100 day achievement of Congress
ಶ್ಲಾಘನೀಯ : ಜ್ಯೋತಿ
ಕೊಪ್ಪಳ : ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ನಾಯಕರು ಯಾವುದೇ ನಾಚಿಕೆ ಇಲ್ಲದೇ
ಮಾತನಾಡುತ್ತಿರುವದು ವಿಷಾಧನೀಯ, ಕಾಂಗ್ರೆಸ್ ಸರಕಾರದ ನೂರು ದಿನದ
ಸಾಧನೆ ಶ್ಲಾಘನೀಯ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ
ಎಂ. ಗೊಂಡಬಾಳ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು
ಕೇವಲ ೧೦೦ ದಿನದಲ್ಲಿ ಬಡವರ ಬದುಕನ್ನು ಬದಲಿಸುವ ಯೋಜನೆಗಳನ್ನು ಜಾರಿಗೆ
ತಂದಿರುವ ಸದೃಢ ಸರಕಾರ. ಕಾಂಗ್ರೆಸ್ ಸದಾ ಶೋಷಿತರ, ಇಲ್ಲದವರ
ಕಷ್ಟಗಳನ್ನು ನೋಡುತ್ತದೆ ಎಂಬುದು ಸಾಬೀತುಪಡಿಸಿದ ಈ ದಿನ ಪ್ರತಿ ಮನೆಯ
ಯಜಮಾನಿಗೆ ೨೦೦೦ ನಗದು ನೇರ ವರ್ಗಾವಣೆ ಮಾಡುವ ಮೂಲಕ ಮಾತು
ಉಳಿಸಿಕೊಂಡಿದೆ. ಸರಕಾರ ಉಚಿತ ವಿದ್ಯುತ್ ಗೃಹಜ್ಯೋತಿ, ಉಚಿತ ಬಸ್ ನಾರಿಶಕ್ತಿ ಮತ್ತು
ಎಲ್ಲರಿಗೂ ಅನ್ನ ನೀಡುವ ಅನ್ನಭಾಗ್ಯಗಳನ್ನು ಸಮರ್ಥವಾಗಿ ಜಾರಿಗೆ ತಂದಿದೆ,
ಅವುಗಳನ್ನು ಅತ್ಯಂತ ಖುಷಿಯಿಂದ ಜಾರಿಗೆ ತಂದು ದೇಶಕ್ಕೆ ಮಾದರಿಯಗಿದೆ
ಎಂದಿದ್ದಾರೆ. ಯುವನಿಧಿ ಸಹ ಶೀಘ್ರ ಬರಲಿದೆ ಎಂದರು.
ಮೋದಿ ಸರಕಾರ ೯ ವರ್ಷಗಳಲ್ಲಿ ಕೇವಲ ಉಳ್ಳವರ ಸೇವೆ, ಬೆಲೆ ಏರಿಕೆ, ಸುಳ್ಳು
ಭರವಸೆ ಹಾಗೂ ಧರ್ಮ ಒಡೆಯುವ ಕೆಲಸಗಳನ್ನು ಮಾಡಿದೆ, ಇಂಡಿಯಾ ಇಂದು
ಗಟ್ಟಿಯಾಗಿದ್ದು, ದೇಶದಲ್ಲಿ ಬಡವರ ಕೆಲಸ ಮಾಡಲು ಸಮಾನ ಮನಸ್ಕರು
ಒಂದಾಗಿದ್ದಾರೆ, ರಾಜ್ಯದಲ್ಲಿ ಜನರಿಗೆ ಉಚಿತ ಕೊಡುಗೆ ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ
ಎಂದು ಹೇಳುವ ಮೋದಿ ಸರಕಾರ ದೇಶದ ಕೆಲವೇ ಜನರ ಲಕ್ಷ ಲಕ್ಷ ಕೋಟಿ ಮನ್ನಾ
ಮಾಡಿದ್ದಕ್ಕೆ ಪಶ್ಚಾತ್ತಾಪ ಪಡದಿರುವದು ದುರಂತ. ಗ್ಯಾರಂಟಿ ಯೋಜನೆಗಳ ಬಗ್ಗೆ
ಬಿಜೆಪಿ ಮತ್ತು ಪರಿವಾರ ಸುಳ್ಳು ಹೇಳುತ್ತದೆ ಅದಕ್ಕೆ ಜನ ತಲೆ ಕೆಡಿಸಿಕೊಳ್ಳಬಾರದು.
ಈಗ ಚುನಾವಣೆ ಹತ್ತಿರ ಬಂದಿದ್ದು ಗ್ಯಾಸ್ ದರ ಇಳಿಸಿದ್ದಾರೆ, ಇನ್ನೂ ಕೆಲವು ಕೊಡುಗೆ
ಸಿಗಬಹುದು ಆದರೆ ಜನ ಎಚ್ಚೆತ್ತುಕೊಂಡಿದ್ದಾರೆ, ಬಿಜೆಪಿ ಅವರು ಕೇವಲ ಚುನಾವಣೆ
ಶೂರರು ಎಂಬುದು ಗೊತ್ತಾಗಿದೆ, ಅವರ ಈಗಿನ ಯಾವುದೇ ಮಾತುಗಳು
ಭರವಸೆಗಳ ಬಗ್ಗೆ ನಂಬಿಕೆ ಇಲ್ಲವಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ
ಮೋಸ ಮಾಡಿದ ಮೋದಿಶಾರಿಗೆ ಬುದ್ಧಿ ಕಲಿಸುವರು ಎಂದು ತಿಳಿಸಿದ್ದಾರೆ.