರದ ಆನೆಗೊಂದಿ ರಸ್ತೆಯ ಗದಿಗೆಪ್ಪ ಕಾಲೋನಿಯ ಗಣೇಶ ಸಮುದಾಯಭವನದಲ್ಲಿ .ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ನಡೆದ “ಕಲಾ ಕುಸುಮ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂಡಿತ್ ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಕವಿ ಗವಾಯಿಗಳವರು ಅನೇಕ ಅಂಧ, ಅನಾಥ ಮಕ್ಕಳಿಗೆ ಸಂಗೀತವನ್ನು ಧಾರೆಯೆರೆದು ಸಂಗೀತದಿAದ ಅವರುಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಮಾಡಿದ ಮಹಾತಪಸ್ವಿಗಳು ಎಂದು ಸ್ಮರಿಸಿದರು.
ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ.ನಿಂಗಜ್ಜ ಸನ್ಮಾನ ಸ್ವೀಕರಿಸಿ ಮಾತನಾಡಿ, ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯು ಸುಮಾರು ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಾ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿರುವಂತಹ ಮಹನೀಯರನ್ನು ಗುರುತಿಸಿ ಸನ್ಮಾನ ಮಾಡುತ್ತಾ ಬಂದಿರುತ್ತಾರೆ. ಶ್ರೀಯುತ ದಿ|| ಗೋವಿಂದರಾಜ್ ಬೊಮ್ಮಲಾಪುರ ರವರು ಈ ಒಂದು ಸಂಸ್ಥೆಯನ್ನು ಹುಟ್ಟುಹಾಕಿರುತ್ತಾರೆ. ಅದನ್ನು ಅವರ ಶ್ರೀಮತಿಯವರಾದ ಶ್ರೀಮತಿ ಮನೋರಮಾ ಗೋವಿಂದರಾಜ್ ಮುನ್ನಡೆಸಿಕೊಂಡು ಬರುವ ಮೂಲಕ ಸಂಗೀತ ಸೇವೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕೆ. ನಿಂಗಜ್ಜರವರಿಗೆ ಹಾಗೂ ಕ್ರಿಯಾಶೀಲ ಪ್ರೌಢಶಾಲೆ ಶಿಕ್ಷಕರಾದ ಸಿದ್ಧಲಿಂಗೇಶ್ವರ ಪೂಲಬಾವಿಯವರಿಗೆ ಸನ್ಮಾನಿಸಲಾಯಿತು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬಾನ್ಸುರಿ ವಾದನವನ್ನು ನಾಗರಾಜ ಶ್ಯಾವಿ ಕೊಪ್ಪಳ, ಹಾರ್ಮೊನಿಯಂ ಸೊಲೋ ರಾಮಚಂದ್ರಪ್ಪ ಉಪ್ಪಾರ ಭಾಗ್ಯನಗರ, ವಚನ ಸಂಗೀತವನ್ನು ಮಾರುತಿ ದೊಡ್ಡಮನಿ ಗದಗ, ದಾಸವಾಣಿಯನ್ನು ಪಂಚಾಕ್ಷರ ಕುಮಾರ ಗಂಗಾವತಿ, ಸುಗಮ ಸಂಗೀತ ಶ್ರೀಮತಿ ಕೆ. ಗಂಗಮ್ಮ ವಿದ್ಯಾನಗರ, ಭರತನಾಟ್ಯವನ್ನು ಕುಮಾರಿ ಕೆ. ವರ್ಷಿತಾ ಹಾಗೂ ಕೆ. ವೈಷ್ಣವಿ ನಡೆಸಿಕೊಟ್ಟರು ಮತ್ತು ಡಾ. ಎಫ್.ಎಂ. ಮುದ್ದಾಬಳ್ಳಿ ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜಾಸಾಬ್ ಮುದ್ದಾಬಳ್ಳಿ, ಪವನ್ ದೇಸಾಯಿ, ಸಂಗೀತ ಶಿಕ್ಷಕರಾದ ಶಿವಕುಮಾರ ಗೆಜ್ಜಿ, ಯುವ ಕಲಾವಿದರಾದ ರಿಜ್ವಾನ್ ಮುದ್ದಾಬಳ್ಳಿ ಸೇರಿ ದಂತೆ ಅನೇಕರಿದ್ದರು.

ಜಾಹೀರಾತು

About Mallikarjun

Check Also

ಅಂಜನ 2023 ಮಹಿಳಾ ವೈದ್ಯರ ಪ್ರಥಮ ಸಮ್ಮೇಳನ

ದಿನಾಂಕ 24 ರಂದು ಅಂಜನ 2023 ಮಹಿಳಾ ವೈದ್ಯರ ಪ್ರಥಮ ಸಮ್ಮೇಳನ ಗಂಗಾವತಿ 22 ಭಾರತೀಯ ವೈದ್ಯಕೀಯ ಸಂಘ ಹಾಗೂ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.