
A moving tribute to students who died in an accident at Loyola Institute of Education
ಮಾನ್ವಿ: ಪಟ್ಟಣದ ಲೊಯೋಲ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತರಾದ ಶಾಲೆಯ ವಿದ್ಯಾರ್ಥಿಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಲೊಯೋಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ವಂ. ಫಾ. ಲಿಯೋ ಪೆರೇರಾ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿ ಮಾತನಾಡಿ ರಸ್ತೆ ಅಪಘಾತದಿಂದ ನಮಗೆ ಅತೀವ ದುಃಖವಾಗಿದ್ದು ಅಪಘಾತದಲ್ಲಿ ವಿದ್ಯಾರ್ಥಿಗಳಾದ ಸಮರ್ಥ ಮತ್ತು ಶ್ರೀಕಾಂತ್ ಇಬ್ಬರು ಮಕ್ಕಳನ್ನೂ ಕಳೆದುಕೊಂಡಿದ್ದೇವೆ. ಮಕ್ಕಳ ತಂದೆ ತಾಯಿಗಳ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗೋಣ. ದೇವರು ಪಾಲಕರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಹಾಗೂ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಾಲಾದ ಎಲ್ಲಾ ವಿದ್ಯಾರ್ಥಿಗಳು ಆದಷ್ಟೂ ಬೇಗನೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ವಂ.ಫಾ. ವಿಲ್ಸನ್ ಬೆನ್ನಿಸ್, ವಂ.ಫಾ. ಮ್ಯಾಕ್ಸಿಂ ರಸ್ಕಿನ್ಹಾ, ವಂ.ಫಾ.ಅರುಣ್ ಲೂಯಿಸ್, ವಂ.ಫಾ. ಸಿರಿಲ್ ರಾಜ್,ವಂ. ಫಾ .ವಿನೋದ್ ಪೌಲ್, ಸಿಸ್ಟರ್ ಜೂಲಿಯೆಟ್, ಫಾ. ಪ್ರವೀಣ್ ಕುಮಾರ್, ಫಾ. ಡಾನ್ ಪ್ರೇಮ್ ಲೋಬೋ ಮತ್ತು ಶಾಲೆಯ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.