Breaking News

ಸೇಂಟ್ ಪಾಲ್ಸ್ ಕಾಲೇಜಿನಲ್ಲಿಇಂಡಿಯನ್ ಕಮ್ಯೂನಿಕೇಶನ್ ಕಾಂಗ್ರೆಸ್‌ನ ತೃತೀಯ ಸಂಸ್ಥಾಪನಾದಿನಾಚರಣೆ

Third Foundation Day of Indian Communication Congress at St. Paul’s College

ಜಾಹೀರಾತು
ಜಾಹೀರಾತು

ಬೆಂಗಳೂರು. ಫೆ.04: ಇಂಡಿಯನ್ ಕಮ್ಯೂನಿಕೇಶನ್ ಕಾಂಗ್ರೆಸ್ (ಐಸಿಸಿ) ಇದರ ತೃತೀಯ ಸಂಸ್ಥಾಪನಾ ದಿನಾಚರಣೆಯನ್ನು ಮಂಗಳವಾರ (ಫೆ.4) ಸೇಂಟ್ ಪಾಲ್ಸ್ ಕಾಲೇಜಿನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಂಡಿಯನ್ ಕಮ್ಯೂನಿಕೇಶನ್ ಕಾಂಗ್ರೆಸ್‌ನ ಕಾರ್ಯನಿರ್ವಹಣಾ ಅಧ್ಯಕ್ಷ ಹಾಗೂ ಕೋಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಮತ್ತು ಮ್ಯಾಸಚೂಸೆಟ್ಸ್‌ನ ಬ್ರಿಡ್ಜ್‌ವಾಟರ್ ಸ್ಟೇಟ್ ವಿಶ್ವವಿದ್ಯಾಲಯದ ಜಿಯೋಗ್ರಾಫಿಕ್ಸ್ ಲ್ಯಾಬ್ ಸಹನಿರ್ದೇಶಕ ಮತ್ತು ಗಣಿತಶಾಸ್ತ್ರ ಪ್ರಾಧ್ಯಾಪಕಿ ಡಾ. ಉಮಾ ಶಾಮಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸೇಂಟ್ ಪಾಲ್ಸ್ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಥಾಮಸ್ ಎಂ.ಜೆ. ಪ್ರತಿಷ್ಠಿತ ‘ಭಾರತೀಯ ಸಂವಹನ ಕಾಂಗ್ರೆಸ್‌ನ ಮೂರನೇ ಸಂಸ್ಥಾಪನಾ ದಿನ’ವನ್ನು ಆಯೋಜಿಸಲು ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅವರು ಭಾರತದಲ್ಲಿ ಮಾಧ್ಯಮ ಶಿಕ್ಷಣದ ಮಹತ್ವವನ್ನು ವೀಕ್ಷಿಸುವುದರ ಜೊತೆಗೆ ಸೇಂಟ್ ಪಾಲ್ಸ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರ್ವಹಿಸಿರುವ ಪಾತ್ರವನ್ನು ವಿವರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಇಂಗ್ಲಿಷ್‌ ಉಚ್ಚಾರಣೆಯ ಕುರಿತು ಪ್ರೊ. ಬಿ.ಕೆ. ರವಿ ಮಾತನಾಡಿ, “ದಕ್ಷಿಣ ಭಾರತದವರು ಅತ್ಯುತ್ತಮ ಇಂಗ್ಲಿಷ್‌ ಉಚ್ಚಾರ ಹೊಂದಿದ್ದು, ಅಮೆರಿಕಾ ಹಾಗೂ ಬ್ರಿಟನ್‌ನ ನಾಗರಿಕರೊಂದಿಗೆ ನೇರವಾಗಿ ಸಂವಹಿಸಲು ಶಕ್ತರಾಗಿದ್ದಾರೆ” ಎಂದರು. ಇದೇ ವೇಳೆ ಸಕಾರಾತ್ಮಕ ಬದಲಾವಣೆ ಮತ್ತು ಸಾಮಾಜಿಕ ಅಡಚಣೆ ಎರಡನ್ನೂ ಸೃಷ್ಟಿಸುವ ಮಾಧ್ಯಮದ ಸಾಮರ್ಥ್ಯವನ್ನು ಅವರು ಎತ್ತಿ ತೋರಿಸಿದರು.

ಡಾ. ಉಮಾ ಶಾಮಾ ತಮ್ಮ ಭಾಷಣದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಸಕಾಲಿಕ ಬಳಕೆಯ ಕುರಿತು ಚಿಂತನೆ ವ್ಯಕ್ತಪಡಿಸಿದರು. “ಎಐ ಮೂಲಕ ಕಳುಹಿಸುವ ಸಂದೇಶವು ಯಶಸ್ವಿಯಾಗಿ ತಲುಪುತ್ತಿದೆಯೇ? ಇಲ್ಲದಿದ್ದರೆ, ನಾವು ಸಂವಹನವು ಪರಿಣಾಮಕಾರಿಯಾಗಿದೆ ಎಂದು ಹೇಗೆ ಹೇಳಬಹುದು?” ಎಂಬ ಪ್ರಶ್ನೆಯನ್ನು ಅವರು ಯುವಕರ ಮುಂದೆ ಇಟ್ಟರು. ಎಐ ಕ್ಷೇತ್ರದಲ್ಲಿ ತಮ್ಮ ಸಹಾಯವನ್ನು ನೀಡಲು ಯುವಕರು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಮುಖ್ಯಪೋಷಕರಾಗಿ ಸೇಂಟ್ ಪಾಲ್ಸ್ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಡಾ. ಥಾಮಸ್ ಎಂ.ಜೆ. ಮತ್ತು ಉಪಪ್ರಾಂಶುಪಾಲರಾದ ಫಾದರ್ ಡಾ. ಶೈಜು ಜೋಸೆಫ್ ಇದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಡಾ. ಪ್ರಶಾಂತ್ ವೇಣುಗೋಪಾಲ್, ಸಹಾಯಕ ಪ್ರಾಧ್ಯಾಪಕಿ ಅನನ್ಯ ಎನ್‌.ಕೆ.ರವರು ಈ ಕಾರ್ಯಕ್ರಮವನ್ನು ಸಂಯೋಜಿಸಿದರು.

ಕಾರ್ಯಕ್ರಮ ನಿರೂಪಣೆ ಎಂಎ ಪತ್ರಿಕೋದ್ಯಮ ಮತ್ತು ಮಾಸ್ ಮ್ಯೂನಿಕೇಶನ್ ಎರಡನೇ ವರ್ಷದ ವಿದ್ಯಾರ್ಥಿನಿ ಜೆನಿ ಸುಸನ್ ಬಿಜಿ ನಿರ್ವಹಿಸಿದರು. ಧನ್ಯವಾದ ವಂದನೆ ಸಹಾಯಕ ಪ್ರಾಧ್ಯಾಪಕಿ ಅನನ್ಯ ಎನ್‌.ಕೆ. ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಫೋಟೋ ಕ್ಯಾಪ್ಶನ್: ನಗರದ ಸೇಂಟ್ ಪಾಲ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಇಂಡಿಯನ್ ಕಮ್ಯೂನಿಕೇಶನ್ ಕಾಂಗ್ರೆಸ್ ಇದರ ತೃತೀಯ ಸಂಸ್ಥಾಪನಾ ದಿನಾಚರಣೆಯಲ್ಲಿ (ಐಸಿಸಿ) ಕಾರ್ಯನಿರ್ವಹಣಾ ಅಧ್ಯಕ್ಷ ಹಾಗೂ ಕೋಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿರವರು ಮಾತನಾಡಿದರು.

About Mallikarjun

Check Also

ಎಪಿಎಂಸಿ ಆವರಣದಲ್ಲಿ ಭರದಿಂದಸಿದ್ದತೆಗೊಳ್ಳುತ್ತಿರುವ ಸಹಕಾರಿ ಜಾಗೃತ ಸಮಾವೇಶಕಾರ್ಯಕ್ರಮದ ವೇದಿಕೆ,,, ಮುತುವರ್ಜಿವಹಿಸುತ್ತಿರುವಪೋಲಿಸ್ಇಲಾಖೆ,

The platform of Co-operative Vigilance Conference program is being prepared in full swing in APMC …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.