Breaking News

ವಿಧಾನ ಪರಿಷತ್ತಿನ ಮಾನ್ಯ ಸದಸ್ಯ ರವಿಕುಮಾರ್ ರವರು ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರೋಷಿನಿ ಗೌಡಿವರಿಂದ ಖಂಡನೆ

ವಿಧಾನ ಪರಿಷತ್ತಿನ ಮಾನ್ಯ ಸದಸ್ಯ ರವಿಕುಮಾರ್ ರವರು         ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರ ವಿರುದ್ಧ   ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರೋಷಿನಿ ಗೌಡ ಖಂಡಿಸಿದ್ದಾರೆ.


     ವಿಧಾನ ಪರಿಷತ್ ಸದಸ್ಯರಾಗಿರುವ ರವಿಕುಮಾರ್ ಎನ್ ರವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ  ಶಾಲಿನಿ ರಜನೀಶ್ ಐ.ಎ.ಎಸ್, ಕರ್ನಾಟಕ ಸರ್ಕಾರ ಇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ವಿವಿಧ ವಾರ್ತಾ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಬಿತ್ತರಿಸುವುದನ್ನು ಗಮನಿಸಲಾಗಿದೆ. ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಾಗಿ ಮುಖ್ಯ ಕಾರ್ಯದರ್ಶಿ ಅವರು ಜವಾಬ್ದಾರಿಯುತ ಮತ್ತು ಗೌರಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯ ಸಚಿವ ಸಂಪುಟಕ್ಕೆ ಪದನಿಮಿತ್ತ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ಹಾಗೆಯೇ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೂ ಮುಖ್ಯಸ್ಥರಾಗಿರುತ್ತಾರೆ.  ಶಾಲಿನಿ ರಜನೀಶ್ ರವರು ಒಬ್ಬ ಘನತವೆತ್ತ ಮಹಿಳೆಯಾಗಿ ಎಲ್ಲ ಮಹಿಳೆಯರಿಗೆ ಆದರ್ಶ ಪ್ರಾಯವಾಗಿರುತ್ತಾರೆ.
 ಸರ್ಕಾರದ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯನ್ನು ರವರ ಹುದ್ದೆಯನ್ನು ಗೌರವಿಸದೆ ಮಹಿಳಾ ಅಧಿಕಾರಿಯನ್ನು ವೈಯಕ್ತಿಕವಾಗಿ ಅವಹೇಳನಕಾರಿ ಮಾತುಗಳಿಂದ ಮಾನ್ಯ ರವಿಕುಮಾರ್ ಎನ್ ರವರು ನಿಂದಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದು ಒಬ್ಬ ಪ್ರಜ್ಞಾವಂತ ಜನಪ್ರತಿನಿಧಿಗೆ ಶೋಭಿಸುವಂತಹ  ಕೆಲಸವಾಗಿರುವುದಿಲ್ಲ. ಸರ್ಕಾರದ ಪರವಾಗಿ ಮತ್ತು ರಾಜ್ಯದ ಸಾರ್ವಜನಿಕ ಹಿತದೃಷ್ಠಿಯಿಂದ ಶ್ರಮಿಸುತ್ತಿರುವ ಒಬ್ಬ ಮಹಿಳಾ ಅಧಿಕಾರಿಯ ಹೆಸರಿಗೆ ಕಳಂಕ ತರುವ ಮತ್ತು ಮಹಿಳೆಯರ ಆತ್ಮಸ್ಥೆöÊರ್ಯ ಕುಗ್ಗಿಸುವ ಹೇಳಿಕೆಗಳು ಖಂಡನೀಯ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಾಡಿರುವ ಈ ರೀತಿಯ ಅವಮಾನ ಸಮಸ್ತ ಸರಕಾರಿ ನೌಕರರಿಗೆ ಹಾಗೂ ಸಮಸ್ತ ಮಹಿಳಾ ಸಮಾಜಕ್ಕೆ ಆಗಿರುವ ಅವಮಾನ ಎಂದು ಸಚಿವಾಲಯ ನೌಕರರ ಸಂಘವು ಭಾವಿಸಿ, ಮಾನ್ಯ ಸಿಎನ್ ರವಿಕುಮಾರ್ ಅವರ ಈ ಕೃತ್ಯವನ್ನು ಖಂಡಿಸುತ್ತದೆ. ಮಾನ್ಯ ರವಿಕುಮಾರ್ ಎನ್ ರವರು ಕೂಡಲೇ ಈ ಕುರಿತು ಮಾನ್ಯ ಮುಖ್ಯ ಕಾರ್ಯದರ್ಶಿಯವರಲ್ಲಿ ಕ್ಷಮೆ ಯಾಚಿಸುವಂತೆ ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘವು  ಆಗ್ರಹಿಸುತ್ತದೆ.

ಇನ್ನು ಮುಂದೆ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ಯಾವುದೇ ಜನ ಪ್ರತಿನಿಧಿಗಳು ಅಸಂವಿಧಾನಿಕ ಪದಗಳಿಂದ/ ಅವಹೇಳನಕಾರಿಯಾಗಿ ಮಾತನಾಡದಂತೆ ಸರ್ಕಾರದಲ್ಲಿ ನಿಯಮಗಳನ್ನು ರೂಪಿಸಬೇಕಾಗಿದೆ ಮತ್ತು ಈ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಸರ್ಕಾರಕ್ಕೆ ಬೇಡಿಕೆಯನ್ನು ಮಂಡಿಸುತ್ತಾ  ಈ ಕೃತ್ಯವನ್ನು ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರರ ಸಂಘ ಉಗ್ರವಾಗಿ ಖಂಡಿಸುತ್ತದೆ. ಮತ್ತು ಪ್ರತಿರೋಧ ವ್ಯಕ್ತಪಡಿಸುತ್ತದೆ.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.