Admissions for various courses of KRMU University have started
ಕೊಪ್ಪಳ ಜುಲೈ 15 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನ ಶೈಕ್ಷಣಿಕ ವರ್ಷ 2023-24ನೇ (ಜುಲೈ ಆವೃತ್ತಿಯ) ಸಾಲಿನ ವಿವಿಧ ಕೋರ್ಸಗಳಿಗೆ ಪ್ರವೇಶಾತಿ ಪ್ರಾರಂಭವಾಗಿವೆ ಎಂದು ಕ.ರಾ.ಮು.ವಿ.ವಿ ಕಲಬುರಗಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.
ಪ್ರಥಮ ಬಿಎ, ಬಿಕಾಂ, ಬಿಎಲ್‌ಐಎಸ್ಸಿ, ಬಿಎಸ್ಸಿ, ಬಿಬಿಎ, ಬಿಸಿಎ, ಬಿ.ಎಸ್.ಡಬ್ಲ್ಯೂ ಹಾಗೂ ಪ್ರಥಮ ಎಂಎ (ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಎಂ.ಕಾಂ., ಎಂ.ಬಿ.ಎ., ಎಂಎಲ್‌ಐಎಸ್ಸಿ, ಎಂಎಸ್ಸಿ ಎಂ.ಎಸ್.ಡಬ್ಲ್ಯೂ, ವಿಷಯಗಳಿಗೆ ತರಗತಿಗಳು ಪ್ರಾರಂಭವಾಗಿವೆ. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನ ಶುಲ್ಕದಲ್ಲಿ ಶೇಕಡಾ 15ರಷ್ಟು ವಿನಾಯಿತಿ ನೀಡಲಾಗಿದ್ದು, ಆಗಸ್ಟ್ 31 ದಂಡರಹಿತ ಪ್ರವೇಶ ಪಡೆಯಲು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರಾದ ಡಾ.ಸಂಗಮೇಶ್ ಅವರನ್ನು ಮೊ.ಸಂ: 9916783555 ಅಥವಾ ಹಾಗೂ ವೈಬ್‌ಸೈಟ್ www.ksoumysuru.ac.in ನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.