Breaking News

ದಲಿತನಿಗೆ ಹೇರ್ ಕಟ್ ಮಾಡಲು ನಿರಾಕರಿಸಿದ ಇರಿದು ಕೊಂದ ಕ್ಷೌರಿಕ,,,,

Barber stabbed to death for refusing to cut Dalit’s hair

ಜಾಹೀರಾತು

ಕೊಪ್ಪಳ : ದಲಿತನೆಂಬ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಿಸಿದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಶನಿವಾರದಂದು ನಡೆದಿದೆ,,,

ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ (23) ಮೃತ ಯುವಕ.

ಇದೇ ಗ್ರಾಮದ ಮುದಕಪ್ಪ ಅಂದಪ್ಪ ಹಡಪದ ಹತ್ಯೆ ಮಾಡಿದ ಆರೋಪಿ.

ಯಮನೂರಪ್ಪ ಶನಿವಾರದಂದು ಬೆಳಿಗ್ಗೆ ಮುದಕಪ್ಪನ ಕ್ಷೌರದಂಗಡಿಗೆ ಕಟಿಂಗ್ ಮಾಡಿಸಲು ಹೋದ ವೇಳೆ ನೀನು ಹರಿಜನ ನಿನಗೆ ಕ್ಷೌರ ಮಾಡುವುದಿಲ್ಲಾ ಎಂದು ಮುದಕಪ್ಪ ಹೇಳಿದ್ದಾನೆ.

ಇದರಿಂದ ಪರಸ್ಪರ ಇಬ್ಬರೂ ಮಾತಿಗೆ ಮಾತು ಬೆಳೆಸಿದ್ದು ಮುದಕಪ್ಪ ಅಂಗಡಿಯಲ್ಲಿರುವ ಕತ್ತರಿಯಿಂದ ಯಮನೂರಪ್ಪನ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ.

ಈ ವೇಳೆ ತೀವ್ರ ರಕ್ತ ಸ್ರಾವದಿಂದ ಯುವಕ ಸ್ಥಳದಲ್ಲಯೇ ಮೃತ ಪಟ್ಟಿದ್ದಾನೆ.

ಈ ಕುರಿತು ಮೃತ ಯುವಕನ ಸಹೋದರ ಹನುಮಂತಪ್ಪ ಯಲಬುರ್ಗಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮುದುಕಪ್ಪನನ್ನು ಪೋಲಿಸರು ಬಂದಿಸಿದ್ದಾರೆ. ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ರಾಮ ಎಲ್. ಅರಸಿದ್ದಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರೀಶಿಲಿಸಿದ್ದಾರೆ. ಸ್ಥಳದಲ್ಲಿ ಉದ್ವೀಗ್ನ ಪರಸ್ಥಿತಿ ಕಂಡು ಬಂದಿದೆ.

ವರದಿ:ಪಂಚಯ್ಯ ಹಿರೆಮಠ

About Mallikarjun

Check Also

ಶಾಸಕ ಕೆ ಷಡಕ್ಷರಿ ಅವರಿಂದ ಕಾರ್ಮಿಕರಿಗೆ ಕಿಟ್ ವಿತರಣೆ

MLA K Shadakshari distributes kits to workers ತಿಪಟೂರು.ಇಂದು ಕಾರ್ಮಿಕ ಇಲಾಖೆ, ಹಾಗೂ ದೇವರಾಜು ಅರಸು ನಿಗಮದ ವತಿಯಿಂದ …

Leave a Reply

Your email address will not be published. Required fields are marked *