Breaking News

ವಿಷ್ಣುಸೇನಾ ಮಹಾಗಣಪತಿ ಸೇವಾ ಸಮಿತಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Vishnusena Mahaganapati Seva Samiti Voluntary Blood Donation Camp

ಜಾಹೀರಾತು


ಮಾನವಿ:ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ವಿಷ್ಣುಸೇನಾ ಮಹಾಗಣಪತಿ ಸೇವಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ಜರುಗಿತು ಗಣ್ಯರು ಹಾಗು ವೈದ್ಯರು ಮಾತನಾಡಿ ರಕ್ತದಾನ ಮಾಡುವುದರಿಂದ ದೇಹಕ್ಕೆ ಒಳ್ಳೆಯದು ದೇಹದಲ್ಲಿ ಇರುವ ಕೊಲೆಸ್ಟ್ರಾಲ್ ಕಡಿಮೆಯಾಗಿ ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಸಹಾಯವಾಗುತ್ತದೆ. ಅಪಘಾತಕ್ಕೆ ತುತ್ತಾದವರು,ಗರ್ಭಿಣಿಯರು, ಮಕ್ಕಳು ಹಾಗೂ ಥಲೇಸಿನಿಯಾ ರೋಗಿಗಳಿಗೆ ರಕ್ತ ನೀಡುವ ಅವಶ್ಯಕತೆ ಇದ್ದು ಆರೋಗ್ಯವಂತರು ರಕ್ತದಾನ ಮಾಡಲು ಹಿಂಜರಿಯಬಾರದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪರಮಪೂಜ್ಯರಾದ ಶ್ರೀ. ಮ.ನೀ.ಪ್ರ. ಶಾಂತಮಲ್ಲ ಮಹಾಸ್ವಾಮಿಗಳು ಸುಕ್ಷೇತ್ರ ಅಡವಿ ಅಮರೇಶ್ವರ ,ಖ್ಯಾತ ವೈದ್ಯರಾದ ಶ್ರೀ ಡಾ.ಬಿ.ಬಸವರಾಜಪ್ಪ ,ಡಾ.ಗುರು ಶರ್ಮಾ, ಡಾ.ಪ್ರಶಾಂತ ಇಲ್ಲೂರು ,ಡಾ.ನಾರಾಯಣ್ ರಾವ್ ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಹುಚ್ಚಪ್ಪ ಹಾಗೂ ಯುವ ಮುಖಂಡರಾದ ವಿರುಪಾಕ್ಷಿಗೌಡ ,ಅಮರೇಶ ನಾಯಕ್ ರಂಗದಾಳ ,ಆದೇಶಗೌಡ,ಲಿಂಗರಾಜ ತಡಕಲ್, ಸೇರಿದಂತೆ ವಿಷ್ಣುಸೇನಾ ಮಹಾಗಣಪತಿ ಸೇವಾ ಸಮಿತಿಯ ಸರ್ವ ಸದಸ್ಯರು ಮತ್ತು ಗ್ರಾಮದ ಗುರು ಹಿರಿಯರು ಪಾಲ್ಗೊಂಡಿದ್ದರು.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.