Accept sports equally in education: MLA MR Manjunath advises.
ವರದಿ :ಬಂಗಾರಪ್ಪ ಸಿ
ಹನೂರು : ಪ್ರಾಥಮಿಕ ಮಟ್ಟದಲ್ಲಿ ಪ್ರತಿ ಮಕ್ಕಳು ಶಿಕ್ಷಣದ ಜೋತೆಯಲ್ಲಿ ಕ್ರೀಡೆಗೂ ಸಮಾನ ಅವಕಾಸ ನೀಡುವುದರಿಂದ ಮಕ್ಕಳ ಬೌಧಿಕ ಮಟ್ಟ ಹೆಚ್ಚುತ್ತದೆ. ಹಾಗೇಯೆ ಮಕ್ಕಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿಬೇಕು,ನಿಮ್ಮಗಳ ಭಾಗವಹಿಸುವಿಕೆ ತುಂಬಾ ಮುಖ್ಯ ಎಂದು ಶಾಸಕ ಎಂ ಆರ್ ಮಂಜುನಾಥ್ ಹೇಳಿದರು. ಹನೂರು
ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾoಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ ಮಾಡಿದ ಶಾಸಕರು ನಂತರ ಮಾತನಾಡಿ ಚಾಮರಾಜನಗರದಲ್ಲೆ
ಹನೂರು ಶೈಕ್ಷಣಿಕ ವಲಯದಲ್ಲಿ ಗ್ರಾಮೀಣ ಭಾಗದ ಮಕ್ಕಳು ಪಠ್ಯ ಚಟುವಟಿಕೆಯಲ್ಲಿ ಮಾತ್ರವಲ್ಲದೆ ಕ್ರೀಡೆಗಳಲ್ಲೂ ಸಹ ಮುಂದೆ ಇರುವುದು ಈಗಾಗಲೇ ರುಜುವಾತಾಗಿದೆ.ನಮ್ಮ ಕ್ಷೇತ್ರದ ಮಕ್ಕಳು ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು ನಾನು ಶಾಲೆಯ ಓದಿನ ಸಮಯದಲ್ಲಿ ನಿಮ್ಮ ಹಾಗೆ ಎಲ್ಲಾ ರೀತಿಯ ಕ್ರೀಡೆಯಲ್ಲಿಯು ಭಾಗವಹಿಸಿದ್ದೆ ಮತ್ತು ಶಿಕ್ಷಣದಲ್ಲೂ ಸಹ ಮುಂದಿದ್ದೆಎಂದು ತಮ್ಮ ಬಾಲ್ಯದ ನೆನೆಪನ್ನು ಬಿಚ್ಚಿಟ್ಟರು .ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದ ಎಲ್ಲಾ ಶಿಕ್ಷಕರ ನಿಯೋಗದೊಂದಿಗೆ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳಲ್ಲೂ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು .
ನೊಡುಗರ
ಗಮನ ಸೆಳೆದ ಪಥ ಸಂಚಲನ ಹಾಗೂ ಏರೋಬೀಕ್ : ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಪಥ ಸಂಚಲನ ಮಾಡಿದರು . ನೆರದಿದ್ದ ಎಲ್ಲಾ ನೋಡುಗರಿಗೂ ಏರೋಬಿಕ್ ರೋಮಾಂಚನಕಾರಿಯಾಗಿ ಕಣ್ಮನ ಸೇಳೆಯಿತ್ತು ಎಲ್ಲಾರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು .
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಿರೀಶ್, ಚಾಮರಾಜನಗರ ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ವಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ್, ಹನೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಗುರುಸ್ವಾಮಿ, ವಿವೇಕಾನಂದ ಶಾಲೆಯ ಮುಖ್ಯ ಶಿಕ್ಷಕರಾದ ಮಧುಸೂದನ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಆನಂದ್,ಪವಿತ್ರ,ಸೇರಿದಂತೆ,ವಿವಿಧ ಶಾಲೆಯ ಶಿಕ್ಷಕರುಗಳು ಹಾಗೂ ಮಕ್ಕಳು ಹಾಜರಿದ್ದರು