Menace of stray cattle:Ka|| Bhardwaj’s road accident due to stray cattle
ಗಂಗಾವತಿ: ನಗರದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವಾಹನಗಳ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಸಿ.ಪಿ.ಐ.ಎಂ.ಎಲ್ ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದರು.
ಮುಂದುವರೆದು ಅವರು ಮಾತನಾಡುತ್ತಾ, ಸೆಪ್ಟೆಂಬರ್-೧೧ ರಂದು ಮದ್ಯಾಹ್ನ ೧ ಗಂಟೆಯ ಸುಮಾರಿನಲ್ಲಿ ಹಿರಿಯ ಹೋರಾಟಗಾರರಾದ ಭಾರದ್ವಾಜ್‌ರವರು ಗಂಗಾವತಿಯಿAದ ಕೊಪ್ಪಳ ರಸ್ತೆಯಲ್ಲಿರುವ ಸೂರಿ ಬಾಬು ಲೇಔಟ್‌ನಲ್ಲಿರುವ ತಮ್ಮ ಮನೆಗೆ ಟಿವಿಎಸ್ ಸ್ಕೂಟಿ ವಾಹನದಲ್ಲಿ ಹೊಗುತ್ತಿರುವ ಸಮಯದಲ್ಲಿ ಪಾಡಗುತ್ತಿ ಗಾರ್ಡನ್ ಪಕ್ಕದಲ್ಲಿ ಇರುವ ವಿಶಾಲ ಮಾರ್ಟ್ ಎದುರಿಗೆ ಒಂದು ಎತ್ತು ಓಡಿ ಬಂದು ಗುದ್ದಿದ ಪರಿಣಾಮ ಭಾರದ್ವಾಜ್‌ರವರು ನೆಲಕ್ಕೆ ಬಿದ್ದಿರುವ ಘಟನೆ ನಡೆದಿದೆ. ಅವರ ಕೈ-ಕಾಲು, ಹಣೆಗೆ ಪೆಟ್ಟಾಗಿದೆ, ಕಾಲಿನ ಮೂಳೆಗೆ ಪೆಟ್ಟಾಗಿದೆ. ಬೀಡಾಡಿ ದನಕರುಗಳು, ಆಕಳು ದಿನ ನಿತ್ಯ ರಸ್ತೆಯಲ್ಲಿ ಓಡಾಡುತ್ತಾ ವಾಹನ ಸವಾರರಿಗೆ, ವಯೋವೃದ್ಧರಿಗೆ ತೊಂದರೆಯುAಟು ಮಾಡುತ್ತಿದ್ದರೂ ನಗರಸಭೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ.
ಗಂಗಾವತಿಯ ಪ್ರಮುಖ ರಸ್ತೆ, ಬೀದಿ ಬೀದಿಗಳಲ್ಲಿ ಓಡಾಡುತ್ತಿರುವ ದನಕರುಗಳನ್ನು ಸಂಬAಧಪಟ್ಟವರಿಗೆ ಒಪ್ಪಿಸಬೇಕು, ಇಲ್ಲವೇ ಗೋಶಾಲೆಗಳಿಗೆ ಸಾಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಪಕ್ಷದಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾ|| ಸಣ್ಣ ಹನುಮಂತಪ್ಪ ಹುಲಿಹೈದರ್, ಕಾ|| ರಮೇಶ್, ಕಾ|| ಬಾಬರ್, ಕಾ|| ಅಬ್ದುಲ್, ಕಾ|| ಚಾಂದ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.