Breaking News

ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸೌಲಭ್ಯಕ್ಕೆ ಜೀವನ ಮುಡಿಪಿಟ್ಟರು,

Devoted his life to the field of education and facility,

ಜಾಹೀರಾತು


ಶರೀರ ಅನಿತ್ಯ, ಸಂಪತ್ತು ನಶ್ವರ, ಮರಣ ಮಾತ್ರ ನಿಶ್ಚಿತ, ಇವುಗಳ ಮಧ್ಯದಲ್ಲಿ ಗುರಿಯನ್ನು ಗುರುತಿಸುವುದು ಬದುಕು ಜೀವನದ ಅನೇಕ ಸಂಘರ್ಷಗಳಲ್ಲಿ ಬೆಚ್ಚದೆ ಬೆದರದೆ ಧೈರ್ಯದಿಂದ ತಮ್ಮ ಕರ್ತವ್ಯ ಕರ್ಮಗಳನ್ನು ಸಾಧಿಸಿದ ವ್ಯಕ್ತಿಗಳು ಎಂದಿದಿಗೂ ಬಾಳಿ ಬೆಳಗುತ್ತಾರೆ. ಅಂಥಹವರ ಶರೀರ ನಿತ್ಯವೆನಿಸುತ್ತದೆ. ಅವರು ಸಂಪಾದಿಸಿದ ಸಂಪತ್ತು ಸಾರ್ಥಕವಾಗುತ್ತದೆ. ಶರೀರ ಮೃತವಾದರೂ ಆತ್ಮ ನಿತ್ಯ ನಿತ್ಯ ಕೀರ್ತಿಶಾಲಿ ಎನಿಸುತ್ತದೆ. ಚರಾಚರ ಪ್ರಾಣಿಗಳಲ್ಲಿ ಮಾನವ ಜೀವನ ಮಿಗಿಲಾದುದು. ಜ್ಞಾನದಿಂದಲೇ ಸಕಲ ಜೀವ ಜಂತುಗಳಲ್ಲಿ ಮಾನವನ ಸ್ಥಾನ ಶ್ರೇಷ್ಠವೆನಿಸಿದೆ. ಶಿಕ್ಷಣ ಮಾನವನ ಬದುಕನ್ನು ಸಂಸ್ಕಾರಗೊಳಿಸುತ್ತದೆ. “ಯಾ ವಿದ್ಯಾ ಸಾವಿ ಮುಕ್ತಯೇ’ ವಿದ್ಯೆಯು ಕೇವಲ ಜೀವನೋಪಾಯಕ್ಕಾಗದೆ ಇತರರನ್ನು ಮೇಲೆತ್ತುವ ಸಹಾಯ ಸಹಕಾರ ನೀಡಿ ಸಮಸ್ಯೆಗಳಿಂದ ಮುಕ್ತವಾಗಿಸುವ ವಿದ್ಯೆ ಶ್ರೇಷ್ಟವಾದುದು. ಇತರರನ್ನು ವಂಚಿಸುವ ವಿದ್ಯೆ ನಿಜ ವಿದ್ಯೆಯಲ್ಲ, ಗಿಡ ಮರ ಪಶು ಪಕ್ಷಿಗಳು ಸಹ ಪರೋಪಕಾರ ಮಾಡುವಾಗ ಮಾನವನು ಪರೋಪಕಾರಿಯಾಗಬೇಕು. ಈ ದಿಶೆಯಲ್ಲಿ ಶ್ರೀ ಕಾಶಯ್ಯ ಸ್ವಾಮಿಗಳು ಗವಿಮಠ ಇವರು ಪುಟ್ಟ ಗ್ರಾಮವಾದ ಕೊಪ್ಪಳ ತಾಲೂಕು ಹೊಸ ಬಂಡಿಹರ್ಲಾಪುರ ಗ್ರಾಮದಲ್ಲಿ ಶಿಕ್ಷಣದ ಮೂಲಕ ಸಮಾಜವನ್ನು ಬೆಳಸಬೇಕು, ಸಂಸ್ಕಾರ ಪಡೆಯಬೇಕು, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದೊಂದಿಗೆ ದಿಟ್ಟ ಹೆಜ್ಜೆಯನ್ನು ಇಡುವುದರ ಮೂಲಕ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಮಹಾ ವಿದ್ಯಾಲಯ,ಹಾಸ್ಟಲ್ ವ್ಯವಸ್ಥೆ, ಮತ್ತು ಸಹಕಾರಿ ಬ್ಯಾಂಕ್,ವ್ಯವಸಾಯ ಬ್ಯಾಂಕ್,ಸಾರ್ವಜನಿಕ ಗ್ರಂಥಲಯಗಳನ್ನು ಅಸ್ತಿತ್ವಕ್ಕೆ ತರಲು ಇವರ ಶ್ರಮ ಬಹಳ ಮಹತ್ವದಾಗಿದೆ. ಶಿಕ್ಷಣ ಸಂಸ್ಥೆಗಳ ಆರಂಭದಲ್ಲಿ ಸ್ವತಹಃ ವಿದ್ಯಾರ್ಥಿಗಳ ಶುಲ್ಕವನ್ನು ಕಟ್ಟಿ ಜ್ಞಾನಾರ್ಜನೆಗೆ ಅವಕಾಶ ನೀಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಹಾಕಿದವರು. ಇವರ ಸೇವೆ ಅತ್ಯಂತ ಶ್ಲಾಘನೀಯವಾದುದು. ಇಂದಿಗೂ ಸರಳ ಜೀವನವನ್ನು ನಡೆಸುವುದರ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂಧಿಸಿ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಾರೆ. ಮುಂದಿನ ದಿನಗಳಲ್ಲಿ ಈ ಪುಟ್ಟ ಗ್ರಾಮದಲ್ಲಿ ತಂತ್ರಜ್ಞಾನ ಶಿಕ್ಷಣವನ್ನು ನೀಡುವ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ತರುವ ಕನಸನ್ನು ಹೊಂದಿದ್ದಾರೆ. ಅವರ ಕನಸು ನನಸಾಗಲೆಂದು ಆಶಿಸುತ್ತೆನೆ.

ಒಂದು ಚಿಕ್ಕ ಗ್ರಾಮ ಬಂಡಿ ಹರ್ಲಾಪುರದಲ್ಲಿ ಯಾರಿಗೂ ಕಾಣದ ಹಾಗೆ ಶಿಕ್ಷಣ ರಂಗದಲ್ಲಿ ಸೌಲಭ್ಯಕ್ಕೆ ತಮ್ಮ ಜೀವನವೇ ಮುಡಿಪಿಟ್ಟರು,ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಮತ್ತು ಬಾಲ್ಯ ವಿವಾಹ ತಡೆಯಲು, ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಒಂದೇ ಒಂದು ಮಾರ್ಗ ಎಂದು ತಿಳಿದು ಅದುವೇ ಶಿಕ್ಷಣ ಎಂದರು.

ಕಾಶಯ್ಯಸ್ವಾಮಿ ಗವಿಮಠ ಅಜ್ಜನವರು ಬಂಡಿಹರ್ಲಾಪುರ ಗ್ರಾಮಕ್ಕೆ ಅವರ ಕೊಡುಗೆ ಅನನ್ಯವಾದದು,ದೇವರು ಇನ್ನೂ ಹೆಚ್ಚು ಆಯುಷ್ಯ ಕೊಟ್ಟು, ಸೇವೆ ಮಾಡಲು ಶಕ್ತಿ ಕೊಡಲಿ.

ಹೋರಾಟದಲ್ಲೇ ಬದುಕು ಸವೆಸಿದ ಬಂಡಿಹರ್ಲಾಪುರದ ಕಾಶಯ್ಯಸ್ವಾಮಿ

ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸೌಲಭ್ಯಕ್ಕೆ ಜೀವನ ಮುಡಿಪಿಟ್ಟರು

ಮುನಿರಾಬಾದ್ ಸಮೀಪದ ಹೊಸಬಂಡಿಹರ್ಲಾಪುರದ ಕಾಶಯ್ಯಸ್ವಾಮಿ ತಮ್ಮ ಶಿಕ್ಷಣ ಮತ್ತು ರೈತರಿಗೆ ಹೋರಾಟದ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಜನಾನುರಾಗಿಯಾಗಿದವರು. ಒಂದು ಘಟನೆ: ಅದೊಂದು ದಿನ ವಿಧಾನ ಪರಿಷತ್ ಸಭಾಧ್ಯಕ್ಷ ಡಿ.ಎಚ್‌. ಶಂಕರಮೂರ್ತಿ ಹೊಸಬಂಡಿಹ ರ್ಲಾಪುರ ಗ್ರಾಮಕ್ಕೆ ಸರ್ಕಾರಿ ಪದವಿ ಕಾಲೇಜು ನೂತನ ಕಟ್ಟಡ ಉದ್ಘಾಟಿಸಲು ಬಂದಿದ್ದರು. ಕಾರ್ಯಕ್ರಮದಲ್ಲಿ ಶಂಕರಮೂರ್ತಿ ಅವರು ವ್ಯಕ್ತಿಯೊಬ್ಬರಿ ಗಾಗಿ ವೇದಿಕೆಯಲ್ಲಿ ಹುಡುಕಿದರು. ಅವರು ಕಾಣದಾದಾಗ ಆ ಕಾಶಯ್ಯ ಸಾಮಿ ಎಲ್ಲಿದ್ದಾರೆ ಕರೀರಿ’ ಎಂದರು. ಆಗ ಮಧ್ಯದಲ್ಲಿ ಕುಳಿತಿದ್ದ ಸ್ವಾಮಿಯನ್ನು ರು ವೇದಿಕೆಯಲ್ಲಿ ಕುಳ್ಳಿರಿಸಿ ನನ್ನೂ ಯಾಚಿಸಿದರು. ನೆಗೆ ಕಾರಣವೂ ಇತ್ತು, ಏಕೆಂದರೆ ಆ ಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯಿಂದ ಹಿಡಿದು, ಪಿಯು, ಪದವಿ ಕಾಲೇಜು ಮಂಜೂರು ಮತ್ತು ಸ್ವಂತ ಕಟ್ಟಡ ನಿರ್ಮಾಣ, ಹಾಸ್ಟೆಲ್, ಆಸ್ಪತ್ರೆ ಮತ್ತು ರೈತರ ಸಹಕಾರ ಸಂಘ ರಚನೆಯಲ್ಲಿ ಕೂಡ ಆಸಕ್ತಿವಹಿಸಿ ಹೋರಾಟ ನಡೆಸಿದ್ದ ಏಕೈಕ ವ್ಯಕ್ತಿ ಕಾಶಯ್ಯಸ್ವಾಮಿ.

ಸುಮಾರು 70 ವರ್ಷ ವಯಸ್ಸಿನ ಕಾಶಯ್ಯ ವೀರಯ್ಯ ಗವಿಮಠ, ತಮ್ಮ ಹೋರಾಟದ ಹಿನ್ನೆಲೆಯನ್ನು ವಿವರಿಸಿದ್ದು ಹೀಗೆ, ಪಣತೊಟ್ಟರು. ಆಗ ಹೆಸ್ಕೂಲು ಆರಂಭಿಸಲು ಶಿಕ್ಷಣ ಇಲಾಖೆಗೆ 1 ಲಕ್ಷ ವಂತಿಗೆ
ಕರಾರಿತ್ತು. ಗ್ರಾಮದ
ಫಕೀರಪ್ಪ, ಸುಬ್ರಮಣಿ ಶೇಟ್ಟಿ, ವೆಂಕಟಯ್ಯ ಮತ್ತು ಗ್ರಾಮಸ್ಥರು ಕಾಡಿ ಬೇಡಿ ಪಾವತಿಸಿದರು.
ಅವರ ಕನಸಿಗೆ ಕೊನೆ ಇರಲಿಲ್ಲ. 10ನೇ ತರಗತಿ ನಂತರ ಪಿಯು ಕಾಲೇಜು, ತದ ನಂತರ ಪದವಿ ಕಾಲೇಜು, ಹಾಸ್ಟೆಲ್ ಹೀಗೇ ಸೌಲಭ್ಯಗಳನ್ನು ಹೊತ್ತು ತಂದರು. ಇವೆಲ್ಲ ಪ್ರಾರಂಭಕ್ಕೆ ಅನುಮತಿ ಪಡೆಯಲು ಬೆಂಗಳೂರಿನ ಶಿಕ್ಷಣ ಇಲಾಖೆ ಕಚೇರಿಗೆ ಏಕಾಂಗಿಯಾಗಿ ಹೋಗಿ ಕೆಲಸವಾಗು ವವರೆಗೆ ಅಲ್ಲೇ ತಂಗಿದ್ದು, ಕೆಲಸ ಮಾಡಿಸಿಕೊಂಡು

ನಮ್ಮ ಊರು ನಮ್ಮ ಹೆಮ್ಮೆ

ಇದರ ಪರಿಣಾಮ ತಾತ್ಕಾಲಿಕ ಕಟ್ಟಡದಲ್ಲಿ ಹೈಸ್ಕೂಲು ಪಾರಂಭವಾಯಿತು. ಎಂದು ತಮ್ಮ ನೆನಪುಗಳನ್ನು ಬಿಚ್ಚಿಡುತ್ತಾರೆ.
ಗ್ರಾಮದಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭಿಸುವ ಕನಸೂ ಕೂಡ ಇತ್ತು, ಅವರಿಂದ ಪ್ರಾರಂಭಗೊಂಡು .ಅವರ ಜೀವನದ ಕನಸು ಈಡೇರಿಸುವಲ್ಲಿ ಇದು ಕೂಡ ಒಂದು ಸಾಕ್ಷಿಯಾಗಿ ಉಳಿತು.

ರೈತ ಪರ ಹೋರಾಟ: ಇಲ್ಲಿನ ಸಾಲಾರ್ ಸಂಗ್ ಸಕ್ಕರೆ ಕಾರ್ಖಾನೆಗೆ ಅಂದಿನ ಹೈದರಾಬಾದ್ ನವಾಜ ನೀಡಿದ್ದ ಜಮೀನನ್ನು ಇಂದಿರಾಗಾಂಧಿ ಕಾಲದಲ್ಲಿ ಉಳುವವನೇ ಒಡೆಯ ಕಾಯ್ದೆಯ ಅಡಿ ರೈತರಿಗೆ ದೊರಕಿಸಿಕೊಡಲು ‘ಬಡವ ಭೂರಹಿತರ ಸಂಘ’ ವನ್ನು ಹುಟ್ಟುಹಾಕಿ ‘ಹೋರಾಟ ನಡೆಸಿದವರು. ವ್ಯವಸಾಯ ಸೇವಾ ಸಹಕಾರ ಸಂಘ ಸ್ಥಾಪಿಸಿದವರು, ರೂಪಾಯಿಗೂ ವಹಿವಾಟು ನಡೆಸಿದ್ದು, ತುಂಗಭದ್ರಾ ಕಾಡಾ ವತಿಯಿಂದ ದೆಹಲಿಗೆ ಹೋದ ನಿಯೋಗದಲ್ಲಿ ಪಾಲ್ಗೊಂಡು ರಾಜೇಂದ್ರ ಸಿಂಗ್, ಮೇಧಾ ಪಾಟ್ಕರ್ ಜತೆ ರೈತಪರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸ್ವಾಮಿ ಯವರ ಮಗಳು ಗೌರಮ್ಮ ಎಂಎ (ಇಂಗ್ಲಿಷ್) ಪದವಿ ಮುಗಿಸಿಕೊಂಡು ಇಂದು ತಮ್ಮ ಸೇವೆಯನ್ನು ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಬಡಜನರಿಗೆ ಅನುಕೂಲ ವಾಗಿದ್ದು, ನನಗೆ ಅತ್ಮತೃಪ್ತಿ ನೀಡಿದೆ. ಇದಕ್ಕಿಂತ ಮಿಗಿಲಾದ ಪ್ರಶಸ್ತಿಯಾವುದಿದೆ ಎನ್ನುವ ಕಾಶಯ್ಯಸ್ವಾಮಿ ಉಳಿದವರಿಗೆ ಮಾರ್ಗದರ್ಶನ ಮಾಡುತ್ತಾರೆ.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.