Breaking News

ತೋಟ್ಲೂರಿನ ಸರಕಾರಿ ಶಾಲೆಯಲ್ಲಿಯಶಸ್ವಿಯಾಗಿದ್ದ ಚಂದ್ರಯಾನ-3 ಉಡಾವಣೆಸ್ಮರಣಾರ್ಥವಾಗಿ ರಾಷ್ಟ್ರೀಯ ಬಾಹ್ಯಾಕಾಶದಿನಆಚರಣೆ

Celebration of National Space Day to commemorate the successful launch of Chandrayaan-3 in Govt School, Thotlur.

ಜಾಹೀರಾತು
ಜಾಹೀರಾತು


ಗುರುಮಠಕಲ್ : ಯಲ್ಹೇರಿ ಕ್ಲಸ್ಟರಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೋಟ್ಲೂರಿನಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನದ ಪ್ರಯುಕ್ತ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳಿಂದ ರಾಕೆಟ್ ತಯಾರಿಸಿ ಉಡಾವಣೆ ಮಾಡಿ ಯಶಸ್ವಿಯಾಗಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಣೆಮಾಡಲಾಯಿತು.

ಈ ವೇಳೆ ಶಿಕ್ಷಕಿ ಶ್ರೀಮತಿ ಶರೀಫಾ ಬೇಗಂ ಮಾತನಾಡಿ ” ಇಂದು ಮೊದಲ ವರ್ಷದ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ. ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಸ್ಮರಣಾರ್ಥವಾಗಿ ಆಗಸ್ಟ್ 23ರಂದು ಪ್ರತಿವರ್ಷ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ “

ಶಿಕ್ಷಕರಾದ ರಾಮುಲು ಮಾತನಾಡಿ ” ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿಯ ಬಿಂದುವಿನಲ್ಲಿ ಯಶಸ್ವಿಯಾಗಿ ಇಳಿಯಿತು, ಚಂದ್ರನ ಮೇಲೆ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಭಾರತವು ಪಾತ್ರವಾಯಿತು “

ಶಿಕ್ಷರಾದ ಆಸಿಂ ಜುಬೇರ್ ಮಾತನಾಡಿ ” ನಮ್ಮ ಯುವ ಪೀಳಿಗೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಲು, ನಮ್ಮ ಚಂದ್ರಯಾನ -3 ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ದಿನವಾದ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರ ಅದೇಶಿದ ಪ್ರಯುಕ್ತ ಇಂದು ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ರಾಕೇಟ್ ತಯಾರಿಸುವ ಮೂಲಕ ಆಚರಣೆ ಮಾಡಲಾಗುತಿದೆ “

ಮುಖ್ಯ ಶಿಕ್ಷಕ ಸೂರ್ಯಕಾಂತ್ ಮಾತನಾಡಿ ” ಚಂದ್ರಯಾನ 3 ಯೋಜನೆಯ ವಿಕ್ರಂ ಲ್ಯಾಂಡಾರ್ ಯಶಸ್ವಿನ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು”

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಸೂರ್ಯಕಾಂತ್, ಶಿಕ್ಷಕರು ಶರೀಫಾ ಬೇಗಂ, ಆಸಿಂ ಜುಬೇರೆ, ರಾಮುಲು ಶಾಲೆಯ ಮುದ್ದು ಮಕ್ಕಳು, SDMC ಸದಸ್ಯರು, ಗ್ರಾಮಸ್ಥರು, ಉಪಸ್ಥಿತರಿದ್ದರು..

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.