Ashokaswamy Heroor’s call to take care of health.
ಗಂಗಾವತಿ:ಔಷಧ ವ್ಯಾಪಾರಿಗಳು ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿ ಕೊಳ್ಳುವುದಲ್ಲದೆ, ಸಾರ್ವಜನಿಕರ ಆರೋಗ್ಯವನ್ನು ರಕ್ಷಣೆಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಕರೆ ನೀಡಿದರು.
ವಿಶ್ವ ಹೃದಯ ದಿನವಾದ ಶುಕ್ರವಾರ ನಗರದ ಔಷಧೀಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಔಷಧ ವ್ಯಾಪಾರಿಗಳ ಸಭೆಯನ್ನು ಉದ್ದೇಶಿಸಿ,ಅವರು ಮಾತನಾಡುತ್ತಿದ್ದರು.ಜನರು ದುಷ್ಟಗಳ ದಾಸರಾಗದಂತೆ ನೋಡಿಕೊಳ್ಳಬೇಕಾದ ಕರ್ತವ್ಯವನ್ನು ಔಷಧ ವ್ಯಾಪಾರಿಗಳು ಮರೆಯಬಾರದು,ಅವರಿಗೆ ತಿಳುವಳಿಕೆ ಕೊಡುವ,ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಾಗ್ರತೆ ನೀಡಬೇಕೆಂದು ಸೂಚಿಸಿದರು.
ತಮ್ಮ ಜನ್ಮ ದಿನದಂದು ವಿಶ್ವ ಫ಼ಾರ್ಮಸಿಸ್ಟ ಡೇ ಆಚರಿಸುತ್ತಾ ಬರುತ್ತಿರುವ ಅಶೋಕಸ್ವಾಮಿ ಹೇರೂರ ಅವರಿಗೆ ಹಲವರು ಜನ್ಮ ದಿನದ ಶುಭಾಶಯಗಳನ್ನು ಕೋರಿದರು.ಫ಼ೆಡರೇಶನ್ ಆಫ಼್ ಕರ್ನಾಟಕ ಚೇಂಬರ್ ಆಫ಼್ ಕಾಮರ್ಸ ಈ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಹೇರೂರ ಅವರನ್ನು ಈ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ವಯೋ ನಿವೃತ್ತಿ ಹೊಂದಿದ ಕೊಪ್ಪಳ ಸಂಸದ ಸಂಗಣ್ಣ ಕರಡಿಯವರ ಸರಕಾರಿ ಕಾರ್ಯದರ್ಶಿಗಳಾದ ಶ್ರೀನಿವಾಸ ಜೋಶಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ,ಗೌರವಿಸಲಾಯಿತು.ನಿವೃತ್ತಿ ಗೊಂಡಿದ್ದರೂ ಸಾರ್ವಜನಿಕ ಸೇವೆಯನ್ನು ಮುಂದುವರಿಸಲು ಅಶೋಕಸ್ವಾಮಿ ಹೇರೂರ ಜೋಶಿಯವರನ್ನು ಈ ವಿನಂತಿಸಿದರು.ಇದಕ್ಕೆ ಸಹಮತ ವ್ಯಕ್ತಪಡಿಸಿ, ಜೋಶಿಯವರು ಮಾತನಾಡಿ, ಸಂಸದರೊಂದಿಗೆ ಸೇರಿ
ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುವುದಾಗಿ ಹೇಳಿದರು.
ಪಿಕಾರ್ಡ ಬ್ಯಾಂಕ್ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದ ದೊಡ್ಡಪ್ಪ ದೇಸಾಯಿ, ನಿರ್ದೇಶಕರಾಗಿ ಆಯ್ಕೆಯಾದ ಶರಣೇಗೌಡ ಮಾಲಿ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಜನ್ಮ ದಿನದ ಅಂಗವಾಗಿ ಮತ್ತು ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದ ಅಶೋಕಸ್ವಾಮಿ ಹೇರೂರ ಅವರನ್ನು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಘವೇಂದ್ರ ಶ್ರೇಷ್ಟಿ , ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ, ಮುಂತಾದವರು ಸನ್ಮಾನಿಸಿದರು.
ನಗರ ಸಭಾ ಸದಸ್ಯರಾದ ವಾಸುದೇವ ನವಲಿ,ನವೀನ ಮಾಲಿ ಪಾಟೀಲ್,ಗಂಗಾವತಿ-ಕನಕಗಿರಿ-ಕಾರಟಗಿ ಸಂಯುಕ್ತ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ವೀರಣ್ಣ ಕಾರಂಜಿ,ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ಮಾಲಿ ಪಾಟೀಲ್, ನಿರ್ದೇಶಕ ಪಾಂಡುರಂಗ ಜನಾದ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೊಡ್ಡಪ್ಪ ದೇಸಾಯಿ ಮತ್ತು ಮನೋಹರ ಸ್ವಾಮಿ ಹಿರೇಮಠ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಷ್ಟಗಿ ತಾಲೂಕು ಗ್ರಾಮೀಣ ಔಷಧ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ರಡ್ಡೆರ್ ಮತ್ತು ಖಜಾಂಚಿ ಶ್ರೀಧರ ಹುಲಿಮನಿ ಸೇರಿದಂತೆ ನೂರಕ್ಕೂ ಹೆಚ್ಚು ಔಷಧ ವ್ಯಾಪಾರಿಗಳು ಭಾಗವಹಿಸಿದ್ದರು.